ವಕ್ಫ್ ಆಸ್ತ್ತಿಯನ್ನೇ ಖರೀದಿಸಿದ ಖಮರುಲ್ ಇಸ್ಲಾಂ: ಮಾಜಿ ಸಚಿವ ಕಾಂತಾ ಆರೋಪ
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಜೂ.5
ವಕ್ಫ್ ಸಚಿವ ಖಮರುಲ್ ಇಸ್ಲಾಂ 2009ರಲ್ಲಿ ಪತ್ನಿ ಕನೀಸ್ ಫಾತೀಮಾ ಹೆಸರಲ್ಲಿ ವಕ್ಫ್ ಆಸ್ತಿ ಎಂದು ಗುರುತಿಸಲ್ಪಟ್ಟ ಶೇಖ ರೋಜಾ ಪ್ರದೇಶದ ಸರ್ವೆ ನಂ.13ರಲ್ಲಿ 1.10 ಎಕರೆ ಭೂಮಿ ಖರೀದಿಸಿದ್ದಾರೆ. ವಕ್ಫ್ ಆಸ್ತಿಯನ್ನೇ ಖರೀದಿಸಿರುವವರು ಕಾಂಗ್ರೆಸ್ ಸರ್ಕಾರದಲ್ಲಿ ವಕ್ಫ್ ಖಾತೆ ಮಂತ್ರಿಯಾಗಿದ್ದಾರೆ ಎಂದು ಹೋರಾಟಗಾರ, ಮಾಜಿ ಮಂತ್ರಿ ಎಸ್.ಕೆ. ಕಾಂತಾ ಟೀಕಿಸಿದರು. ಮಾರುಕಟ್ಟೆ ಮೌಲ್ಯ ಬಹುಕೋಟಿ ರುಪಾಯಿ ಆಗಿರುವ ಈ ಭೂಮಿಯನ್ನು ಖಮರುಲ್ 42,540 ಕ್ಕೆ ಡಾ. ಜುನೈದಿ ಎಂಬುವವರಿಂದ ಖಮರುಲ್ ಇಸ್ಲಾಂ ತಮ್ಮ ಪತ್ನಿ ಹೆಸರಲ್ಲಿ ಖರೀಸಿದ್ದಾರೆ. ವಕ್ಫ್ ಆಸ್ತಿಯ ಮೇಲೆ ಕಣ್ಣಿಟ್ಟು, ಆಸ್ತಿ ಕಬಳಿಕೆಗೆ ಸಂಚು ರೂಪಿಸುತ್ತಿರುವ ಇಂಥವರು ಕಳಂಕಿತಲ್ಲವೇ ಎಂದು ಕಾಂತಾ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಸ್ನಿಸಿದರು.
ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ ಮಣಿಪ್ಪಾಡಿ ರಾಜ್ಯ ಸರ್ಕಾರಕ್ಕೆ ನೀಡಿರುವ ವರದಿ, ಗುಲ್ಬರ್ಗ ಪ್ರಾದೇಶಿಕ ಆಯುಕ್ತರಾಗಿದ್ದ ರಜನೀಶ್ ಗೋಯಲ್ ಗುಲ್ಬರ್ಗ ಹಾಗೂ ಸುತ್ತಮುತ್ತಲಿನ ವಕ್ಫ್ ಆಸ್ತಿಗಳ ಒತ್ತುವರಿ ಕುರಿತಂತೆ ಸಿದ್ಧಪಡಿಸಿರುವ ವರದಿಗಳೆರಡರಲ್ಲೂ ಈ ಖರೀದಿ ಪ್ರಕರಣ ನಮೂದಾಗಿದೆ. ವಕ್ಫ್ ಆಸ್ತಿ ಎಂದು ಪಟ್ಟಿ ಮಾಡಿರುವ ಭೂಮಿಯನ್ನೇ ಖರೀದಿಸಿದವರಿಂದ ಅದ್ಹೇಗೆ ವಕ್ಫ್ ಆಸ್ತಿ-ಪಾಸ್ತಿ ಸಂರಕ್ಷಿಸಲು ಸಾಧ್ಯ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

