ಕನ್ನಡಪ್ರಭ ವಾರ್ತೆ ಚಿಂಚೋಳಿ ಜೂ.7
ಗುಲ್ಬರ್ಗ ಮತ್ತು ಧಾರವಾಡಕ್ಕೆ ಸಂಚಾರಿ ಹೈಕೋರ್ಟ್ ಪೀಠಗಳನ್ನು ಕಾಯಂ ಮಾಡಬೇಕೆಂಬ ಬಹುದಿನಗಳ ಬೇಡಿಕೆಗೆ ಈಡೇರಿಸಿದ್ದಕ್ಕಾಗಿ ಪಟ್ಟಣದ ನ್ಯಾಯಾಲಯದ ನ್ಯಾಯವಾದಿಗಳು ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿಕೊಂಡು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಹಿರಿಯ ನ್ಯಾಯವಾದಿ ಸಿ.ವಿ. ದೇಶಮುಖ ಮಾತನಾಡಿ, ಹಲವು ದಶಕಗಳಿಂದ ವಕೀಲರು ಮತ್ತು ಹೈ.ಕ.ಪ್ರದೇಶದ ಸಾರ್ವಜನಿಕರು ನಡೆಸಿದ ಹೋರಾಟದ ಫಲವಾಗಿ ನಮ್ಮ ಕನಸು ನನಸಾಗಿದೆ. ಹೈಕೋರ್ಟ್‌ನಲ್ಲಿ ಕಕ್ಷಿದಾರರಿಗೆ ಮೇಲ್ಮನವಿ ಸಲ್ಲಿಸಬೇಕಾದರೆ ಬೆಂಗಳೂರಿಗೆ ಹೋಗಬೇಕಾಗುತ್ತಿತ್ತು. ಗುಲ್ಬರ್ಗ ಸಂಚಾರಿ ಪೀಠ ಸ್ಥಾಪನೆಗೆ ಬೆಂಗಳೂರಿನ ವಕೀಲರು ಅನೇಕ ಸಲ ವಿರೋಧ ವ್ಯಕ್ತಪಡಿಸಿದರೂ, ಸಹ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಕೊಳ್ಳುವ ಮೂಲಕ ಹಿಂದುಳಿದ ಪ್ರದೇಶಕ್ಕೆ ನ್ಯಾಯ ನೀಡಿದೆ ಎಂದರು.
ಸಂತಸ: ಕಾಂಗ್ರೆಸ್ ಯುವ ಮುಖಂಡ ಕೆ.ಎಂ. ಬಾರಿ ಮಾತನಾಡಿ, ಸೋನಿಯಾಗಾಂಧಿ, ಪ್ರಧಾನಮಂತ್ರಿ ಡಾ. ಮನಮೋಹನಸಿಂಗ್, ಕೇಂದ್ರ ಕಾರ್ಮಿಕ ಮಂತ್ರಿ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್ ಹಿಂದುಳಿದ ಪ್ರದೇಶ ಕಕ್ಷಿದಾರರಿಗೆ ಅನುಕೂಲವಾಗಲೆಂದು ಗುಲ್ಬರ್ಗ ಮತ್ತು ಧಾರವಾಡಕ್ಕೆ ಸಂಚಾರಿ ಹೈಕೋರ್ಟ್ ಪೀಠಗಳನ್ನು ಕಾಯಂಗೊಳಿಸಿದ್ದು ಸಂತಸವಾಗಿದೆ ಎಂದರು.
ಹಿರಿಯ ವಕೀಲ ಶಿವಶರಣಪ್ಪ ಜಾಪಟ್ಟಿ, ನ್ಯಾಯವಾದಿಗಳಾದ ಬಸವರಾಜ ಗಿರಿ, ವಿಶ್ವನಾಥ ಬೆನಕಿನ್, ಮಾಣಿಕರಾವ್ ಗುಲಗುಂಜಿ, ಶಂಕರ ರಾಠೋಡ, ಮಾಣಿಕರಾವ ಗುಲಗುಂಜಿ, ಬಸವರಾಜ ಠಾಕೂರ, ರಾಜೇಂದ್ರ ವರ್ಮಾ, ಸುಭಾಷ ಕಳಸ್ಕರ್, ಜಗನ್ನಾಥ ಅಗ್ನಿಹೋತ್ರಿ, ವಿಜಯಕುಮಾರ ರಾಠೋಡ, ವಸಂತಕುಮಾರ ರಾಠೋಡ, ನೀಲಕಂಠ ರಾಠೋಡ, ಶೆಟ್ಟಿ ಜಾಧವ, ಹಣಮಂತ ಹಿರೇಮನಿ, ಗುಂಡಪ್ಪ ಗೋಖಲೆ, ಮಲ್ಲಿಕಾರ್ಜುನ ಸುಂಕದ, ಪಪಂ ಸದಸ್ಯರಾದ ಅಬ್ದುಲ್ ಬಾಸೀತ, ರಾಮಶೆಟ್ಟಿ ಪವಾರ, ಕೃಷಿಕ ಸಮಾಜ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ, ಸಂಗಯ್ಯ ಸ್ವಾಮಿ ಇತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

