ಹಿಂದುಳಿದ ನೆಲದಲ್ಲಿ ಪ್ರಕಟಣೆಗೆ ನೀರೆರೆದ ಸಿದ್ದಲಿಂಗೇಶ್ವರ ಪ್ರಕಾಶನ
ಗುಲ್ಬರ್ಗ ಹಿಂದುಳಿದ ಜಿಲ್ಲೆ ಎಂದೇ ಹೆಸರುವಾಸಿ. ಆದಾಗ್ಯೂ ಈ ಜಿಲ್ಲೆಯಲ್ಲಿಯೇ 1977ರಲ್ಲಿ ಪುಟ್ಟ ಗೂಡಂಗಡಿ ರೂಪದಲ್ಲಿ ಮುಖ್ಯ ರಸ್ತೆಯಲ್ಲಿ ತಲೆ ಎತ್ತಿದ್ದ ಅಂಗಡಿ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆಯಲ್ಲದೆ ಹೈ-ಕ ನೆಲದಲ್ಲಿ ಚೊಚ್ಚಲ ಪುಸ್ತಕ ಮಾಲ್ ಹಂದುವ ಕನಸು ಹೊತ್ತು ನಿಂತಿದೆ. ಅದು ಬೇರಾವ ಸಂಸ್ಥೆಯೂ ಅಲ್ಲ, ಸಿದ್ದಲಿಂಗ ಪುಸ್ತಕ ಪ್ರಕಾಶನ ಸಂಸ್ಥೆ ಅಲ್ಪ ಅವಧಿಯಲ್ಲೇ ಅಪರೂಪದ ಸಾಧನೆ ಮಾಡಿ ಹೆಸರು ಪಡೆದುಕೊಂಡಿದೆ.
1977ರಲ್ಲಿ ಪುಸ್ತಕ ಅಂಗಡಿ ರೂಪದಲ್ಲಿ ತಲೆ ಎತ್ತಿದ ಸಂಸ್ಥೆ 1988 ರಿಂದ ತನ್ನ ಪ್ರಕಟಣೆ ಕೆಲಸಕ್ಕೆ ಮುಂದಾಯ್ತು. ಇಲ್ಲಿವರೆಗೂ ಸಂಸ್ಥೆ 995 ಕೃತಿಗಳನ್ನು ಹೊರತಂದಿದೆ. ಇದರಲ್ಲಿ ಶೇ. 40ರಷ್ಟು ಪಠ್ಯ ಪುಸ್ತಕಗಳ ಕೃತಿಗಳಾದರೆ ಶೇ. 60 ರಷ್ಟು ಜನಪ್ರಿಯ ಪುಸ್ತಕ ಮಾಲೆ ಹಾಗೂ ಸಾಹಿಚತ್ಯ, ವಿಮರ್ಶೆ, ಜಿಜ್ಞಾಸೆ, ಜೀವನ ಚರಿತ್ರೆಯಂತಹ ವಿವಿಧ ಸಾಹಿತ್ಯ ಪ್ರಕಾರಗಳಿಗೆ ಸೇರಿರುವ ಕೃತಿಗಳೇ ಆಗಿವೆ.
ಕಾಯಕವೇ ಕೈಲಾಸ ಎಂಬ ಪ್ರಕಾಶನದ ಮಾಲೀಕರಾದ ಬಸವರಾಜ ಕೊನೆಕ್, ಅವರ ಪುತ್ರ ಸಿದ್ದಲಿಂಗ ಕೊನೆಕ್ ಸಾಧನೆ ಮಾಡಬೇಕೆಂಬ ಛಲ, ಈ ಭಾಗದ ಸಾಹಿತಿಗಳಿಗೆ ಪ್ರೋತ್ಸಾಹಿಸಬೇಕು ಎಂಬ ಚಿಂತನೆಯೇ ಇಂದು ಸಂಸ್ಥೆ ಪ್ರತಿವರ್ಷ ನೂರಾರು ಕೃತಿಗಳನ್ನು ಹೊರತರಲು ಕಾರಣವಾಗಿದೆ.
ಪ್ರಕಾಶನ ವಾರ್ಷಿಕ ಆಚರಿಸುವ ತನ್ನಸಂಸ್ಥಾಪನಾ ದಿನದಂದು ಆಯ್ದ ಲೇಖಕರ ಕೃತಿಗಳನ್ನು ಹೊರತರುವ ಯೋಜನೆಯನ್ನೇ ಹಮ್ಮಿಕೊಂಡು ಅದನ್ನು ತುಂಬ ಶ್ರದ್ಧೆಯಿಂದ ಪಾಲಿಸಿಕೊಂಡು ಹೊರಟಿದ್ದು ಪ್ರಕಾಶನಕ್ಕೆ ಕೃತಿಗಳ ಪ್ರಕಟಣೆ ಕಾರ್ಯದಲ್ಲಿ ಇರುವ ತನ್ಮಯತೆಗೆ ಕನ್ನಡಿ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

