ಅಕ್ಷರ ಜಾತ್ರೆಗೆ ಅದ್ಧೂರಿ ತೆರೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.16
ಗುಲ್ಬರ್ಗದಲ್ಲಿ ಎರಡು ದಿನಗಳ ಕಾಲ ನಡೆದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಭಾನುವಾರ ರಾತ್ರಿ ಸಂಪನ್ನಗೊಂಡಿತ್ತು.
ಭಾನುವಾರ ದಲಿತ ಸಾಹಿತ್ಯ ಚಿಂತನ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ವರ್ತಮಾನದ ತಲ್ಲಣಗಳು, ಯುವ ಕವಿಗೋಷ್ಠಿ, ಕಲಬುರ್ಗಿ ಸಂಕೀರ್ಣ ಸಾಹಿತ್ಯ ಎಂಬ ಗೋಷ್ಠಿಗಳನ್ನು ನಡೆಸಿ ರಾತ್ರಿ 9.30ಕ್ಕೆ ತೆರೆ ಕಂಡಿತು.
ಸಮಾರಂಭದಲ್ಲಿ ಪತ್ರಕರ್ತ ಜೋಗಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಗುಲಾಮಗಿರಿ ಆಂಗ್ಲ ಭಾಷೆ ವ್ಯಾಮೋಹಕ್ಕೆ ಒಳಗಾಗಿ ಜನಪದ ಕನ್ನಡ ಭಾಷೆ ಕೊಲ್ಲಬೇಡಿ ಎಂದು ಕರೆ ನೀಡಿದರು. ಮೊದಲು ಕನ್ನಡ ಭಾಷೆಗೆ ಆದ್ಯತೆ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡದಲ್ಲಿ ಕೊಡಿಸಿ. ಉದ್ಯೋಗಕ್ಕಾಗಿ, ವ್ಯಾಪಾರಕ್ಕಾಗಿನ ಶಿಕ್ಷಣವನ್ನು ಆಂಗ್ಲ ಭಾಷೆಯಲ್ಲಿ ನೀಡಬೇಕೆಂದು ಪಾಲಕರಿಗೆ ಸಲಹೆ ನೀಡಿದರು.
ಕನ್ನಡ ಆತ್ಮದ ಭಾಷೆ: ನಗರದಲ್ಲಿ ಕನ್ನಡ ಭಾಷೆ ಕಣ್ಮರೆಯಾಗುತ್ತಿದೆ. ಗ್ರಾಮಗಳಲ್ಲಿ ಮಾತ್ರ ಕನ್ನಡ ಜನಪದ ಭಾಷೆಯಾಗಿ ಉಳಿದುಕೊಂಡು ಬಂದಿದೆ. ಕನ್ನಡ ಆತ್ಮದ ಭಾಷೆಯಾಗಿದ್ದು, ಈ ಭಾಷೆಯನ್ನು ಉಳಿಸಿ ಬೆಳೆಸಲು ನಗರ ನಿವಾಸಿಗಳು ಪ್ರಯತ್ನಿಸಿದಾಗ ಮಾತ್ರ ಕನ್ನಡ ಭಾಷೆ ಶ್ರೀಮಂತಗೊಳ್ಳಲು ಸಾಧ್ಯ ಎಂದರು.
ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ವೈಜನಾಥ ಪಾಟೀಲ್, ಲಕ್ಷ್ಮಣ ದಸ್ತಿ, ಶಿವಬಸಯ್ಯ ಹಿರೇಮಠ, ಶಿವಶರಣಪ್ಪ ಸರಸಂಬಿ, ಬಾಬುಮಿಯಾ ಮಾಶಾಳ, ಆರ್.ಎಸ್. ಸ್ವಾಮಿ ತಡಕಲ್, ಎಸ್.ಎಂ. ಬೆಳ್ಳೆ, ನಿಂಗಮ್ಮ ಪತಂಗೆ, ಕ್ಷೇಮಲಿಂಗ ಬಿರಾದಾರ, ರಾಮಾನುಜದಾಸ ತಾಪಾಡಿಯಾ, ಸಿದ್ದಪ್ಪ ತಳ್ಳಳ್ಳಿ, ಬಸವಲಿಂಗಮ್ಮ ಪಾಟೀಲ್, ಡಾ. ಪಿ.ಎಂ. ಮಠ, ಮಲ್ಲಯ್ಯ ಗುತ್ತೇದಾರ, ರಾಮಶೆಟ್ಟಿ ಹುಗ್ಗಿ ಸೇರಿದಂತೆ ಹಲವಾರು ಜನರನ್ನು ಸನ್ಮಾನಿಸಿ ಗೌರವಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

