ಸೌಲಭ್ಯ ವಂಚಿತ ಕಡಗಂಚಿ ಬಸ್ ನಿಲ್ದಾಣ
ಕನ್ನಡಪ್ರಭ ವಾರ್ತೆ , ಆಳಂದ , ಜೂ.1
ಕಡಗಂಚಿ ಬಸ್ ನಿಲ್ದಾಣವು ವಾಗ್ದರಿ ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ 10ರ ಮೇಲೆ ಬರುವ ಪ್ರಮುಖ ನಿಲ್ದಾಣವಾಗಿದ್ದರೂ ಅನೇಕ ವರ್ಷಗಳಿಂದಲೂ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಪ್ರಯಾಣಿಕರಿಗೆ ಅನಾನುಕೂಲವಾಗಿದೆ.
ಸುತ್ತ ಮುತ್ತ ಶೌಚಾಲಯ: ಹೆದ್ದಾರಿ ದ್ವಿಪಥವಾಗಿರುವುದರಿಂದ ರಸ್ತೆ ಮೇಲೆ ನಿಲ್ದಾಣ ಕೆಳಗಡೆಯಾಗಿದೆ. ಮಳೆ ಬಂದರೆ ಸಾಕು ನಿಲ್ದಾಣದಲ್ಲಿ ನೀರು ಹರಿದಾಡುತ್ತಿದೆ. ರಾತ್ರಿ ಸಮಯದಲ್ಲಿ ನಿಯಂತ್ರಣಾಧಿಕಾರಿಗಳು ಇರುವುದಿಲ್ಲ. ನಿಲ್ದಾಣ ಒಳಗೆ ಬಸ್ ಬರುವ ಮತ್ತು ಹೋಗುವ ನಾಮಫಲಕ ಇರುವುದಿಲ್ಲ. ಕುಡಿಯುವ ನೀರಂತೂ ಮೊದಲೇ ಇಲ್ಲ. ಶೌಚಾಲಯ ಇದ್ದರೂ ಲಾಕ್ ಮಾಡಿದ್ದಾರೆ. ಹೀಗಾಗಿ ಪ್ರಯಾಣಿಕರು ನಿಲ್ದಾಣದ ಸುತ್ತ ಮುತ್ತ ಶೌಚಾಲಯ ಮತ್ತು ಮೂತ್ರಾಲಯ ಕೈಗೊಳ್ಳುತ್ತಿದ್ದು, ಇದರಿಂದ ಗಬ್ಬುವಾಸನೆ ಬರುತ್ತಿದೆ.
ಕೆಲವು ಬಸ್ಗಳು ನಿಲ್ದಾಣದ ಒಳಗೆ ಬಂದರೆ ಇನ್ನು ಕೆಲವು ಹೆದ್ದಾರಿಯ ಮೇಲೆ ನಿಂತು ಹೋಗುತ್ತವೆ. ಹೀಗಾಗಿ ಪ್ರಯಾಣಿಕರ ಅಲೆದಾಟ ತಪ್ಪುತ್ತಿಲ್ಲ. ಕರ್ನಾಟಕ, ಮಹಾರಾಷ್ಟ್ರ ಸಾರಿಗೆ ಬಸ್ ಸೇರಿ ನೂರಕ್ಕೂ ಹೆಚ್ಚು ಬಸ್ಗಳು ಹಾದು ಸಂಚರಿಸುತ್ತಿವೆ.
ಪ್ಯಾಕೇಟ್ ನೀರೇ ಗತಿ: ತಾಲೂಕಿನಲ್ಲಿಯೇ ಪ್ರಮುಖ ನಿಲ್ದಾಣವಾದರು ಹೇಳಿಕೊಳ್ಳುವಂತ ಸೌಕರ್ಯಗಳು ಪ್ರಯಾಣಿಕರಿಗೆ ಸಿಗುತ್ತಿಲ್ಲ. ಮಳೆಗಾಲದಲ್ಲಿ ಮಳೆಕಾಟ, ಚಳಿಗಾಲ ಶುರುವಾದರೇ ಕೆಟ್ಟವಾಸನೆ ವಿಪರೀತ, ಬೇಸಿಗೆ ಕಾಲದಲ್ಲಿ ನೀರಿಲ್ಲದಕ್ಕೆ ನಿಲ್ದಾಣದೊಳಗೆ ಚಿಕ್ಕ ಮಕ್ಕಳು ಮಾರುವ ಪ್ಯಾಕೇಟ್ ನೀರೇ ಗತಿಯಾಗಿದೆ. ನಿಲ್ದಾಣಕ್ಕೆ ಸೌಲಭ್ಯಗಳಿಗಾಗಿ ಅನೇಕ ಸಲ ಹೋರಾಟ ಮಾಡಿದರೂ ಪ್ರಯೋಜವಾಗಿಲ್ಲ ಎಂದು ಗ್ರಾಮದ ಯುವಕ ಪ್ರಮೋದ ಡೋಣಿ ದೂರಿದ್ದಾರೆ.
ಈ ನಿಲ್ದಾಣ ನರೋಣಾ ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೂ ಕೇಂದ್ರ ಸ್ಥಾನವಾಗಿರುವುದರಿಂದ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಯಾಗಿರುವುದರಿಂದ ಇನ್ನಾದರೂ ಸಂಬಂಧಿಸಿದ ಸಾರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಈ ಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

