ಗುಲ್ಬರ್ಗಾ

ತುರ್ತು ಆರೋಗ್ಯ ಸೇವೆಗೆ ಸಮಸ್ಯೆ

Published On :

ಯಾದಗಿರಿ: 108ಕ್ಕೆ ಕರೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಹಾಜರಾಗಿ ತುರ್ತು ಆರೋಗ್ಯ ಸೇವೆ ಒದಗಿಸುತ್ತಿದ್ದ ಆ್ಯಂಬುಲನ್ಸ್ ಇಲ್ಲಿ ಕಾಲು ಕಳೆದುಕೊಂಡಂತಾಗಿದೆ. ಇಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ ನಿಂತಿರುವ ಈ ತುರ್ತು ವಾಹನಕ್ಕೀಗ ತುರ್ತು ಚಿಕಿತ್ಸೆಯ ಅಗತ್ಯವಿದೆ.
  ಜಿಲ್ಲೆಯಲ್ಲಿ ಒಟ್ಟು 9 ತುರ್ತು ಸೇವೆ ನೀಡುವ ಆರೋಗ್ಯ ಕವಚ ವಾಹನಗಳಿವೆ. ಜಿಲ್ಲಾ ಆಸ್ಪತ್ರೆಗೆಂದೇ ಇರಿಸಲಾಗಿರುವ ವಾಹನಕ್ಕೆ ಟೈರ್‌ಗಳಿಲ್ಲದೆ ಆರು ತಿಂಗಳುಗಳೇ ಕಳೆದಿವೆ ಎನ್ನಲಾಗುತ್ತಿದ್ದು, ಅದೇ ಹಳೆಯ ಟೈರ್‌ಗಳನ್ನೇ ಮತ್ತೆಮತ್ತೆ ಬದಲಾಯಿಸಿ ಓಡಿಸಲಾಗುತ್ತಿದೆ.ಆದರೆ ಬುಧವಾರ ಮಾತ್ರ ಈ ವಾಹನದ ಚಕ್ರ ಸಂಪೂರ್ಣ ಹಾಳಾಗಿ ಕಿತ್ತು ಹೋಗಿದೆ. ಆದರೂ ಸಿಬ್ಬಂದಿ ಯಾದಗಿರಿಗೆ ಸಮೀಪದ ಗ್ರಾಮವೊಂದರಿಂದ ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಮಾರ್ಗ ಮಧ್ಯೆ ಟೈರ್ ಒಡೆದು ಹೋಗಿದೆ. ನಂತರ ಆ ಗರ್ಭಿಣಿಯನ್ನು ಬೇರೆ ವಾಹನದಲ್ಲಿ ಕರೆದುಕೊಂಡು ಹೋಗುತ್ತಿರುವಷ್ಟರಲ್ಲಿಯೇ ಹೆರಿಗೆಯಾಗಿದೆ. ಟೈರ್ ಹಾಕಲೂ ಸರ್ಕಾರ ಬಡವಾಗಿದೆಯೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.
  ಹೀಗಾದರೆ ತುರ್ತು ಸಂದರ್ಭದಲ್ಲಿ ಏನು ಮಾಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಸೂಕ್ತ ನಿರ್ವಹಣೆ ಇಲ್ಲದೇ ಜಿಲ್ಲೆಯಲ್ಲಿನ ಇತರ ಅನೇಕ 108 ವಾಹನಗಳ ಗತಿಯೂ ಇದೇ ರೀತಿ ಎನ್ನಲಾಗಿದೆ. ಸದ್ಯ ಜಿಲ್ಲಾ ಆಸ್ಪತ್ರೆಗೆ ತುರ್ತು ಸೇವೆ ನೀಡಲು 108 ಲಭ್ಯ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಗಮನ ನೀಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.