ಗುಲ್ಬರ್ಗಾ

ಆರೋಗ್ಯಕ್ಕೆ ಮೊದಲಾದ್ಯತೆ ಕೊಡಿ

Published On :

ಸುರಪುರ: ಗ್ರಾಮೀಣ ಜನತೆ ಆರೋಗ್ಯಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಜೋಷಿ ಸಲಹೆ ನೀಡಿದರು.
  ಕುಂಬಾರಪೇಟೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಗರ್ಭಿಣಿಯರಿಗೆ ಪ್ರಸೂತಿ ಹಣ, ಜನನಿ ಸುರಕ್ಷಾ ಯೋಜನೆ, ಮಡಿಲು ಕಿಟ್ ಮತ್ತು ಜೆಎಸ್‌ಎಸ್‌ಎಸ್‌ಕೆ ಯೋಜನೆಗಳನ್ನು ನೀಡುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೆರಿಗೆ ಆಸ್ಪತ್ರೆಯಲ್ಲೇ ನಡೆಯಲಿ: ಹಿರಿಯ ಆರೋಗ್ಯ ಸಹಾಯಕ ಅಮರಪ್ಪ ಮಾತನಾಡಿ, ಶಿಶು ಮರಣ ಪ್ರಮಾಣ ಪ್ರಸ್ತುತ 1 ಸಾವಿರ ಜನನಕ್ಕೆ 38 ಇದೆ. ಇದನ್ನು ಎನ್‌ಆರ್‌ಎಚ್‌ಎಂ ಗುರಿಯಂತೆ 20ಕ್ಕೆ ಇಳಿಸಬೇಕು. ಆದ್ದರಿಂದ ಎಲ್ಲ ಹರಿಗೆಗಳು ಆಸ್ಪತ್ರೆಯಲ್ಲಿ ಆಗಬೇಕು ಎಂದರು.
  ಮಗು ಜನಸಿದ ಅರ್ಧ ಗಂಟೆಯೊಳಗೆ ತಾಯಿ ಹಾಲು ಕುಡಿಸಬೇಕು. ಏಳು ಮಾರಕ ರೋಗಗಳಿಗೆ ಲಸಿಕೆ ಹಾಕಿಸಬೇಕು. ಗರ್ಭಿಣಿ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುವುದು ಮತ್ತು ಸಕಾಲಕ್ಕೆ ವೈದ್ಯಕೀಯ ಚಿಕತ್ಸೆ ಪಡೆಯುವುದರಿಂದ ಶಿಶು ಮರಣವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
  ಪುರಸಭೆ ಸದಸ್ಯೆ ಗುರುಬಾಯಿ ವಾಲಿ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸಹಾಯಕ ಸಂಗಣ್ಣ ಚೆಟ್ಟಿ ಸ್ವಾಗತಿಸಿದರು. ಸುಮಂಗಲಾ ನಿರೂಪಿಸಿ ವಂದಿಸಿದರು.
  ಕಾರ್ಯಕ್ರಮದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು 80 ಜನ ತಾಯಂದಿರು ತಮ್ಮ ಮಕ್ಕಳೊಂದಿಗೆ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.