ಕುಡಿವ ನೀರು ಪೂರೈಕೆಗೆ ಗಮನ ಹರಿಸಿ: ಮಲ್ಲಪ್ಪ ಹೊಸ್ಮನಿ
ಕನ್ನಡಪ್ರಭ ವಾರ್ತೆ , ಚಿತ್ತಾಪುರ , ಜೂ.1
ತಾಲೂಕಿನ ಎಲ್ಲ ಗ್ರಾಮಗಳಲ್ಲಿ ನೀರಿನ ತೊಂದರೆಯಾಗದಂತೆ ಅಧಿಕಾರಿ, ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದು ತೆಂಗಳಿ ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಹೊಸ್ಮನಿ ಹೇಳಿದರು.
ತಾಲೂಕಿನ ತೆಂಗಳಿ ಗ್ರಾಪಂ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿವ ನೀರಿಗಾಗಿ ಅಗತ್ಯ ಕ್ರಮಕೈಗೊಳ್ಳಲು ಸಾಕಷ್ಟು ಹಣ ಇದೆ. ನೀರಿನ ತೊಂದರೆಯಿದ್ದಲ್ಲಿ ಹಣ ಬಳಸಿಕೊಳ್ಳಬೇಕು ಎಂದರು.
ತಿಂಗಳಲ್ಲಿ 2 ಲಕ್ಷ ಕರ ಸಂಗ್ರಹ: ನೀರಿನ ಬಗ್ಗೆ ದೂರು ಬರದಂತೆ ನಿಗಾವಹಿಸಿ, ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ವರ್ಷಕ್ಕೆ 9 ಲಕ್ಷ ಕರ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಕೇವಲ ಒಂದು ತಿಂಗಳಲ್ಲಿ 2 ಲಕ್ಷ ಕರ ಸಂಗ್ರಹ ಮಾಡಲಾಗಿದೆ ಎಂದು ಹೇಳಿದರು.
13ನೇ ಹಣಕಾಸು ಯೋಜನೆಯಡಿ 10 ಲಕ್ಷ ಬಿಡುಗಡೆಯಾಗಿದ್ದು, ಜೂ. 10ರಂದು ಗ್ರಾಮಸಭೆ ನಡೆಸಿ ಗ್ರಾಮಗಳಲ್ಲಿ ಕಾಮಗಾರಿಗಳ ಆಯ್ಕೆ ಮಾಡಲು ನಿರ್ಧರಿಸಲಾಯಿತು.
ಉದ್ಯೋಗ ಖಾತ್ರಿ ಯೋಜನೆಯಡಿ ಬಾಕಿ ಇರುವ 10 ಲಕ್ಷ ಬಿಡುಗಡೆ ಮಾಡಬೇಕು. ಕಳೆದ 8 ತಿಂಗಳಿಂದ ನೆನೆಗುದಿಗೆ ಬಿದ್ದ ಇಂದಿರಾ ಯೋಜನೆಯಡಿ ಆಯ್ಕೆಯಾದ 25 ಮನೆಗಳು ಫಲಾನುಭವಿಗಳ ಪಟ್ಟಿಗೆ ಮಂಜೂರಾತಿ ನೀಡುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಉಪಾಧ್ಯಕ್ಷೆ ಮಹಿಮೂದಾಬಿ, ಸದಸ್ಯರಾದ ಬಸವರಾಜ ತುಪ್ಪದ, ಪರಮೇಶ್ವರ ಬೆನಕಿನಪಳ್ಳಿ, ಗಿರಿಮಲ್ಲಪ್ಪ ಭೂಸನ, ಗುರಪ್ಪ ಹಡಪದ, ಮಲ್ಲಿಕಾರ್ಜುನ ನಂದೂರ, ಮಹಿಬೂಬ್ ಪಟೇಲ್ ಬೆಣ್ಣೂರ, ಗುಂಡಪ್ಪ ದಿಗ್ಗಾಂವ, ಭೀಮಾಶಂಕರ ತೊನಸನಳ್ಳಿ, ರಮೇಶ ಆಡಕಿ, ಖಲೀಲ್ ತೊನಸನಳ್ಳಿ, ಪಿಡಿಓ ಕಾವೇರಿ ರಾಠೋಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

