ಕನ್ನಡಪರ ಸಂಘಟನೆಗಳ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕೆ: ಪಡುಕೋಟೆ
ಕ.ಪ್ರ. ವಾರ್ತೆ,ಶಹಾಪುರ,ಮಾ.26
ಕಳೆದ ಹಲವು ವರ್ಷಗಳಿಂದ ಕನ್ನಡ ನೆಲ, ಜಲ ರಕ್ಷಣೆಗಾಗಿ ಶ್ರಮಿಸುತ್ತ ನಾಡಿನ ರೈತ, ನಿರ್ಗತಿಕರ ಧ್ವನಿಯಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಲ್ಲಿ ಜನಪರ ಕಾರ್ಯ ಮಾಡುತ್ತಿದೆ. ಇಂದಿನ ಕಲುಷಿತ ರಾಜಕೀಯ ವ್ಯವಸ್ಥೆಯಲ್ಲಿ ಕನ್ನಡ ನಾಡು ಹಲವು ಸೌಲಭ್ಯದಿಂದ ವಂಚಿತವಾಗುತ್ತಿದ್ದು, ಕನ್ನಡ ನಾಡಿನ ಜನರ ಆಶೋತ್ತರದ ಮೇರೆಗೆ ರಾಜ್ಯದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕರವೇ ಸ್ಪರ್ಧಿಸುತ್ತಿದೆ. ಶಹಾಪುರ ಕ್ಷೇತ್ರದಿಂದ ತಾವು ಕಣಕ್ಕಿಳಿಯುವುದಾಗಿ ಕರವೇ ರಾಜ್ಯ ಸಂಚಾಲಕ ಬಸವರಾಜ ಪಡುಕೋಟೆ ತಿಳಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ನೇತೃತ್ವದ ರಕ್ಷಣಾ ವೇದಿಕೆಯ ಸಿದ್ದಾಂತಗಳ ನೆಲೆಗಟ್ಟಿನ ಮೇಲೆ ಕನ್ನಡಪರ ಸಂಘಟನೆಗಳ ಬೆಂಬಲಿತರಾಗಿ ಮತ್ತು ಈ ಭಾಗದ ಜನತೆಯ ವಿಶ್ವಾಸದ ಮೇರೆಗೆ ಶಹಾಪುರ ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುತ್ತಿದ್ದೇನೆ.
ತಾಲುಕಿನ ಒಟ್ಟು 118 ಗ್ರಾಮಗಳಲ್ಲಿ ಕರವೇ ಗ್ರಾಮ ಶಾಖೆಗಳನ್ನು ಹೊಂದಿದೆ. ಈ ಹಿಂದೆ ಮತ ಪಡೆದು ವಿಧಾನಸಭೆಗೆ ಆಯ್ಕೆಗೊಂಡ ಶಾಸಕರು ಮಾಡಬೇಕಾದಂತಹ ಅಭಿವೃದ್ಧಿ ಕಾರ್ಯಗಳನ್ನು ಕರವೇ ಕಾರ್ಯಕರ್ತರು ಹೋರಾಟದ ಮುಖಾಂತರ ಮಾಡಿದ್ದಾರೆ. ಹಲವು ಹಳ್ಳಿಗಳಿಗೆ ಮೂಲಸೌಕರ್ಯ ದೊರಕಿಸಿದ್ದಾರೆ.
ನಾಡಿನ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿ ಅನೂಕೂಲ ಮಾಡಿಕೊಡಲಾಗಿದೆ. ಕನ್ನಡ ನಾಡಿನ ಜನರ ಅಶೋತ್ತರಗಳಿಗೆ ಸ್ಪಂದಿಸುತ್ತ ಕರವೇ ರಾಜ್ಯಾದ್ಯಂತ ಸಹಸ್ರಾರು ಕಾರ್ಯಕರ್ತರ ಪಡೆಯನ್ನು ಹೊಂದಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿ ಶಹಾಪುರ ಮತಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಅವರು ಸ್ಪಷ್ಟಪಡಿಸಿದರು.
ಕಲ್ಯಾಣ ಕರ್ನಾಟಕ ಯುವ ಸೇನೆ ಹಾಗೂ ಕಸ್ತೂರಿ ಕನ್ನಡ ಜನಪರ ವೇದಿಕೆ ತಮ್ಮ ಬೆಂಬಲ ವ್ಯಕ್ತಪಡಿಸಿವೆ ಎಂದು ಕರ್ನಾಟಕ ಯುವ ಸೇನೆಯ ರಾಜ್ಯಾಧ್ಯಕ್ಷ ಅಮರೇಶ ಬಿಲ್ಲವ ತಿಳಿಸಿದರು. ಕರವೇ ತಾಲುಕಾ ಅಧ್ಯಕ್ಷ ಅಬ್ದುಲ್ ಹಾದಿಮನಿ, ಕರವೇ ವಿದ್ಯಾರ್ಥಿ ಘಟಕದ ಸಂಚಾಲಕ ಕರಿಬಸವ ಬಿಳಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

