ಯೋಗಪಟು, ತರಬೇತಿ ಅಧಿಕಾರಿ ಪಟ್ಟಣಕರ್‌ಗೆ ಸರ್ವೋತ್ತಮ ಸೇವಾ ಪುರಸ್ಕಾರ
ಗುಲ್ಬರ್ಗ: ಉದ್ಯೋಗ ಮತ್ತು ತರಬೇತಿ ಇಲಾಖೆಯ ಇಲ್ಲಿನ ಜಂಟಿ ನಿರ್ದೇಶಕರ ವಿಭಾಗೀಯ ಕಚೇರಿಯ ತರಬೇತಿ ಅಧಿಕಾರಿ ಎಸ್.ಎಂ. ಪಟ್ಟಣಕರ್ ತಮ್ಮ ತರಬೇತಿ ಜೊತೆಗೆ ಯೋಗ- ಪ್ರಾಣಾಯಾಮ ಹಾಗೂ ವಿವಿಧ ವ್ಯಾಯಾಮಗಳ ಹವ್ಯಾಸದಿಂದಲೂ ತಾವು ಕೆಲಸ ಮಾಡುತ್ತಿರುವ ಕಚೇರಿ, ಸುತ್ತಲಿನ ಪರಿಸರ, ಜೊತೆಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯರಾಗಿದ್ದಾರೆ.
ಇಲಾಖೆಯಲ್ಲಿ ದಕ್ಷತೆ ಹಾಗೂ ನಿಷ್ಠೆಯಿಂದ ಸಲ್ಲಿಸಿರುವ ಉತ್ತಮ, ದಕ್ಷ ಸೇವೆಯನ್ನು ಮನಗಂಡು ಕರ್ನಾಟಕ ಸರ್ಕಾರ ತನ್ನ ನೌಕರರಿಗೆ ಕೊಡುವ 2012- 13ನೇ ಸಾಲಿನ ಸರ್ವೋತ್ತಮ ಸೇವಾ ಪುರಸ್ಕಾರಕ್ಕೆ ಇವರನ್ನು ಆಯ್ಕೆ ಮಾಡಿದೆ.
ಇತ್ತೀಚೆಗೆ ಬೆಂಗಳೂರಲ್ಲಿ ಪಟ್ಟಣಕರ್ ಅವರಿಗೆ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ್ ಅವರು ಸರ್ವೋತ್ತಮ ಸೇವಾ ಪುರಸ್ಕಾರ ನೀಡಿ ಗೌರವಿಸಿದ್ದಾರೆ.
ಯೋಗ, ಪ್ರಾಣಾಯಾಮ ಹಾಗೂ ವ್ಯಾಯಾಮಗಳ ಪ್ರದರ್ಶನಕ್ಕೆ ಆಹ್ವಾನ ಬರುವುದೋ ಅಲ್ಲಿಗೆ ಒಂದು ದಿನದ ಮಟ್ಟಿಗೆ ಹೋಗಿ ಮಕ್ಕಳು, ಬೋಧಕ/ಬೋಧಕೇತರ ಸಿಬ್ಬಂದಿಗೆ ಯೋಗಾಸನ ಹೇಳಿಕೊಡುತ್ತಿದ್ದರು. ಈ ಪ್ರದರ್ಶನಗಳಿಂದ ಗುಲ್ಬರ್ಗ ವಿಭಾಗದಲ್ಲಿ ಬರುವ 6 ಜಿಲ್ಲೆಗಳ ನೂರಾರು ಐಟಿಐ ಕಾಲೇಜುಗಳಲ್ಲಿ ಉತ್ತಮ ಸ್ಪಂದನೆ ದೊರಕಿದೆ ಎಂದು ಪಟ್ಟಣಕರ್ 'ಕನ್ನಡಪ್ರಭ' ಜೊತೆ ಮಾತನಾಡುತ್ತ ಹೇಳಿದ್ದಾರೆ. ಪುರಸ್ಕಾರಕ್ಕೆ ಪಾತ್ರರಾಗಿರುವ ಎಸ್.ಎಂ. ಪಟ್ಟಣಕರ್ ಅವರಿಗೆ ಉದ್ಯೋಗ- ತರಬೇತಿ ಇಲಾಖೆಯ ಗುಲ್ಬರ್ಗ ವಿಭಾಗೀಯ ಜಂಟಿ ನಿರ್ದೇಶಕರು, ಆಡಳಿತ ಅಧಿಕಾರಿಗಳು ಹಾಗೂ ವಿವಿಧ ಐಟಿಐ ಕಾಲೇಜುಗಳ ಪ್ರಾಚಾರ್ಯರು ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

