ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ವೆಂಕಟಪ್ಪ ವಿಶ್ವಾಸ
ಸುರಪುರ: ಇಲ್ಲಿಯ 27 ವಾರ್ಡ್‌ಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ವಿಶ್ವಾಸ ವ್ಯಕ್ತಪಡಿಸಿದರು.
ಕಬಾಡಗೇರಾ ವಾರ್ಡ್‌ನಲ್ಲಿ ಆಯೋಜಿಸಿದ್ದ ಪಕ್ಷದ ಸಭೆಯಲ್ಲಿ ಮಾತನಾಡಿ, ಎಲ್ಲ ವಾರ್ಡುಗಳಲ್ಲಿ ಕಾಂಗ್ರೆಸ್ ಅಲೆ ಎದ್ದಿದ್ದು, ಈ ಬಾರಿ ಮತದಾರ ಪ್ರಭುಗಳು ಮತ್ತೊಮ್ಮೆ ಕಾಂಗ್ರೆಸ್ ಕೈ ಹಿಡಿಯಲಿದ್ಧಾರೆ. ಪಟ್ಟಣದ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಎಸ್ಸಾರ್ ಪಕ್ಷದ ನಾಗಭೂಷಣಸ್ವಾಮಿ ಕಾಂಗ್ರೆಸ್ ಪಕ್ಷ ಸೇರಿದರು. ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ರಾಜಾ ಸುಭಾಶ್ಚಂದ್ರ ನಾಯಕ, ಮುಖಂಡರಾದ ಶಿವಣ್ಣ ಮಂಗೀಹಾಳ್, ಸೂಲಪ್ಪ ಕಮತಗಿ, ಬಸನಗೌಡ ಯಡಿಯಾಪುರ, ಪ್ರಭುಗೌಡ ಪಾಟೀಲ್, ವೆಂಕೋಬ ಮಂಗಳೂರು, ಅಂಬ್ರೇಶ ನಾಯಕ ಹಲವರಿದ್ದರು. ಝಂಡದಾಕೇರಾದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹಲವರು ರಾಜುಗೌಡ ಬಣ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಮಾನಪ್ಪ ಟೋಕಾಪುರ, ಸಿದ್ದಪ್ಪ ಸುರಪುರಕರ್, ನಿಂಗಪ್ಪ ಹುಲಿಕರ್, ಗೋಪಾಲ ಸತ್ಯಂಪೇಟೆ, ಜಗದೀಶ ಶಾಖನವರು, ರಾಜು ಕಟ್ಟಿಮನಿ, ಗೋವರ್ಧನ ತೇಲ್ಕರ ಇನ್ನಿತರರು ಪ್ರಮುಖರಾಗಿದ್ದಾರೆ. ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ ಹೊಸ್ಮನಿ, ಮುಖಂಡರಾದ ವಿಠ್ಠಲ ಯಾದವ್, ರಾಜಾ ಶ್ರೀರಾಮನಾಯಕ, ದತ್ತಾತ್ರೇಯ ಗುತ್ತೇದಾರ್, ಶ್ರೀನಿವಾಸ ರಫಗಾರ, ಶಾಂತಗೌಡ ಗುತ್ತೇದಾರ್, ಗೋಪಾಲದಾಸ ಲಡ್ಡಾ, ಆದಪ್ಪ ಹೊಸ್ಮನಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

