ಗುಲ್ಬರ್ಗಾ

ಚಿತ್ತಾಪುರ ಕೃಷಿ ಇಲಾಖೆ ಖಾಲಿ.. ಖಾಲಿ...

Published On :

ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಜೂ.11
ತಾಲೂಕಿನಲ್ಲಿ ಮುಂಗಾರು ಪ್ರವೇಶಿಸಿದಂತೆ ಬಿತ್ತನೆ ಸಿದ್ಧತೆ ಚುರುಕುಗೊಂಡಿದ್ದು, ಬೀಜ, ರಸಗೊಬ್ಬರ ವಿತರಣೆಗೆ ಕೃಷಿ ಇಲಾಖೆ ಮುಂದಾಗುತ್ತಿದೆ. ಆದರೆ ರೈತರಿಗೆ ಸಮರ್ಪಕ ಮಾಹಿತಿ ಮತ್ತು ಬಿತ್ತನೆ ಬೀಜ ಸೇರಿ ಇತರೆ ಅನುಕೂಲ ನೀಡಬೇಕಿದ್ದ ಕೃಷಿ ಇಲಾಖೆಗೆ ಮಾತ್ರ ಖಾಲಿ ಹುದ್ದೆಗಳ ಹೊರೆ ಹೆಚ್ಚಾಗಿದೆ.
ತಾಲೂಕಿನ ಕೃಷಿ ಇಲಾಖೆಯಲ್ಲಿ ಮಂಜೂರಾದ 46 ಹುದ್ದೆಗಳ ಪೈಕಿ 17 ಹುದ್ದೆಗಳು ಭರ್ತಿಯಾಗಿವೆ. ಅಂದರೆ ಬರೋಬ್ಬರಿ 29 ಹುದ್ದೆಗಳು ಖಾಲಿ ಇವೆ. ರೈತರಿಗೆ ಮಾಹಿತಿ ನೀಡುವ 5 ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರತಿ ಕೇಂದ್ರಕ್ಕೆ 8 ಹುದ್ದೆಗಳು ಮಂಜೂರು ಇದ್ದು, ಕೇವಲ 2 ಜನ ಸಿಬ್ಬಂದಿ ಪ್ರತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಏನಿದ್ದರೂ ಪ್ರಭಾರಿ ಅಧಿಕಾರಿಗಳದ್ದೇ ಕಾರುಬಾರು.
ತಾಲೂಕಿಗೆ ಮಂಜೂರಾದ ಒಟ್ಟು 7 ಕೃಷಿ ಅಧಿಕಾರಿಗಳ ಹುದ್ದೆಗಳಲ್ಲಿ 6 ಹುದ್ದೆ, 18 ಕೃಷಿ ಸಹಾಯಕರಲ್ಲಿ 13 ಹುದ್ದೆ, 16 ಸಹಾಯಕ ಕೃಷಿ ಅಧಿಕಾರಿಗಳಲ್ಲಿ 7 ಖಾಲಿ ಹುದ್ದೆಗಳು ಖಾಲಿ ಇವೆ. ಹೀಗಾಗಿ ಕೃಷಿ ಇಲಾಖೆ ಇದೆಯೇ ಅನ್ನೋದು ಜನರ ಸಾಮಾನ್ಯರ ಪ್ರಶ್ನೆಯಾಗಿದೆ.
ರೈತರು ಮಾಹಿತಿಯಿಂದ ವಂಚಿತ: ಬಹುತೇಕ ಕೇಂದ್ರಗಳಲ್ಲಿ ಕೃಷಿ ಕುರಿತು ಮಾಹಿತಿ ನೀಡಲು ಅಧಿಕಾರಿಗಳು ಇಲ್ಲದಿರುವುದರಿಂದ ಹಲವಾರು ರೈತರು ಕೃಷಿ ಮಾಹಿತಿ ಪಡೆಯಲು ವಂಚಿತರಾಗಿದ್ದಾರೆ. ಇದಕ್ಕೆ ಕೃಷಿ ಇಲಾಖೆ ಬಗ್ಗೆ ಮಾಹಿತಿ ಇರದೆ ಅಧಿಕಾರಿಗಳನ್ನು ನಿಯೋಜಿಸದಿರುವುದೇ ಮುಖ್ಯ ಕಾರಣ.
ಈಗಲಾದರೂ ರೈತರಿಗೆ ಅನುಕೂಲವಾಗುವಂತೆ ನೂತನ ಶಾಸಕ ಪ್ರಿಯಾಂಕ್ ಖರ್ಗೆ ಅವರು ಎಚ್ಚೆತ್ತು ಕೃಷಿ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಮುಂದಾಗಬೇಕು ಎನ್ನುವುದು ರೈತರ ಒತ್ತಾಸೆ.
ಹುದ್ದೆ ಭರ್ತಿಗೆ ಕ್ರಮ: ತಾಲೂಕಿನ ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಮಾಡಿದ್ದು ಅವರಿಂದ ಸೂಕ್ತ ಕ್ರಮಕ್ಕಾಗಿ ಎದುರು ನೋಡುತ್ತಿರುವುದಾಗಿ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಕೆ. ಕನಕ ತಿಳಿಸಿದ್ದಾರೆ.
ರೈತರ ಸಮಸ್ಯೆ ಕೇಳೋರಿಲ್ಲ: ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಸಮಸ್ಯೆ ಕೇಳೋರಿಲ್ಲ. ಕಾಯಂ ಅಧಿಕಾರಿಗಳು ಇಲ್ಲದೆ ಇರುವುದರಿಂದ ಕೃಷಿ ಚಟುವಟಿಕೆ ಕುರಿತು ರೈತರಿಗೆ ಸಮರ್ಪಕ ಮಾಹಿತಿ ಸಿಗುತ್ತಿಲ್ಲ ಎಂದು ಪಟ್ಟಣದ ಯುವ ರೈತ ಅಂತಯ್ಯ ಮುಸ್ತೇಜರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೀಜ ಮತ್ತು ಗೊಬ್ಬರ ಇತರೆ ಮಾಹಿತಿ ಕೇಳಿದರೆ, ಕೇಂದ್ರಗಳಲ್ಲಿ ಅಧಿಕಾರಿಗಳ ಕೊರತೆ ಎಂಬ ಸ್ವಷ್ಟ ಮಾಹಿತಿಯನ್ನು ನೀಡುತ್ತಾರೆ. ಇದು ರೈತರ ಮೇಲೆ ಭಾರಿ ಹೊರೆಯಾಗಲಿದೆ.  ಕೇಂದ್ರದಲ್ಲಿ ಖಾಲಿ ಹುದ್ದೆಗಳಿಗೆ ಕಾಯಂ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.