ಒಂದಿದ್ದ ಗುಟ್ಕಾಚೀಟಿ ಎರಡಾಯ್ತು
ಯಾದಗಿರಿ: ರಾಜ್ಯ ಸರ್ಕಾರ ಕಳೆದ ತಿಂಗಳಷ್ಟೇ ಗುಟ್ಕಾ ನಿಷೇಧಿಸಿದ್ದು, ಇನ್ನೇನು ಗುಟ್ಕಾ ಮಾರಾಟವೇ ನಿಲ್ಲುತ್ತದೆ ಎಂದುಕೊಂಡಿದ್ದರು. ಆದರೆ ಸರ್ಕಾರ ಚಾಪೆ ಕೆಳಗೆ ನುಸುಳಿದರೆ, ಗುಟುಕಾ ಕಂಪನಿಗಳು ರಂಗೋಲಿ ಕೆಳಗೆ ನುಸುಳುತ್ತಿವೆ ಎನ್ನಲು ಈಗ ಮಾರುಕಟ್ಟೆಗೆ ಬಂದಿರುವ ಪೌಚ್ಗಳೇ ಸಾಕ್ಷಿ. ಒಂದೇ ಪ್ಯಾಕೆಟ್ನಲ್ಲಿ ದೊರೆಯುತ್ತದ್ದ ಗುಟ್ಕಾ ಈಗ ಪಾನ್ ಮಸಾಲಾ ಹಾಗೂ ತಂಬಾಕು ಪ್ರತ್ಯೇಕ ಚೀಟಿಗಳಲ್ಲಿ ಲಭ್ಯವಾಗುತ್ತಿದೆ. ಮೊದಲು ಪೌಚ್ಗಳಲ್ಲಿ ತಂಬಾಕು ಮಿಶ್ರಿತ ಗುಟ್ಕಾಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದವು. ಯಾವಾಗ ಸರ್ಕಾರ ಇವುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿತೋ, ಆಗ ಗುಟ್ಕಾ ತಯಾರಿಸುವ ಕಂಪನಿಗಳು ವಾಮ ಮಾರ್ಗವನ್ನು ಹಿಡಿದವು. ಒಂದು ಪೌಚ್ನಲ್ಲಿ ಕೇವಲ ಸುಗಂಧಭರಿತ ಅಡಿಕೆ, ಇನ್ನೊಂದರಲ್ಲಿ ಕೇವಲ ತಂಬಾಕು ಇರುತ್ತದೆ. ಗುಟ್ಕಾ ಪ್ರಿಯರು ಇವೆರಡನ್ನೂ ಒಟ್ಟಿಗೆ ಮಿಶ್ರಣ ಮಾಡಿಕೊಂಡು ಜಗಿಯಬೇಕು. ಇವುಗಳ ಬೆಲೆ ಕ್ರಮವಾಗಿ ಒಂದೊಂದು ರುಪಾಯಿ.
ಪರಿಸರ ಹಾನಿ: ಪಾನ್ ಅಂಗಡಿಗಳಲ್ಲಿ ಗುಟ್ಕಾ ಕೇಳಿದರೆ ಇವೆರಡನ್ನೂ ಸೇರಿಸಿಯೇ ಕೊಡುತ್ತಾರೆ. ಇದರಲ್ಲಿ ಯಾವುದಾದರೂ ಒಂದು ಪೌಚ್ ಕೇಳಿದರೆ ಕೊಡುವುದಿಲ್ಲ. ಗುಟ್ಕಾ ಮಾರಾಟ ಮಾಡುವವರು ಮೊದಲಾದರೆ ಕೇವಲ ಒಂದೇ ಪೌಚ್ ಪಡೆದು ಅದನ್ನು ಬಾಯಿಗೆ ಹಾಕಿಕೊಂಡು ಖಾಲಿ ಚೀಟಿಯನ್ನು ರಸ್ತೆ ಮೇಲೆ ಎಸೆಯುತ್ತಿದ್ದರು. ಆದರೆ ಈಗ ಎರಡೆರಡು ಪೌಚ್ಗಳು ರಸ್ತೆಯ ಮೇಲೆ ಬೀಳುವಂತಾಗಿದೆ. ಇದರಿಂದ ಪರಿಸರದಲ್ಲಿ ಇನ್ನಷ್ಟು ಗುಟ್ಕಾ ಚೀಟಿಗಳು ಬಂದು ಬೀಳುವುದರಲ್ಲಿ ಸಂಶಯವಿಲ್ಲ.
ಈಗ ಮಾರುಕಟ್ಟೆಯಲ್ಲಿ ಕೆಲವೇ ಕಂಪನಿಗಳು ಇಂಥ ಎರಡು ಪೌಚ್ಗಳ ಉತ್ಪಾದನೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕಂಪನಿಗಳು ಇಂಥ ವಾಮ ಮಾರ್ಗ ಅನುಸರಿಸುವ ಸಾಧ್ಯತೆಯಿದೆ. ಆದ್ದರಿಂದ ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕು. ಸರ್ಕಾರ ಪೌಚಗಳಲ್ಲಿ ಪಾನ್ಮಸಾಲ ಹಾಗೂ ತಂಬಾಕನ್ನು ಮಾರಾಟ ಮಾಡುವುದನ್ನೂ ನಿಷೇಧಿಸಬೇಕು ಎನ್ನುವುದು ಸಾರ್ವಜನಿಕ ಆಗ್ರಹವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

