ಹೆಣ್ಣು-ಗಂಡು ಭೇದ ಹೊಡೆದು ಹಾಕಿ
ಗುಲ್ಬರ್ಗ: ಹೆಣ್ಣು- ಗಂಡೆಂಬ ಭೇದವನ್ನು ಹೊಡೆದು ಹಾಕಿದ ಶರಣರ ನೆಲದಲ್ಲಿ ಅಸಮಾನತೆಯನ್ನುವುದು ಇಲ್ಲ. ಶಿವಶರಣರು ಸಾರಿದ ಸಮಾನತೆಯ ನೆಲೆಯಾಗಿದೆ. ನಾವೆಲ್ಲರೂ ಶರಣರ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದು ಗುಲ್ಬರ್ಗ ಬಸವ ಸಮಿತಿ ಅಧ್ಯಕ್ಷ ವಿಲಾಸವತಿ ಖೂಬಾ ಹೇಳಿದರು.
ನಗರದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮೈಸೂರ ವಿಶ್ವವಿದ್ಯಾಲಯ ಕುವೆಂಪು ಕನ್ನಡ ಅಧ್ಯಯನ ಪ್ರಾಧ್ಯಾಪಕ ಡಾ. ವಿಜಯಕುಮಾರಿ ಕರಿಕಲ್ ಮಾತನಾಡಿ, ಹೆಣ್ಣು ನಡೆದು ಬಂದ ದಾರಿಯನ್ನು ವಿಸ್ತಾರವಾಗಿ ವಿವರಿಸಿ ಇಂದಿನ ಯುಗದಲ್ಲಿ ಮತ್ತೆ ಹೆಣ್ಣುಮಕ್ಕಳ ಮೇಲೆ ನಡೆಯುವ ಶೋಷಣೆ ದುರಂತ ಎಂದರು.
ಶರಣಬಸವೇಸ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಸವರಾ ಎವಲೆ ಮಾತನಾಡಿ, ಮಹಿಳಾ ಸಂರಕ್ಷಣಾ ಘಟಕವನ್ನು ಸ್ಧಾಪಸಲಾಗಿದ್ದು, ಅದರ ಮೂಲಕ ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಬಗೆಹರಿಸಲಾಗುವುದು.
ಈ ಕಾಲದಲ್ಲಿ ವಿದ್ಯಾರ್ಥಿನಿಯರು ಯಾವುದೇ ಕ್ಷೇತ್ರದಲ್ಲಿಯೂ ಹಿಂದೆ ಇಲ್ಲ. ಸ್ತ್ರೀಯರ ಮೇಲೆನಡೆಯುತ್ತಿರುವ ಶೋಷಣೆ ನಿಲ್ಲಬೇಕೆಂದರು.
ಮಹಿಳಾ ಸಂರಕ್ಷಣಾ ಘಟಕದ ಸಂಯೋಜಕ ಡಾ. ಎಚ್. ಸ್ವರೂಪರಾಣಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಡಾ. ಲತಾ ಕರಿಕಲ್ ಮತ್ತು ಉಮಾಮಹೇಶ್ವರಿ ಅವರು ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಸವಿತಾ.ಎಚ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಚಂದ್ರಿಕಾ ಇಂಜಳಿಕರ್ ಅವರು ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

