ಸ್ವಾವಲಂಬಿ ಬದುಕಿಗೆ ಟೇಲರಿಂಗ್ ಉತ್ತಮ
ಕೆಂಭಾವಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಹಾಗೂ ಆರ್ಥಿಕವಾಗಿ ಸದೃಢವಾಗಲು ಟೇಲರಿಂಗ್ ತರಬೇತಿ ಪಡೆದುಕೊಳ್ಳುವುದು ಅವಶ್ಯ ಎಂದು ಟೇಲರ್ಸ್ ಅಸೋಸಿಯೇಶನ್ ತಾಲೂಕಾ ಅಧ್ಯಕ್ಷ ರಾಜು ಹೇಳಿದರು. ಸಮೀಪದ ನಗನೂರಲ್ಲಿ ಕರ್ನಾಟಕ ಸ್ಟೇಟ್ ಟೇಲರ್ಸ್ ಅಸೋಸಿಯೇಶನ್ ವಲಯ ಸಮೀತಿ ವತಿಯಿಂದ ನಡೆದ ಉಚಿತ ಹೊಲಿಗೆ ತರಬೇತಿ ಪಡೆದ ಫಲಾನುಭವಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಎರಡನೆಯ ಅವಧಿಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮಿಂದ ಏನೂ ಆಗುವುದಿಲ್ಲ ಎಂಬ ಮನೋಭಾವನೆಯನ್ನು ಮಹಿಳೆಯರು ಬಿಡಬೇಕು. ಮನೆಯಲ್ಲಿದ್ದೇ ಟೇಲರಿಂಗ್ ಮಾಡುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು. ಈ ನಿಟ್ಟಿನಲ್ಲಿ ಇಲ್ಲಿ ತರಬೇತಿ ಪಡೆದವರು ಟೇಲರಿಂಗ್ ವೃತ್ತಿ ಆರಂಭಿಸಿ, ಇತರರಿಗೆ ಮಾದರಿಯಾಗಬೇಕೆಂದು ಕರೆ ನೀಡಿದರು. ಕೆಎಸ್ಟಿಎ ನಗನೂರ ವಲಯ ಸಮಿತಿ ಅಧ್ಯಕ್ಷ ಭೀಮರಾಯ ಟೇಲರ, ಕೆಂಭಾವಿ ವಲಯ ಸಮಿತಿ ಅಧ್ಯಕ್ಷ ಆದಯ್ಯಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಟೇಲರ್, ಬಾಷಾ, ಗಫೂರಸಾಬ, ರಾಜು ಟೇಲರ್, ಷಾವಾನಾ, ರಹೀಂ, ಶಿವಲಿಲಾ, ಶಿವಮಗ್ಗೆಮ್ಮ, ರಂಜಾನಬಿ, ನಿರ್ಮಲಾ ಇತರರು ಇದ್ದರು. ಅಜೀಜ್ ಟೇಲರ್ ಸ್ವಾಗತಿಸಿದರು. ಸುಭಾಸ ಕೆಂಭಾವಿ ವಂದಿಸಿದರು.
ದೂರಸಂಪರ್ಕ ನೌಕರರ ಸಭೆ ನಾಳೆ
ಯಾದಗಿರಿ: ದೂರ ಸಂಪರ್ಕ ನೌಕರರ ರಾಷ್ಟ್ರೀಯ ಒಕ್ಕೂಟ, ಗುಲ್ಬರ್ಗ ಜಿಲ್ಲಾ ಘಟಕದ ಆಶ್ರಯದಲ್ಲಿ ತೃತೀಯ ಜಿಲ್ಲಾ ಸಮ್ಮೇಳನ ನಿಮಿತ್ತ ಜೂ. 23ರಂದು ಬೆಳಗ್ಗೆ 11ಕ್ಕೆ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬಹಿರಂಗ ಸಭೆಯನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಜಿಪಂ ಅಧ್ಯಕ್ಷೆ ಮರೆಮ್ಮ ಶಾಣೆನೋರ, ಉಪಾಧ್ಯಕ್ಷ ಶರಣಿಕಕುಮಾರ ದೋಖಾ, ತಾಪಂ ಅಧ್ಯಕ್ಷೆ ಶ್ರೀಲಕ್ಷ್ಮಿ ಚಂಡ್ರಕಿ, ಬಿಎಸ್ಸೆನ್ನೆಲ್ ಉಪ ಮಹಾಪ್ರಬಂಧಕ ಎಂ.ಕೆ. ವಗ್ಗೇರ, ವಿಭಾಗೀಯ ಅಭಿಯಂತರ ಎ.ಡಿ.ಮಹಿಷಿ, ಸಂಘದ ಕರ್ನಾಟಕ ವಲಯ ಕಾರ್ಯದರ್ಶಿ ಕೆ.ಎಸ್. ಶೇಷಾದ್ರಿ, ಜಿಲ್ಲಾ ಕಾರ್ಯದರ್ಶಿ ಕಿಷ್ಟಯ್ಯ, ಜಿಲ್ಲಾಧ್ಯಕ್ಷ ಬಿ.ಎನ್. ಮಮ್ಮಾಣಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಜಿ.ವೆಂಕಟೇಶ ಹಾಗೂ ಕಾರ್ಯದರ್ಶಿ ಮೊಹ್ಮದ್ ಹನೀಫ್ ತಿಳಿಸಿದ್ದಾರೆ.
ಲಾರಿ- ಬೈಕ್ ಡಿಕ್ಕಿ: ವ್ಯಕ್ತಿ ಸಾವು
ಶಹಾಪುರ: ತಾಲೂಕಿನ ದೋರನಹಳ್ಳಿ ಬಳಿ ಲೈರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ದೋರನಹಳ್ಳಿ ಗ್ರಾಮದ ಸಿದ್ದಪ್ಪ (28) ಮೃತ ವ್ಯಕ್ತಿ. ಅಪಘಾತಕ್ಕೆ ಕಾರಣವಾದ ಲಾರಿಯನ್ನು ಬಿಟ್ಟು ಅದರ ಚಾಲಕ ಪರಾರಿಯಾಗಿದ್ದಾನೆ. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

