ಗುಲ್ಬರ್ಗಾ

10 ಗಣ್ಯರಿಗೆ ಗುಲ್ಬರ್ಗ ವಿವಿ 'ಗೌಡಾ'

Published On :

ಕ.ಪ್ರ. ವಾರ್ತೆ  ಗುಲ್ಬರ್ಗ  ಮಾ.6-
ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್ ಹಾಗೂ ಮಾಜಿ ಸಚಿವ ವೈದ್ಯನಾಥ್ ಪಾಟೀಲ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 10 ಗಣ್ಯರಿಗೆ ಬುಧವಾರ ಗುಲ್ಬರ್ಗ ವಿಶ್ವವಿದ್ಯಾಲಯದ 31ನೇ ಘಟಿಕೋತ್ಸವದಲ್ಲಿ 'ಗೌರವ ಡಾಕ್ಟರೇಟ್‌' ಪ್ರದಾನ ಮಾಡಲಾಯಿತು.
ವಿಜಯ. ಎಸ್. ಹಾಗರಗುಂಡಗಿ, ನಾಲವಾರ ಮಠದ ತೋಟೇಂದ್ರ ಶಿವಾಚಾರ್ಯರು, ಡಿ.ಜಿ ಸಾಗರ್, ಮಹಾಂತ ಶಿವಾಚಾರ್ಯರು, ವಿಲಾಸವತಿ ಖೂಬಾ, ಶ್ರೀನಿವಾಸ ಸಿರನೂರಕರ್, ಗುರುಪಾದಪ್ಪ ನಾಗಮಾರಪಳ್ಳಿ, ಅಮ್ಜದ್ ಹುಸೇನ್ ಹಫೀಜ್ ಕರ್ನಾಟಕಿ ಅವರು ವಿವಿಯ ಗೌರವ ಡಾಕ್ಟರೇಟ್ ಸ್ವೀಕರಿಸಿದ ಇತರೆ ಗಣ್ಯರು. ವಿವಿ ಒಟ್ಟು 11 ಮಂದಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲು ತೀರ್ಮಾನಿಸಲಾಗಿತ್ತು. ಆದರೆ, ಅವರಲ್ಲಿ ಒಬ್ಬರಾದ ರಾಘವೇಶ್ವರ ಸ್ವಾಮೀಜಿ ಈ ಗೌರವ ಸ್ವೀಕರಿಸಲು ನಿರಾಕರಿಸಿದರು.
ಶಿಕ್ಷಣ, ಕೌಶಲ್ಯಾಭಿವೃದ್ಧಿಗೆ ಆದ್ಯತೆ: 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ ಆ ಮೂಲಕ ಭಾರತದಲ್ಲಿನ ಅಗಾಧ ಯುವ ಶಕ್ತಿಗೆ ಸೂಕ್ತ ವೇದಿಕೆ ಒದಗಿಸಿ ಕೊಡಲಾಗುತ್ತಿದೆ ಎಂದು ರಾಷ್ಟ್ರೀಯ ಸಲಹಾ ಮಂಡಳಿಯ ಹಾಗೂ ಯೋಜನಾ ಆಯೋಗದ ಸದಸ್ಯ ಡಾ. ನರೇಂದ್ರ ಜಾಧವ್ ತಿಳಿಸಿದರು.
ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಯುವ ಜನತೆಯನ್ನು ಹೊಂದಿದೆ. ಇನ್ನೂ 15 ಸುದೀರ್ಘ ವರ್ಷಗಳವರೆಗೆ ಹೆಚ್ಚು ಯುವ ಜನರು ಇಲ್ಲಿ ದೊರೆಯುತ್ತಾರೆ. ಆ ಅಗಾಧ ಯುವ ಶಕ್ತಿಗೆ ಸೂಕ್ತ ಶಿಕ್ಷಣ, ಅವಕಾಶ ಹಾಗೂ ವೇದಿಕೆಯನ್ನು ಒದಗಿಸಿಕೊಡಬೇಕು. ಆ ಮೂಲಕ ಅವರಲ್ಲಿನ ಪ್ರತಿಭೆಗಳನ್ನು ಬೆಳಕಿಗೆ ತರಬೇಕು. ಈ ನಿಟ್ಟಿನಲ್ಲಿ ಅವರಿಗೆ ಗುಣಾತ್ಮಕ ಶಿಕ್ಷಣ ಒದಗಿಸಿಕೊಡಬೇಕಾದ ಅನಿವಾರ್ಯತೆ ಇದೆ ಎಂದು ಜಾದವ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.