ಗುಲ್ಬರ್ಗಾ

ಪಪಂ.ಯಲ್ಲಿ ಮೀಸಲಾತಿ ಲೆಕ್ಕಾಚಾರ

Published On :

ಕನ್ನಡಪ್ರಭ ವಾರ್ತೆ ,   ಚಿಂಚೋಳಿ ,   ಜೂ.1
ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದ ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಇತ್ತ ಸ್ಥಳೀಯ ಪಟ್ಟಣ ಪಂಚಾಯ್ತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಬಗ್ಗೆ ಪಪಂ ಯಾವ ವರ್ಗಕ್ಕೆ ಮೀಸಲಾತಿ ಪ್ರಕಟಗೊಳ್ಳಲಿದೆ ಎಂಬ ಲೆಕ್ಕಾಚಾರ ಪಪಂ ನೂತನ ಸದಸ್ಯರಲ್ಲಿ ಪ್ರಾರಂಭಗೊಂಡಿದೆ.
ಸ್ಥಳೀಯ ಪಪಂ 18 ಸ್ಥಾನಗಳಿಗೆ ಮಾರ್ಚ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್- 10, ಕೆಜೆಪಿ- 6 ಮತ್ತು ಪಕ್ಷೇತರ- 2 ಸ್ಥಾನಗಳಲ್ಲಿ ಆಯ್ಕೆಗೊಂಡಿದ್ದಾರೆ. ನೂತನ ಅಧ್ಯಕ್ಷ ಸ್ಥಾನಗಳು ಮಹಿಳೆಯರಿಗೆ ಮೀಸಲಾತಿ ಪ್ರಕಟವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಎಸ್‌ಸಿ(ಮಹಿಳೆ), ಎಸ್‌ಟಿ(ಮಹಿಳೆ), ಹಿಂದುಳಿದ ವರ್ಗ- ಬ(ಮಹಿಳೆ) ಮತ್ತು ಹಿಂದುಳಿದ ವರ್ಗ(ಸಿ) ಮಹಿಳೆಗೆ ಮೀಸಲಾತಿ ಬರಬಹುದೆಂದು ನಿರೀಕ್ಷಿಸಲಾಗುತ್ತಿದೆ. ಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ನರಸಮ್ಮ ವಿಜಯಕುಮಾರ ಗಂಗನಪಳ್ಳಿ, ಇಂದುಮತಿ ಮನೋಹರ, ಎಸ್‌ಟಿ(ಮಹಿಳೆ) ಸ್ಥಾನಕ್ಕೆ ಶ್ರೀದೇವಿ ಮಲಕಪ್ಪ ಬೀರಾಪುರ ಮತ್ತು ಹಿಂದುಳಿದ ವರ್ಗ(ಬ) ಸ್ಥಾನಕ್ಕೆ ಇಂದುಮತಿ ಶಿವನಾಗಯ್ಯಸ್ವಾಮಿ ಮತ್ತು ಮಲ್ಲೇಶ್ವರಿ ಜಾಬಶೆಟ್ಟಿ ಇನ್ನು ಬಿಸಿಎ ಮಹಿಳೆ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದರೆ, ವಿದ್ಯಾವತಿ ನರಸಪ್ಪ ಗಾಲಿ ಮತ್ತು ಫರ್ಜಾನಾ ಮಸೂದ್ ಸೌದಾಗರ ಮುಂತಾದವರಲ್ಲಿ ಪೈಪೋಟಿ ನಡೆಯುವ ಸಾಧ್ಯತೆಗಳಿವೆ.
'ಕೂಸು ಹುಟ್ಟುವ ಮುಂಚೆಯೇ ಕುಲಾಯಿ ಹೊಲಿಸಿದರಂತೆ' ಎಂಬ ಗಾದೆಯಂತೆ ಪಪಂ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಗೆ ನೂತನ ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಪತ್ನಿಯರಿಗೆ ನೀಡಬೇಕು ಎಂದು ಬೆಂಗಳೂರಿನಲ್ಲಿ ಶಾಸಕ ಡಾ. ಉಮೇಶ ಜಾಧವ ಅವರನ್ನು ಭೇಟಿ ಮಾಡಿ ಒತ್ತಡ ಹೇರುತ್ತಿದ್ದಾರೆ.
ಎಲ್ಲರ ನಿರೀಕ್ಷೆಯಂತೆ ಮೊದಲ ಅವಧಿಯಲ್ಲಿ ಪರಿಶಿಷ್ಟ ಜಾತಿ(ಮಹಿಳೆ) ಸ್ಥಾನ ಪ್ರಕಟವಾಗಲಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿವೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಪಪಂ ಸದಸ್ಯೆ ನರಸಮ್ಮ ವಿಜಯಕುಮಾರ ಗಂಗನಪಳ್ಳಿ ಮತ್ತು ಇಂದುಮತಿ ಮನೋಹರ ದೇಗಲಮಡಿ ಇವರ ಮಧ್ಯೆ ಭಾರಿ ಪೈಪೋಟಿ ಶುರುವಾಗಿದೆ.
ಸದ್ಯ ಪಪಂ ಅಧ್ಯಕ್ಷ/ ಉಪಾಧ್ಯಕ್ಷ ಸ್ಥಾನಗಳು ಯಾವ ವರ್ಗಗಳಿಗೆ ಮೀಸಲಾತಿ ನಿಗದಿಪಡಿಸಲಾಗುವುದೆಂಬ ಲೆಕ್ಕಾಚಾರ ಚರ್ಚೆ ನಡೆಯುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.