ಚೆನ್ನಬಸವ ಶಿವಯೋಗಿಗಳ ರಥೋತ್ಸವ
ಕನ್ನಡಪ್ರಭ ವಾರ್ತೆ ಚಿಂಚೋಳಿ ಮಾ.22
ಪಟ್ಟಣದ ಲಿಂಗೈಕ್ಯ ಸದ್ಗುರು ಹಾರಕೂಡ ಚಿಂಚೋಳಿ ಚೆನ್ನಬಸವ ಶಿವಯೋಗಿಗಳ 62ನೇ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಥೋತ್ಸವ ಸಾವಿರಾರು ಭಕ್ತ ಜನಸಾಗರ ಮಧ್ಯೆ ನೆರವೇರಿತು.
ಪಟ್ಟಣದ ಹೊರವಲಯದ ಮುಲ್ಲಾಮಾರಿ ನದಿ ದಂಡೆಯ ಪಂಚಲಿಂಗೇಶ್ವರ ತೇರ ಮೈದಾನದಲ್ಲಿ ಗುರುವಾರ ಜರುಗಿದ ರಂಗುರಂಗಿನ ಹೂವುಗಳಿಂದ ಅಲಂಕರಿಸಿದ ರಥವನ್ನು ಭಕ್ತರು ಎಳೆದರು. ಉತ್ತುತ್ತಿ, ಬಾಳೇಹಣ್ಣು, ನಾಣ್ಯಗಳು, ಹೂವುಗಳು ತೇರಿನ ಮೇಲೆ ಎಸೆದು ತಮ್ಮ ಭಕ್ತಿ ಸಲ್ಲಿಸಿದರು.
ಹಾರಕೂಡ ಚಿಂಚೋಳಿ ಪೀಠಾಧಿಪತಿ ಚೆನ್ನವೀರ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು. ಸುಭಾರ್ಷ ಸೀಳಿನ್ ರಾಜಶೇಖರ ಮಜ್ಜಗಿ, ರೇವಣಸಿದ್ದಪ್ಪ ಮಜ್ಜಗಿ, ಸಂತೋಷ ಗಡಂತಿ, ನಾಗರಾಜ ಗುಲ್ಬರ್ಗ, ಭೀಮಶೆಟ್ಟಿ ಜಾಬಶೆಟ್ಟಿ, ಭೀಮಶೆಟ್ಟಿ ಪಾಟೀಲ್, ಅಜೀತ ಪಾಟೀಲ್, ಗೌತಮ್ ಪಾಟೀಲ್, ಮಲ್ಲಿಕಾರ್ಜುನ ಪಾಲಮೂರ ರಮೇಶ ಬೇಕರಿ, ಮಲ್ಲಿಕಾರ್ಜುನ ಅಲ್ಲಾಪುರ, ಭೋಗಲಿಂಗಪ್ಪ ಬಬಲಾದಿ, ವೀರುಪಾಕ್ಷ ಎಂಪಳ್ಳಿ, ಜಗದೀಶ ಠಾಕೂರ, ಶಂಕರ ಹಿಪ್ಪರಗಿ ಇತರರು ರಥೋತ್ಸವದ ನೇತೃತ್ವ ವಹಿಸಿದ್ದರು.
ರಥೋತ್ಸವದ ನಂತರ ಜರುಗಿದ ಶಿವಾನುಭವ ಚಿಂತನಗೋಷ್ಠಿ ಸಮಾರಂಭವನ್ನು ವಿಶ್ವರಾಧ್ಯ ಸಿದ್ಧಸಂಸ್ಥಾನಮಠ ಸುಕ್ಷೇತ್ರ ಅಬ್ಬೆತುಮಕೂರು ಡಾ. ಗಂಗಾಧರ ಶಿವಾಚಾರ್ಯರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಮಾಜಿ ಸಚಿವ ಸುನೀಲ್ ವಲ್ಯಾಪುರೆ, ರಮೇಶ ಯಾಕಾಪುರ, ಮಲ್ಲಿಕಾರ್ಜುನ ಗಾಜರೆ, ಸುಭಾಷ ರಾಠೋಡ, ಜ್ಞಾನೇಶ್ವರಿ ವೈಜನಾಥ ಪಾಟೀಲ್, ಕಲ್ಲಪ್ಪ ಹೋಗತಾಪುರ ಇದ್ದರು. ಸಂತೋಷ ಕಡಗದ ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಲಾಮೂರ ನಿರೂಪಿಸಿದರು. ನವಲಿಂಗ ಪಾಟೀಲ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

