ಪಡಿತರಕ್ಕೆ ಹಣ ವಸೂಲಿ: ತಡೆಯಲು ಒತ್ತಾಯ
ಕ.ಪ್ರ. ವಾರ್ತೆ, ಚಿತ್ತಾಪುರ, ಜೂ.21
ಪಟ್ಟಣದ ಕೆಲ ಖಾಸಗಿ ಕಂಪ್ಯೂಟರ್ಸ್ನಲ್ಲಿ ಹೆಚ್ಚು ಹಣ ಪಡೆದು ಹೊಸದಾಗಿ ಮತ್ತು ಹಳೆಯ ಪಡಿತರ ಚೀಟಿ ನವೀಕರಣ ಮಾಡುತ್ತಿರುವುದನ್ನು ನಿಲ್ಲಿಸಿ ತಾಲೂಕಿನ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಆಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ಕರವೇ (ಪ್ರವೀಣಶೆಟ್ಟಿ ಬಣ) ತಾಲೂಕು ಅಧ್ಯಕ್ಷ ನರಹರಿ ಕುಲಕರ್ಣಿ ನೇತೃತ್ವದಲ್ಲಿ ಬುಧವಾರ ತಹಸೀಲ್ದಾರ್ಗೆ ಮನವಿ ಪತ್ರ ಸಲ್ಲಿಸಲಾಯಿತು.
ಪಡಿತರ ಹೊಸದಾಗಿ ಮತ್ತು ನವೀಕರಣ ಮಾಡಲು ಸರ್ಕಾರದ ನಿಗದಿ ಮಾಡಿದಕ್ಕಿಂತ ಹೆಚ್ಚು ಹಣ ಪಡೆಯಲಾಗುತ್ತಿದೆ. ಪ್ರತಿ ಪಡಿತರ ಚೀಟಿಗೆ ಇಲ್ಲಿನ ಕೆಲ ಕಂಪ್ಯೂಟರ್ ಕೇಂದ್ರದಲ್ಲಿ 200 ಯಿಂದ 500ರ ವರೆಗೆ ಪಡೆದು ಸಾರ್ವಜನಿಕರಿಗೆ ಮೋಸ ಮಾಡಲಾಗುತ್ತಿದೆ. ಹಣ ಪಡೆದಷ್ಟು ರಸೀದಿ ನೀಡುತ್ತಿಲ್ಲ ಎಂದು ಕರವೇ ಮುಖಂಡರು ಆರೋಪಿಸಿದರು.
ದೂರದ ಗ್ರಾಮಗಳಿಂದ ಚಿತ್ತಾಪುರ ಪಟ್ಟಣಕ್ಕೆ ಬಂದು ಸಾರ್ವಜನಿಕರು ವಾರಗಟ್ಟಲೇ ಅಲೆದಾಡಿ ತೊಂದರೆ ಅನುಭವಿಸುತ್ತಿದ್ದಾರೆ. ಆಹಾರ ಮತ್ತು ನಾಗರಿಕ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಪಟ್ಟಣದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಜನತೆಯ ಪಡಿತರ ಚೀಟಿ ಕೆಲಸ ಮಾಡುವುದರಿಂದ ಪಟ್ಟಣದ ಜನತೆಗೆ ಪಡಿತರ ಮಾಡಿಸಿಕೊಳ್ಳಲು ಸಮಯ ಇಲ್ಲದಂತಾಗಿದೆ. ಕೂಡಲೇ ಸಾರ್ವಜನಿಕರ ಹಿತದೃಷ್ಟಿಯಿಂದ ಹೆಚ್ಚು ಹಣ ಪಡೆಯುವುದನ್ನು ಸರ್ಕಾರ ನಿಗದಿ ಮಾಡಿದಷ್ಟು ಹಣ ತೆಗೆದುಕೊಂಡು ರಸೀದಿ ನೀಡುವಂತೆ ಅನುಕೂಲ ಮಾಡಬೇಕು. ಜೊತೆಗೆ ಯಾರಿಗೂ ತೊಂದರೆಯಾಗದಂತೆ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಪಡಿತರ ನವೀಕರಣ ಹಾಗೂ ಹೊಸದಾಗಿ ಕುರಿತು ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಸಂಜೀವಣ್ಣನವರ ಮನವಿ ಪತ್ರ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕರವೇ ತಾಲೂಕು ಮಹಿಳೆ ಘಟಕ ಕಾರ್ಯದರ್ಶಿ ಲಕ್ಷ್ಮೀ ವಗ್ಗರ್, ಮುಖಂಡರಾದ ಅಂಬರೀಶ ಚಪಾಟ್ಲೆ, ಬಸವರಾಜ ಚಂದ್ರಕಲ್ಲ, ಮಂಜುನಾಥ ಸ್ವಾಮಿ, ಇತಿಜಾಬೇಗಂ, ವಿಶ್ವನಾಥ ಗುತ್ತೇದಾರ, ರಾಜು ಕರದಳ್ಳಿ, ಸೋರನಬಿ, ಭೀಮು ಸುಣ್ಣಗಾರ, ದೇವಿಂದ್ರ ಪರೀಟ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

