ಗುಲ್ಬರ್ಗಾ

ಭಾಷೆ ನಿಂತ ನೀರಲ್ಲ, ನಿರಂತರ ಬೆಳೆಯುತ್ತಿರುತ್ತದೆ: ಸಿದ್ದಪ್ಪ ಹೊಟ್ಟಿ

Published On :

ಯಾದಗಿರಿ: ಭಾಷೆ ನಿಂತ ನೀರಲ್ಲ. ಅದು ನಿರಂತರ ಬದಲಾಗುತ್ತ ಹೊಸ ಪದಗಳನ್ನು ಒಳಗೊಳ್ಳುತ್ತ ಬೆಳೆಯುತ್ತಿರುತ್ತದೆ. ಭಾಷೆಗೆ ತನ್ನದೇ ಆದ ವಿಶಿಷ್ಟ ಶಕ್ತಿಯಿದೆ. ಅದರಲ್ಲೂ ಕನ್ನಡಕ್ಕೆ ಈ ನಿಟ್ಟಿನಲ್ಲಿ ವಿಶೇಷ ಸ್ಥಾನವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು. ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ಭಾಷಾ ಕಮ್ಮಟ ಉದ್ಘಾಟಿಸಿ ಮಾತನಾಡಿ, ಕನ್ನಡ ಕುರಿತು ಇಂದಿನ ಯುವ ಪೀಳಿಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಭಾಷೆಯನ್ನು ಸಮರ್ಥವಾಗಿ ಬಳಸುವುದನ್ನು ಕಲಿಯಬೇಕು. ವಿಶ್ವದಲ್ಲಿಯೇ ನಮ್ಮ ಕನ್ನಡ, ಸಂಸ್ಕೃತಿ, ಪರಂಪರೆಗೆ ಆಗ್ರ ಸ್ಥಾನವಿದೆ. ಬಾಷೆ ಉಳಿದು ಬೆಳೆಯಬೇಕಾದರೆ ಪ್ರತಿಯೊಬ್ಬರೂ ಅದನ್ನು ಹೆಚ್ಚು ಬಳಸುವುದು ಅಗತ್ಯ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಮಾತೃ ಭಾಷಾ ಪ್ರೇಮ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಕನ್ನಡಿಗರಲ್ಲಿ ಬೆಳೆಯಲಿ ಸ್ವಾಭಿಮಾನ: ಚಂದ್ರಶೇಖರ ವಿದ್ಯಾಸಂಸ್ಥೆಯ ಪ್ರಾಂಶುಪಾಲ ರಘುನಾಥರಡ್ಡಿ, ಕನ್ನಡ ಭಾಷೆಗೆ ತನ್ನದೇ ಆದ ವಿಶಿಷ್ಟ ಸ್ಥಾನಮಾನ, ಪುರಾತನ ಇತಿಹಾಸವಿದೆ. ಆದ್ದರಿಂದ ಉಜ್ವಲ ಭವಿಷ್ಯವಿದ್ದು, ಆ ನಿಟ್ಟಿನಲ್ಲಿ ಶಾಸ್ತ್ರೀಯ ಭಾಷೆ ಬೆಳವಣಿಗೆಗೆ ಶ್ರಮಿಸುವ ಅಗತ್ಯವಿದೆ. ಕನ್ನಡಿಗರು ಸ್ವಾಭಿಮಾನ ಬೆಳೆಸಿಕೊಂಡಲ್ಲಿ ಭಾಷೆ ಬೆಳವಣಿಗೆ ಸಾಧ್ಯ ಎಂದರು. ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಜನಪದ ಸಾಹಿತ್ಯ ಕುರಿತು ಪ್ರಬಂಧ ಮಂಡನೆ ಮಾಡಿದರು. ಡಾ. ಮಾಣಿಕಪ್ಪ ಕನ್ನಡ ಭಾಷೆಯ ಶಾಸ್ತ್ರೀಯ ಹಿನ್ನೆಲೆ, ಸ್ವರೂಪದ ಕುರಿತು ಉಪನ್ಯಾಸ ನೀಡಿದರು. ಗುರುಲಿಂಗಯ್ಯ ಹಳೆ ಕನ್ನಡ ಕಾವ್ಯಗಳ ಓದು ಮತ್ತು ಗ್ರಹಿಕೆ ಬಗ್ಗೆ ಮಾತನಾಡಿದರು.
---
ರೇಲ್ವೆ ಹಳಿ ಮೇಲೆ ಮಕ್ಕಳಿಬ್ಬರ ಶವ ಪತ್ತೆ
ಯಾದಗಿರಿ: ಇಲ್ಲಿಯ ರೇಲ್ವೆ ನಿಲ್ದಾಣದ ಸಮೀಪ ರೇಲ್ವೆ ಹಳಿಯ ಮೇಲೆ ಮಕ್ಕಳಿಬ್ಬರ ಶವ ಶುಕ್ರವಾರ ಪತ್ತೆಯಾಗಿವೆ. ಸುಮಾರು 6 ವರ್ಷದ ಹೆಣ್ಣು ಮಗು ಹಾಗೂ 8 ವರ್ಷದ ಗಂಡು ಮಗುವಿನ ಶವಗಳು ಪತ್ತೆಯಾಗಿವೆ. ರಾಯಚೂರು ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗುತ್ತಿದೆ. ಮೃತ ಮಕ್ಕಳ ಗುರುತು ಪತ್ತೆ ಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.