ಗುಲ್ಬರ್ಗಾ

30ರೊಳಗೆ ಮದ್ಯ ಮಾರಾಟದ ಪರವಾನಗಿ ನವೀಕರಿಸಿ: ಬಾಲಕೃಷ್ಣ

Published On :

ಕನ್ನಡಪ್ರಭ ವಾರ್ತೆ ,   ಚಿಂಚೋಳಿ ,   ಜೂ.1
ತಾಲೂಕಿನಲ್ಲಿ ಮದ್ಯ ಮಾರಾಟ ಮಾಡುವ ಎಲ್ಲ ಸನ್ನದುದಾರರು ಜೂನ್ 30ರೊಳಗೆ ಮದ್ಯ ಮಾರಾಟದ ಪರವಾನಗಿಯನ್ನು ನವೀಕರಿಸಬೇಕು ಎಂದು ತಾಲೂಕು ಅಬಕಾರಿ ನಿರೀಕ್ಷಕ ಬಾಲಕೃಷ್ಣ ಮುದುಕಣ್ಣ ತಿಳಿಸಿದರು.
ಚಂದಾಪುರ ನಗರದ ಅಬಕಾರಿ ಇಲಾಖೆಯಲ್ಲಿ ಇತ್ತೀಚೆಗೆ ತಾಲೂಕು ಮದ್ಯ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಎಲ್ಲ 18 ಮದ್ಯ ಮಾರಾಟ ಅಂಗಡಿಗಳ ಮಾಲೀಕರು ತಮ್ಮ ಪರವಾನಗಿಯನ್ನು ಜೂನ್ 30ರೊಳಗೆ ಸರ್ಕಾರದ ಶುಲ್ಕವನ್ನು ಭರಿಸಿ ನವೀಕರಿಸಿಕೊಳ್ಳಬೇಕು ಜತೆಗೆ ಪಾನ್‌ಕಾರ್ಡ್, ಸರಿಯಾದ ವಿಳಾಸ, ವಾಣಿಜ್ಯ ತೆರಿಗೆ ಪಾವತಿಸಿದ ದಾಖಲೆ ಪತ್ರಗಳು, ಪಾಲುದಾರಿಕೆ ಪತ್ರ ಹಾಜರುಪಡಿಸಬೇಕು ಎಂದು ತಿಳಿಸಿದರು.
2012-13ನೇ ಸಾಲಿನಲ್ಲಿ ಮೇ ತಿಂಗಳಲ್ಲಿ 1,55,179 ಮದ್ಯದ ಪೆಟ್ಟಿಗೆಯನ್ನು ಮಾರಾಟ ಮಾಡುವ ಗುರಿಯನ್ನು ನೀಡಲಾಗಿತ್ತು. ಅದರಲ್ಲಿ 1,54,288 ಪೆಟ್ಟಿಗೆಯನ್ನು ಮಾರಾಟ ಮಾಡಿ ಸಾಧನೆ ಮಾಡಲಾಗಿದೆ.  ಚಿಂಚೋಳಿ ವಾರ್ಷಿಕ ಗುರಿ 1,83,169 ಪೆಟ್ಟಿಗೆ ಮಾರಾಟ ಗುರಿ ಹೊಂದಿದ್ದು, ಮೇ ಅಂತ್ಯದವರೆಗೆ 2,47 ಕೋಟಿ ರು. ಆದಾಯ ಬಂದಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.