ಎಸ್ಬಿಎಂನಿಂದ 10 ಫ್ಯಾನ್ ದೇಣಿಗೆ
ಶಹಾಪುರ: ಸ್ಥಳೀಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆ ವತಿಯಿಂದ ತಾಲೂಕಿನ ಕನ್ಯಕೋಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ 10 ಸೀಲಿಂಗ್ ಫ್ಯಾನ್‌ಗಳನ್ನು ದೇಣಿಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕ ಮಧುಸೂದನರಡ್ಡಿ ಮಾತನಾಡಿ, ಸಾಮುದಾಯಿಕ ಸಹಭಾಗಿತ್ವ ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕಾಗಿ ಅದರಲ್ಲಿಯೂ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಸಹಕಾರ ನೀಡುವುದು ಸಾರ್ಥಕವಾದ ಸೇವೆಯ ಭಾಗವಾಗಿದೆ ಎಂದರು. ಫ್ಯಾನ್‌ಗಳ ದೇಣಿಗೆ ಸ್ವೀಕರಿಸಿದ ಶಾಲೆಯ ಮುಖ್ಯಗುರು ವೀರಣ್ಣಾ ಮಾತನಾಡಿ, ಕನ್ಯಕೋಳೂರ ಗ್ರಾಮದ ಶಾಲೆಯನ್ನು ಗುರುತಿಸಿ ದೇಣಿಗೆ ನೀಡಿರುವ ಬ್ಯಾಂಕಿನ ವೈಖರಿ ಮೆಚ್ಚುವಂಥದ್ದಾಗಿದೆ. ಶೈಕ್ಷಣಿಕ ಸುಧಾರಣೆಗೆ ಸಮುದಾಯ ಕೈಜೋಡಿಸಿದರೆ ಅನುಕೂಲವಾಗುತ್ತದೆ. ಆದ್ದರಿಂದ ಬ್ಯಾಂಕಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ವಿದ್ಯುತ್ ಮಗ್ಗ ಒದಗಿಸಲು ಅರ್ಜಿ
ಯಾದಗಿರಿ: ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಕೈಮಗ್ಗ ನೇಕಾರರಿಗೆ ವಿದ್ಯುತ್ ಮಗ್ಗಗಳನ್ನು ಒದಗಿಸುವ ಯೋಜನೆಯಡಿ ನೇಕಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ನೇಕಾರರು ಕೈಮಗ್ಗ ನೇಯ್ಗೆ ವೃತ್ತಿಯಿಂದ ವಿದ್ಯುತ್ ಮಗ್ಗ ನೇಯ್ಗೆ ವೃತ್ತಿಗೆ ಬದಲಾವಣೆ ಹೊಂದಬಯಸುವ ನೇಕಾರರಿಗೆ ಆದ್ಯತೆ ನೀಡಲಾಗುವುದು. ಫಲಾನುಭವಿಯು ಜಿಲ್ಲೆ ವ್ಯಾಪ್ತಿಯ ನಿವಾಸಿಯಾಗಿರಬೇಕು. ನೇಯ್ಗೆ ವೃತ್ತಿಯನ್ನು ತಿಳಿದಿದ್ದು, ವಿದ್ಯುತ್ ಮಗ್ಗ ರಹಿತ ಕೂಲಿ ನೇಯ್ಗೆ ವೃತ್ತಿಯನ್ನು ತಿಳಿದಿರಬೇಕು. ನಿಯಮಾನುಸಾರ ಫಲಾನುಭವಿ ಆಯ್ಕೆ ಮಾಡಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಜೂ.30ರೊಳಗಾಗಿ ಸಲ್ಲಿಸಬೇಕು. ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಸಿಎಂಸಿ ಕಾಂಪ್ಲೆಕ್ಸ್, ಚಿತ್ತಾಪುರ ರಸ್ತೆ, ಯಾದಗಿರಿ ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ನೀರು ಸರಬರಾಜು ವ್ಯತ್ಯಯ
ಸುರಪುರ: ಶೆಳ್ಳಗಿ ಜಾಕವೆಲ್‌ನಿಂದ ಪಟ್ಟಣದವರೆಗೆ ನೀರು ಸರಬರಾಜು ಮಾಡುವ ಪೈಪ್‌ಗಳು ಕೆಲ ಕಡೆ ಒಡೆದು ಸೋರಿಕೆಯಾಗುತ್ತಿದೆ. ಸೋರಿಕೆಯನ್ನು ಬಂದ್ ಮಾಡುವ ಕೆಲಸ ಈಗಾಗಲೇ ನಡೆದಿದೆ. ಎರಡು ಮೂರು ದಿನಗಳಲ್ಲಿ ದುರಸ್ತಿ ಕಾರ್ಯ ಸಂಪೂರ್ಣ ಮುಗಿಯುವ ಸಾಧ್ಯತೆ ಇದೆ. ಆದ್ದರಿಂದ ಜೂ.5ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ನಾಗರಿಕರು ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಶಿವುಕುಮಾರ ಹಿರೇಮಠ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

