ಚಿಂಚೋಳಿ, ಅಫಜಲ್ಪುರ, ಜೇವರ್ಗಿ ತಾಲೂಕಲ್ಲಿ ವರುಣನ ಕೃಪಾಕಟಾಕ್ಷ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜೂ.25
ಕಳೆದೆರಡು ದಿನದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಮುಂಗಾರು ಹಂಗಾಮಿನ ಆರಂಭದಲ್ಲಿ ನಾಲ್ಕು ದಿನ ಸುರಿದು ಮರೆಯಾಗಿದ್ದ ಮಳೆಯಿಂದಾಗಿ ಕಂಗಾಲಾಗಿದ್ದ ಜಿಲ್ಲೆಯ ರೈತರು ಈ ಮಳೆಗೆ ಸಂತಸಗೊಂಡಿದ್ದಾರೆ.
ಹಗಲೆಲ್ಲಾ ಎಳೆ ಬಿಸಿಲು, ರಾತ್ರಿಪೂರಾ ಮಳೆ ಸುರಿಯುತ್ತಿದೆ. ಇದರಿಂದಾಗಿ ಮುಂಗಾರು ಹಂಗಾಮಿನ ಹೆಸರು, ಉದ್ದು, ಅಲಸಂದಿ, ತೊಗರಿ ಸೇರಿದಂತೆ ತರಹೇವಾರಿ ಬೆಳೆ ಬಿತ್ತನೆಗೆ ರೈತರು ಸಜ್ಜಾಗುತ್ತಿದ್ದಾರೆ. ಮಳೆಯೇ ಬರುತ್ತಿಲ್ಲವೆಂದು ಕಳೆದೊಂದು ವಾರದಿಂದ ರೈತರು ಆಕಾಶದತ್ತ ಮಾಡಿದ್ದರು. ಈ ಸಂಗತಿ ಜಿಲ್ಲೆಯಲ್ಲಿ ಮತ್ತೊಂದು ಸುತ್ತಿನ ಬರಗಾಲದ ಛಾಯೆ ಮೂಡಿಸಿತ್ತು.
ಆದರೀಗ ರೈತರು ಬಯಸಿದಂತೆಯೇ ಮಳೆ ಸುರಿಯುವ ಮೂಲಕ ಎಲ್ಲರಲ್ಲಿ ಹೊಸ ಚೈತನ್ಯ, ಲವಲವಿಕೆ ಮೂಡಿಸಿದೆ. ಜೊತೆಗೇ ರೈತರೆಲ್ಲರೂ ತಮ್ಮ ಬಿತ್ತನೆ ಕೂರಿಗೆಗಳೊಂದಿಗೆ ಹೊಲಗದ್ದೆಗಳತ್ತ ಹೆಜ್ಜೆ ಹಾಕುವಂತೆ ಮಾಡಿದೆ.
179.4 ಮಿಮೀ ಮಳೆ: ಗುಲ್ಬರ್ಗ ನಗರ ಸೇರಿದಂತೆ ಜಿಲ್ಲಾದ್ಯಂತ ಕಳೆದ ಎರಡು ದಿನ ಸುರಿದಿರುವ ಮಳೆ ಬರೋಬ್ಬರಿ 179.4 ಮಿಮೀ. ಜಿಲ್ಲಾಡಳಿತದ ಮೂಲಗಳ ಪ್ರಕಾರ ವಿವಿಧೆಡೆ ಸುರಿದ ಮಳೆಯ ಮಾಹಿತಿ ಹೀಗಿದೆ. (ಮಿಲಿ ಮೀಟರ್ಗಳಲ್ಲಿ)
1) ಅಫಜಲ್ಪುರ- 30.8 ಮಿಮೀ
2) ಆಳಂದ- 15.2
3) ಚಿಂಚೋಳಿ- 31
4) ಚಿತ್ತಾಪುರ- 23
5) ಗುಲ್ಬರ್ಗ- 19.6
6) ಜೇವರ್ಗಿ- 40.8
7) ಸೇಡಂ- 19.0
ಒಟ್ಟು- 179.4 ಮಿಮೀ
ವಾಡಿಕೆ ಮಳೆ 854 ಮಿಮೀ, ಬಂದದ್ದು- 789.7 ಮಿಮೀ: ಜಿಲ್ಲಾಡಳಿತದ ಮೂಲಗಳ ಪ್ರಕಾರ ಇದುವರೆಗೂ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಯಂತೆ 854 ಮಿಮೀ ಮಳೆ ಬರಬೇಕಿತ್ತು. ಆದರೆ ಇದುವರೆಗೂ ಬಂದಿರುವ ಮಳೆಯ ಪ್ರಮಾಣ 789.7 ಮಿಮೀ. ತಾಲೂಕುವಾರು ಜೂನ್ ತಿಂಗಳ ವಾಡಿಕೆ ಮಳೆ, ಇದುವರೆಗೂ ಸುರಿದ ಮಳೆಯ ಮಾಹಿತಿ ಹೀಗಿದೆ. (ಆವರಣದಲ್ಲಿರುವುದು ವಾಡಿಕೆ ಮಳೆ ಪ್ರಮಾಣ)
1) ಅಫಜಲ್ಪುರ- 81.4 ಮಿಮೀ (99 ಮಿಮೀ)
2) ಆಳಂದ- 80 ಮಿಮೀ (100 ಮಿಮೀ)
3) ಚಿಂಚೋಳಿ- 148 ಮಿಮೀ (216 ಮಿಮೀ)
4) ಚಿತ್ತಾಪುರ- 70.5 ಮಿಮೀ (153 ಮಿಮೀ)
5) ಗುಲ್ಬರ್ಗ- 100.2 ಮಿಮೀ (116 ಮಿಮೀ)
6) ಜೇವರ್ಗಿ- 129.9 ಮಿಮೀ (125 ಮಿಮೀ)
7) ಸೇಡಂ- 124.9 ಮಿಮೀ (113 ಮಿಮೀ)
ಜಿಲ್ಲೆಯಲ್ಲಿ ಮುಂಗಾರು ಮಳೆ ಅಷ್ಟಾಗಿ ಸುರಿಯದ ಕಾರಣ ಬಿತ್ತನೆ ಪ್ರಮಾಣ ತುಂಬ ಸೊರಗಿತ್ತು. ಕೃಷಿ ಇಲಾಖೆ ಮೂಲಗಳ ಪ್ರಕಾರ- ಕಳೆದೊಂದು ವಾರದ ಹಿಂದೆ ಶೇ.20ರಷ್ಟು ಮಾತ್ರ ಬಿತ್ತನೆಯಾಗಿತ್ತು. ವಾರದಿಂದ ಹೊಸ ಮಳೆಯೇ ಸುರಿಯದ ಕಾರಣ ಬಿತ್ತನೆಯೂ ಅಷ್ಟಕ್ಕೆ ನಿಂತಿತ್ತು. ಆದರೆ ಈ ಮಳೆ ರೈತರನ್ನು ಹೊಲದತ್ತ ದೌಡಾಯಿಸುವಂತೆ ಮಾಡಿದೆ. ಇದರಿಂದಾಗಿ ಸಹಜವಾಗಿಯೇ ಬಿತ್ತನೆ ಕ್ಷೇತ್ರ ಬರುವ ವಾರದಲ್ಲಿ ವಿಸ್ತಾರವಾಗುವ ಲಕ್ಷಣಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

