ಮೂಲ ಸೌಕರ್ಯಕ್ಕೆ ಜೈಕರವೇ ಆಗ್ರಹ
ಕನ್ನಡಪ್ರಭ ವಾರ್ತೆ,ಗುಲ್ಬರ್ಗ,ಮಾ.26
ಕುಸನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಾಗರಗಾ ಗ್ರಾಮ ಸಂಪೂರ್ಣವಾಗಿ ಮೂಲ ಸೌಕರ್ಯಗಳಿಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಸೌಲಭ್ಯ ಕಲ್ಪಿಸಬೇಕೆಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಸುಮಾರು 10-15 ಕೊಳವೆ ಬಾವಿಗಳಿದ್ದು ಹಾಳು ಬಿದ್ದಿವೆ. ಅವುಗಳ ಹೂಳು ತೆಗೆಯಲು ಕ್ರಮ ಕೈಗೊಳ್ಳಬೇಕು. ಗ್ರಾಮದ ನಾಲ್ಕು ಕಡೆ ಬೊರವೆಲ್ಗಳ ಅವಶ್ಯಕತೆಯಿದೆ. ಬಡಿಗೇರ ಓಣಿ, ಸರಸ್ವತಿ ನಗರ, ಜಿಡ್ಡಿ ಹಾಗೂ ಸೇವಾಲಾಲ್ ತಾಂಡಾದಲ್ಲಿ ಬೋರ್ವೆಲ್ ಹಾಕಿಸಬೇಕೆಂದು ಒತ್ತಾಯಿಸಿದರು.
ಸರಸ್ವತಿ ನಗರದಲ್ಲಿ ರಸ್ತೆ ಇಲ್ಲದೆ ಜನರು ವಂಚಿತರಾಗಿದ್ದಾರೆ. ಸಂಪೂರ್ಣವಾಗಿ ಸಿಸಿ ರಸ್ತೆ ನಿರ್ಮಿಸಬೇಕು, ಅಗಸಿಯಲ್ಲಿ ಬರುವ ದೇವಸ್ಥಾನದಿಂದ ಬಡಿಗೇರ ಓಣಿ ಸ್ವಾಮಿ ಮನೆಯವರೆಗೆ ಸಿಸಿ ರಸ್ತೆ ನಿರ್ಮಾಣ ಮಾಡಬೇಕು ಮತ್ತು ತೆರೆದ ನಾಲೆಗಳ ವ್ಯವಸ್ಥೆ ಮಾಡಬೇಕು, 1996ರಲ್ಲಿ ಗ್ರಂಥಾಲಯ ಪ್ರಾರಂಭವಾಗಿದ್ದರು ಯಾರಿಗೂ ಪ್ರಯೋಜನವಾಗಿಲ್ಲ. ಓದುವುದಕ್ಕೆ ಯಾವುದೇ ಪುಸ್ತಕಗಳು ಲಭ್ಯವಿರುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬಡವರಿಗೆ, ಹಿಂದುಳಿದವರಿಗೆ, ಅಲ್ಪ ಸಂಖ್ಯಾತರಿಗೆ, ದೀನ ದಲಿತರಿಗೆ, ಅಂಗವಿಕಲರಿಗೆ ವಾಸಿಸಲು ರಾಜೀವಗಾಂಧಿ ವಸತಿ ಯೋಜನೆಯಡಿಯಲ್ಲಿ ಮನೆಗಳು ಕಟ್ಟಿಕೊಳ್ಳಲಿಕ್ಕೆ ಹಣ ಮಂಜೂರು ಮಾಡಬೇಕು, ಮಹಿಳೆಯಿರಿಗೆ ಶೌಚಾಲಯ ನಿರ್ಮಿಸಿಕೊಡಬೇಕು, ಸುವರ್ಣ ಗ್ರಾಮ ಯೋಜನೆಯಡಿ ಸಾರ್ವಜನಿಕರಿಗೆ ಸಮುದಾಯ ಭವನ ನಿರ್ಮಿಸಬೇಕು, 15 ದಿನದೊಳಗೆ ಈ ಕೆಲಸಗಳನ್ನು ಕೈಗೊಳ್ಳದಿದ್ದರೆ ಜೈ ಕರ್ನಾಟಕ ರಕ್ಷಣಾ ವೇದಿಕೆ ಕುಸನೂರು ಪಂಚಾಯತಿ ಕಾರ್ಯಾಲಯ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗವುದೆಂದು ಕುಸನೂರು ಗ್ರಾಪಂ ಅಧ್ಯಕ್ಷರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜೈಕರವೇ ರಾಜ್ಯ ಉಪಾಧ್ಯಕ್ಷ ಮಂಜುನಾಥ ಬಿ. ಹಾಗರಗಿ, ಜಿಲ್ಲಾ ಕಾರ್ಯಧ್ಯಕ್ಷ ಸಚಿನ್ ಎಸ್. ಫರಹತಾಬಾದ್, ಹಾಗರಗಾ ಗ್ರಾಮ ಘಟಕ ಅಧ್ಯಕ್ಷ ಶಿವಕುಮಾರ ಬಿ. ಬಿರಾದಾರ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

