ಗುಲ್ಬರ್ಗಾ

ಎಚ್ಚರಿಕೆ ನಡುವೆಯೇ ಭರ್ಜರಿ ಮಾರಾಟ...

Published On :

ಕನ್ನಡಪ್ರಭ ವಾರ್ತೆ, ಆಳಂದ, ಜೂ.10
ಪಟ್ಟಣದ ವಿವಿಧ ಕಿರಾಣಿ ಅಂಗಡಿ, ಪಾನ್ ಡಬ್ಬಾ, ಹೊಟೇಲ್ ಮತ್ತಿತರ ಕಡೆ ಹಠಾತ್ ದಾಳಿ ನಡೆಸಿದ ಸ್ಥಳೀಯ ಪುರಸಭೆ ಅಧಿಕಾರಿಗಳು ವಿವಿಧ ರೀತಿಯ ತೂಗು ಹಾಕಿದ ಗುಟ್ಕಾ ಪೌಚ್‌ಗಳ ಜಪ್ತಿ ಕಾರ್ಯವನ್ನು ಕಳೆದೆರಡು ದಿನಗಳಿಂದ ಆರಂಭಿಸಿದ್ದಾರೆ.
ರಾಜ್ಯದಲ್ಲಿ ಗುಟ್ಕಾ ಮಾರಾಟ ನಿಷೇಧಿಸಿ ಸರ್ಕಾರ ಸುತ್ತೊಲೆ ಹೊರಡಿಸಿದ ಹಿನ್ನೆಯಲ್ಲಿ ಜಿಲ್ಲಾಧಿಕಾರಿ ನೀಡಿದ ಆದೇಶದನ್ವಯ ಪುರಸಭೆ ಸಹಾಯಕ ಅಧಿಕಾರಿ ಧರ್ಮಲಿಂಗ ಜಗದೇ ನೇತೃತ್ವದ ಸಿಬ್ಬಂದಿ ತಂಡವು ಹಠಾತ್ ದಾಳಿ ನಡೆಸಿ, ಸಾವಿರಾರು ರುಪಾಯಿ ಗುಟ್ಕಾ ಪೌಚ್‌ಗಳನ್ನು ವಶಪಡಿಸಿಕೊಂಡು ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
20 ಸಾವಿರ ಮೌಲ್ಯದ ಗುಟ್ಕಾ ಜಪ್ತಿ: ಆದಾಗ್ಯೂ ತೆರೆಮರೆಯಲ್ಲಿ ಮಾರಾಟ ಹೆಚ್ಚುತೊಡಗಿದೆ ಎನ್ನುತ್ತಾರೆ ಗುಟ್ಕಾ ವೆಸನಿಗಳು. ಪಟ್ಟಣದ ಪುರಸಭೆ ಕಚೇರಿ, ತಹಸೀಲ್ದಾರ್ ಕೋರ್ಟ್ ಸುತ್ತಲಿನ ಪ್ರದೇಶ, ಮುಖ್ಯರಸ್ತೆ, ಶ್ರೀರಾಮ ಮಾರುಕಟ್ಟೆ, ರಜ್ವಿ ರಸ್ತೆ, ಬಸ್ ನಿಲ್ದಾಣ, ದರ್ಗಾಬೇಸ್ ಮತ್ತಿತರ ಸ್ಥಳಗಳಲ್ಲಿರುವ ಅಂಗಡಿಗಳಿಗೆ ದಾಳಿ ನಡೆಸಿ ಗುಟ್ಕಾ ಜಪ್ತಿ ಕೈಗೊಳ್ಳಲಾಗಿದೆ.
ಶುಕ್ರವಾರ ಒಂದೇ ದಿನದಲ್ಲಿ ಸುಮಾರು 20 ಸಾವಿರ ಮೌಲ್ಯದ ಗುಟ್ಕಾ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ದಾಳಿಯಲ್ಲಿ ಚಂದ್ರಶೇಖರ ಹಳ್ಳಿಗೇರಿ ಇತರರು ಇದ್ದರು.
ಜಪ್ತಿಗೆ ವಿರೋಧ: ಪುರಸಭೆ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿ ಗುಟ್ಕಾ ಜಪ್ತಿ ಕೈಗೊಂಡ ಕ್ರಮಕ್ಕೆ ಅನೇಕ ಚಿಲ್ಲರೆ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುನ್ಸೂಚನೆ ನೀಡದೇ ಈ ರೀತಿ ಗುಟ್ಕಾ ವಶಪಡಿಸಿಕೊಳ್ಳುವುದರಿಂದ ತಮಗೆ ಆರ್ಥಿಕವಾಗಿ ನಷ್ಟವಾಗಲಿದೆ ಎಂದು ವ್ಯಾಪಾರಿಗಳು ವಾದಿಸಿದ್ದಾರೆ. ಕೆಲವು ಕಡೆ ಅಂಗಡಿಗಳ ಮಾಲೀಕರು ತಕರಾರು ತೆಗೆದಿದ್ದಾರೆ. ಸಂಪೂರ್ಣ ನಿಷೇಧಿಸಿ: ದೊಡ್ಡ ವ್ಯಾಪಾರಿ ಮತ್ತು ಚಿಲ್ಲರೆ ವ್ಯಾಪಾರಿಗಳಲ್ಲಿ ಭಾರೀ ಪ್ರಮಾಣದಲ್ಲಿ ಈಗಾಗಲೇ ದಾಸ್ತಾನಾಗಿದೆ. ಗೊತ್ತಿಲ್ಲದಂತೆ ದುಬಾರಿ ಬೆಲೆಯಲ್ಲಿ ಕಾಣದಂತೆ ಮಾರಾಟ ನಡೆಯುತ್ತಿದೆ ಎನ್ನುತ್ತಾರೆ ವೆಸನಿಯೊಬ್ಬರು. ಗುಟ್ಕಾ ನಿಷೇಧಿಸಿದಂತೆ ಸಾರಾಯಿ ಮಾರಾಟ ಕೂಡ ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.