ಕಾಲೇಜು ವಿಲೀನ ಪದ್ಧತಿಗೆ ಖಂಡನೆ
ಗುಲ್ಬರ್ಗ: ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಪ್ರಥಮ ಪದವಿ ಕೋರ್ಸ್ಗಳಾದ ಬಿಎ, ಬಿಎಸ್ಸಿ, ಬಿಬಿಎಂ, ಬಿಸಿಎ ಐಚ್ಛಿಕ ವಿಷಯಗಳಿಗೆ 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, ಆ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ವರ್ಗಾವಣೆ(ವಿಲೀನ) ಮಾಡುವುದನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಖಂಡಿಸಿದೆ. ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ವರ್ಗಾಯಿಸುವುದು ವಿದ್ಯಾರ್ಥಿ ವಿರೋಧಿ ಕ್ರಮವಾಗಿದ್ದು ಮತ್ತು ಇದರಲ್ಲಿ ಖಾಸಗೀಕರಣದ ಹುನ್ನಾರವಿದೆ ಎಂದು ಜಿಲ್ಲಾಧ್ಯಕ್ಷ ಜಗನ್ನಾಥ ಎಸ್.ಎಚ್ ಆರೋಪಿಸಿದ್ದಾರೆ. ಕಾಲೇಜುಗಳಿಗೆ ವಿದ್ಯಾರ್ಥಿಗಳ ಕೊರತೆ, ಶಿಕ್ಷಕರ, ಮೂಲ ಸೌಲಭ್ಯಗಳ ಕೊರತೆ ಬಗ್ಗೆ ಪ್ರಜಾತಾಂತ್ರಿಕ ಚರ್ಚೆಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಎಲ್ಲ ರೀತಿಯ ಮೂಲ ಸೌಲಭ್ಯದೊಂದಿಗೆ ಸರ್ಕಾರಿ ಪದವಿ ಮಹಾವಿದ್ಯಾಲಯಗಳಿಗೆ ಅನುಮತಿ ಕೊಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಂಸ್ಥಾಪನಾ ದಿನಾಚರಣೆ
ಗುಲ್ಬರ್ಗ: ನೂತನ ವಿದ್ಯಾಲಯ ಸಂಸ್ಥೆಯ 107ನೇ ಸಂಸ್ಥಾಪನಾ ದಿನಾಚರಣೆ ಜೂ.17ರ ಬೆ. 10ಕ್ಕೆ ಸಂಸ್ಥೆಯ ಸಂಗಮೇಶ್ವರ ಸಭಾಗೃಹದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಭಾಗವಹಿಸಿ ಜ್ಞಾನಜ್ಯೋತಿ ಪುಸ್ತಕ ಬಿಡುಗಡೆ ಮಾಡುವರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಮುರಳೀಧರ ರಾವ ವಹಿಸುವರು.
ಪದಾಧಿಕಾರಿಗಳು
ಗುಲ್ಬರ್ಗ: ಕರ್ನಾಟಕ ಹಾಲುಮತ ಜಾಗೃತಿ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಎಚ್.ಎಸ್. ಸಾಹು ಹಾಗೂ ಪ್ರಧಾನ ಕಾರ್ಯದರ್ಶಿ ಬಸವರಾಜ ಮದ್ರಿಕಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆ ಹಾಗೂ ತಾಲೂಕುವಾರು ಅಧ್ಯಕ್ಷರನ್ನು ಸರ್ವಾನುಮತದಿಂದ ನೇಮಕ ಮಾಡಿದ್ದಾರೆ. ನಾಗೇಶ ದೇವಿಂದ್ರಪ್ಪ ಮುಚ್ಚಖೇಡ ಗುಲ್ಬರ್ಗ ತಾಲೂಕು ಅಧ್ಯಕ್ಷರಾಗಿ, ಶರಣಪ್ಪ ಶಂಕರ ಪುಜಾರಿ ಗುಲ್ಬರ್ಗ ನಗರ ಅಧ್ಯಕ್ಷರಾಗಿ, ಲಿಂಗರಾಜ ಯಶವಂತರಾಯ ಮಾಸ್ಟರ್ ಜೇವರ್ಗಿ ಅಧ್ಯಕ್ಷರಾಗಿ, ಬೀರಪ್ಪ ಸಿದ್ದಪ್ಪ ಪೂಜಾರಿ ಆಳಂದ ಅಧ್ಯಕ್ಷರಾಗಿ, ಲಿಂಗರಾಜು ಸುಭಾಷ ಹುವಿನಬಾವಿ, ಚಿಂಚೋಳಿ ಅಧ್ಯಕ್ಷರಾಗಿ, ರಾಜು ನಾಗಪ್ಪ ಪೂಜಾರಿ ಅವರನ್ನು ಸೇಡಂ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಇನ್ವರ್ಟರ್ ವಿತರಣೆ
ಗುಲ್ಬರ್ಗ: ತಾಲೂಕಿನ ಫಿರೋಜಾಬಾದ್ ಗ್ರಾಮದ ಸೈಯದ್ ಅಹ್ಮದ್ ಖಲಮತ್ ರೆಹಮಾನ್ (ಫಿರೋಜಾಬಾದ್ ದರ್ಗಾಕ್ಕೆ) ಹಾಗೂ ನಂದಿಕೂರ ಸೋಮ್ಲಾ ನಾಯಕ ತಾಂಡಾದ ಜಗದಂಬಾ ಹಾಗೂ ಸೇವಾಲಾಲ ದೇವಸ್ಥಾನಕ್ಕೆ ಜಿಪಂ ಸದಸ್ಯ ಅನಿತಾ ಪವನ ಕುಮಾರ ವಳಕೇರಿ ಅವರು 6 ಇನ್ವರ್ಟರ್ಗಳನ್ನು ಉಚಿತ ವಿತರಿಸಿದರು. ದರ್ಗಾದ ವ್ಯವಸ್ಥಾಪಕ ಸೈಯದ್ ಹಬಿಮಾ ರೆಹಮಾನ್ ಸಾಹೇಬ್ ಸಜ್ಜಾದೆ, ಅನ್ವರ್ ಸಿ.ಪಟೇಲ್, ಮಹಿಪಾಶಾ ಪಟೇಲ್ ಸೀತನೂರ, ಮಲ್ಲಯ್ಯ ಗುತ್ತೇದಾರ, ಖಾಸಿಂ ಅಲಿ ಮುಜಾವರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

