ತಿಂಗಳಲ್ಲಿ 90 ಮೊಟ್ಟೆ ಇಡುವ ಕೋಳಿ!
ಕೆಂಭಾವಿ: ಕೆಲವು ಆಶ್ಚರ್ಯಕರ ಸಂಗತಿಗಳು ನಮ್ಮ ಸುತ್ತಮುತ್ತ ತನ್ನ ಪಾಡಿಗೆ ನಡೆಯುತ್ತಲೇ ಇರುತ್ತವೆ. ಆದರೆ ಕೆಲವು ಯಾರ ಗಮನಕ್ಕೂ ಬಾರದೇ ಅದರ ಮಹತ್ವ ತಿಳಿಯುವುದೇ ಇಲ್ಲ. ಅಂತಹ ಒಂದು ಆಶ್ಚರ್ಯಕರ ಸತ್ಯ ಸಂಗತಿಯೊಂದು ಇಲ್ಲಿದೆ. ಕೋಳಿಗಳು ಒಂದು ತಿಂಗಳಲ್ಲಿ 15ರಿಂದ 20 ಮೊಟ್ಟೆಗಳನ್ನು ಇಡಬಹುದು. ಹೆಚ್ಚೆಂದರೆ 25. ಇದು ಸಾಮಾನ್ಯ. ಆದರೆ, ಇಲ್ಲೊಂದು ಕೋಳಿ ತಿಂಗಳಲ್ಲಿ 60ರಿಂದ 90ರ ವರೆಗೂ ಮೊಟ್ಟೆ ಇಡುತ್ತಾ ಅಚ್ಚರಿ ಮೂಡಿಸುತ್ತಿದೆ. ಪಟ್ಟಣದ ಸೊನ್ನದ ಬಡಾವಣೆಯ ನಿವಾಸಿ ಶಾಂತಗೌಡ ಪೂಜಾರಿ ಗೊಡಚಿ ಅವರ ಮನೆಯಲ್ಲಿರುವ ಕೋಳಿಯೇ ಈ ಅಚ್ಚರಿಗೆ ಕಾರಣವಾಗಿದೆ.
ಆಶ್ಚರ್ಯಕರ ಕೋಳಿ: ಒಂದೂವರೆ ವರ್ಷದ ಈ ಕೋಳಿ ಪ್ರತಿನಿತ್ಯ ಎರಡು, ಮೂರು, ನಾಲ್ಕು ಹೀಗೆ ಮೊಟ್ಟಗಳನ್ನಿಡುತ್ತಲೇ ಇರುತ್ತದೆ. ಉಳಿದ ಕೋಳಿಗಳು ಮೊಟ್ಟೆ ಇಡುವ ದಿನಗಳಲ್ಲಿ ಸುಸ್ತಾಗಿ ಗೂಡು ಬಿಟ್ಟು ಹೊರಗೂ ಬರುವುದಿಲ್ಲ. ಆಹಾರವನ್ನೂ ಸೇವಿಸುವುದಿಲ್ಲ. ಆದರೆ ಈ ಕೋಳಿ ಮಾತ್ರ ಆ ಸಂದರ್ಭದಲ್ಲಿ ಬರೀ ಗೂಡಿನಲ್ಲಿರದೇ ಯಾವತ್ತೂ ಹೊರಗಡೆ ಕಾಳು-ಕಡಿ ಹುಡುಕುತ್ತಲೇ ಮೊಟ್ಟೆಗಳನ್ನಿಡುತ್ತಿದೆ. ಕೇವಲ ಗೂಡಿನಲ್ಲಷ್ಟೇ ಅಲ್ಲದೆ, ಆಹಾರ ಸೇವಿಸುತ್ತಾ ಹೊರಗಡೆ ಎಲ್ಲೆಂದರಲ್ಲಿ ಮೊಟ್ಟೆ ಇಡುವ ಈ ಕೋಳಿ ಬಲು ಅಪರೂಪವಾಗಿ ಬೆಳೆಯುತ್ತಿದೆ. 'ಈ ಕೋಳೀನೇ ಬಾಳ ವಿಚಿತ್ರ ಅದರಿ. ಸಂಜಿತನಾ ಮೇಯ್ಕೋಂತೆ ತತ್ತಿ ಇಡತೈತ್ರಿ. ತಿಂಗಳಿಗಿ ಏನೂ ಇಲ್ಲಾಂದ್ರೂ 80ರಿಂದ 90ರತನ ತತ್ತಿ ಆಗತಾವ್ರಿ, ಇನ್ನ ಹೊರಗೆ ಹೋದಾಗ ಇಟ್ಟಿದ್ದು ಒಮ್ಮೆ ಗೊತ್ತಾಗ್ತದ, ಒಮ್ಮೆ ಇಲ್ರಿ' ಅಂತ ಆ ಕೋಳಿಯ ಒಡತಿ ಶಾಂತಮ್ಮ ತುಂಬಾ ಖುಷಿಯಿಂದ ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

