ಗುಲ್ಬರ್ಗಾ

ಶೋಷಿತರ ಹೋರಾಟದಲ್ಲಿ ಒಗ್ಗಟ್ಟಿರಲಿ

Published On :

ಶಹಾಪುರ: ಶೋಷಿತ ಸಮುದಾಯಗಳಿಗೆ ಜೀವ ತುಂಬುವ ಪ್ರಯತ್ನಗಳಿಗೆ ಹಿಂದೇಟು ಬೀಳುತ್ತಿದ್ದು, ಇಂಥ ನಿರಾಸಕ್ತಿದಾಯಕ ಸಮುದಾಯಗಳ ಸಮೃದ್ಧಿಯಾಗಬೇಕಾದರೆ ಹಂಚಿಹೋದ ಹೋರಾಟಗಳು ಒಗ್ಗೂಡಲಿ ಎಂದು ಬೆಂಗಳೂರಿನ ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಕರೆ ನೀಡಿದರು.
  ಶಹಾಪುರ ಕೆಎಸ್‌ಆರ್‌ಟಿಸಿ ಎಸ್‌ಸಿ ಮತ್ತು ಎಸ್‌ಟಿ ನೌಕರರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 122ನೇ ಜಯಂತಿ ಆಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
  ಹೊಸ ಸಮಾಜ ನಿರ್ಮಾಣದ ಸಂಕಲ್ಪ ಮಾಡಬೇಕಾಗಿದ್ದು, ಡಾ. ಅಂಬೇಡ್ಕರ್ ಅವರ ತತ್ವಾದರ್ಶಗಳು ಸಕಲ ಸಮಾಜದ ಮನೆ ಮಾತಾಗಬೇಕು. ದೇಶದ ಮಾಹಾನ್ ನಾಯಕರ, ಶರಣರ ಹೆಸರುಗಳಲ್ಲಿ ಗೌರವ ಭಾವನೆ ಹೊಂದಿ ಬದಲಾವಣೆಯತ್ತ ಸಾಗಬೇಕು. ಮಾಹಾತ್ಮ ಗೌತಮ ಬುದ್ಧ ಹೇಳಿದಂತೆ ಸನ್ಮಾರ್ಗದತ್ತ ಸಾಗಿದಲ್ಲಿ ದೇಶದಲ್ಲಿ ಕ್ರಾಂತಿಯಾಗುತ್ತದೆ ಎಂದು ಹೇಳಿದರು.
  ಅತಿಥಿಗಳಾಗಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ವ್ಯವಸ್ಥಾಪಕ ನಿರ್ದೇಶಕ ಜಿ.ಎಸ್. ಶಿವಮೂರ್ತಿ, ಭಾರತ ಸರ್ಕಾರದ ಡಾ. ಅಂಬೇಡ್ಕರ್ ಪ್ರತಿಷ್ಠಾನ ಸಮಿತಿ, ಸಾಮಾಜಿಕ ನ್ಯಾಯ ಸಮಿತಿ ಉಪಾಧ್ಯಕ್ಷ ಎಫ್.ಎಚ್. ಜಕಪ್ಪನವರ್, ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಟಿ. ಮುನಿಯಲ್ಲಪ್ಪ, ಯಾದಗಿರಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಚ್. ಸಂತೋಷಕುಮಾರ, ಗುಲ್ಬರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎಚ್. ನಾಗೇಶ, ಸಾರಿಗೆ ಇಲಾಖೆಯ ಈಶಾನ್ಯ ವಲಯ ಕಾರ್ಯಾಧ್ಯಕ್ಷ ಕೆ. ಮಲ್ಲಿಕಾರ್ಜುನ, ಗಣಪತಿ ಗೋಳಾ, ಬುದ್ಧಗೋಷ ದೇವಿಂದ್ರ ಹೆಗಡೆ, ಜಿಲ್ಲಾ ಸಂಚಾಲಕರಾದ ಮಲ್ಲಿಕಾರ್ಜುನ ಕ್ರಾಂತಿ, ಚಂದ್ರು ಚಕ್ರವರ್ತಿ, ನಾಗಣ್ಣ ಬಡಿಗೇರ, ಭೀಮರಾಯ ಹೊಸಮನಿ, ವಸಂತ ಸುರುಪುರ  ಇತರರಿದ್ದರು.
  ದಲಿತ ಮುಖಂಡರಾದ ನೀಲಕಂಠ ಬಡಿಗೇರ ಕ್ರಾಂತಿ ಗೀತೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಮಾನಯ್ಯ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಕಣ್ಣಿ ಸ್ವಾಗತಿಸಿದರು. ರಾಮು ವಂದಿಸಿದರು. ನಿಜಪ್ಪ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.