ಗುಲ್ಬರ್ಗಾ

ಮಹಿಳೆಗೆ ಜೀವ ಬೆದರಿಕೆ: ದೂರು

Published On :

ಗುಲ್ಬರ್ಗ: ಅಂಬಾರಾಯ ಜಿ. ನಾಟೀಕಾರ್ ಎಂಬಾತನು ಪಕ್ಕದ ಮನೆಯ ಮಹಿಳೆಗೆ ವಿನಾಕಾರಣ ಗಂಡ ಮನೆಯಲ್ಲಿ ಇಲ್ಲದ ಸಮಯದಲ್ಲಿ ಬಂದು ಕಿರುಕುಳ ನೀಡಿ ತೊಂದರೆ ಮಾಡಿ ಜೀವ ಬೆದರಿಕೆ ಹಾಕುತ್ತಿರುವ ಘಟನೆ ಆಳಂದ ತಾಲೂಕಿನ ಜವಳಗಾ (ಬಿ) ಗ್ರಾಮದಲ್ಲಿ ನಡೆದಿದೆ. ನಮ್ಮ ಏರಿಯಾದಲ್ಲಿದ್ದೀರಿ ನಾನು ಹೇಳಿದಂತೆ ಕೇಳಬೇಕು ಎಂದು ಪ್ರಾಣ ಬೆದರಿಕೆ ಹಾಕುತ್ತಿದ್ದಾರೆಂದು ನೊಂದ ಮಹಿಳೆ ನರೋಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಗೂ ಹಾಗೂ ಪತಿಗೂ ಬೆದರಿಸುತ್ತಿದ್ದಾನೆ. ರಾಜಕೀಯ ಬೆಂಬಲವಿರುವುದರಿಂದ ಈ ತೆರನಾಗಿ ವರ್ತಿಸುತ್ತಿದ್ದಾನೆ. ಈ ಕುರಿತು ಅಂಬಾರಾಯ ಅವರ ತಂದೆ, ಅಣ್ಣಂದಿರಿಗೂ ತಿಳಿಸಿದರೂ ಆತನ ಪರವಾಗಿ ಮಾತನಾಡುತ್ತಿದ್ದಾರೆ. ಹೀಗಾಗಿ ಎಲ್ಲರ ವಿರುದ್ಧ ಮಹಿಳಾ ಹಕ್ಕು ಮತ್ತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ತನಗೆ ಮತ್ತು ಪೋಷಕರಿಗೆ ರಕ್ಷಣೆ ನೀಡಬೇಕೆಂದು ಮಹಿಳೆ ದೂರಿನಲ್ಲಿ ಕೋರಿದ್ದಾರೆ.
ಜಂಗಮ ಸಮಾಜ ಮಹಿಳಾ ಘಟಕ ರಚನೆ
ಗುಲ್ಬರ್ಗ/ಶಹಾಬಾದ್: ವಾಡಿ ಪಟ್ಟಣದಲ್ಲಿ ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾದ ವತಿಯಿಂದ ಶ್ರೀಶೈಲ್ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ನೂತನ ಮಹಿಳಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಲಕ್ಷ್ಮೀ ಮಲ್ಲಿಕಾರ್ಜುನ ಮಾಲಗತ್ತಿ (ಅಧ್ಯಕ್ಷರು), ಅನ್ನಪೂಣಮ್ಮ ಸಂಗಯ್ಯಸ್ವಾಮಿ, ಶಾಂತಿಬಾಯಿ ಬಸಯ್ಯ ಸ್ಥಾವರ ಮಠ (ಉಪಾಧ್ಯಕ್ಷರು), ಶರಣಮ್ಮ ಉಮಾಕಾಂತಸ್ವಾಮಿ ಪ್ರಧಾನ ಕಾರ್ಯದರ್ಶಿ), ರಾಜೇಶ್ವರಿ ಮಹಾದೇವ, ಸೋದರಬಾಯಿ ಶರಣಯ್ಯ (ಜಂಟಿ ಕಾರ್ಯದರ್ಶಿ), ಸಿದ್ದಮ್ಮ ಶರಣಯ್ಯ (ಖಜಾಂಚಿ), ಗುರುಬಾಯಿ ಶಿವಶಂಕರಯ್ಯ ಸುಧಾ ನೂರಂದಯ್ಯ, ಉಮಾದೇವಿ ಗುರುಲಿಂಗಯ್ಯ, ಶರಣಮ್ಮ ಸಿದ್ದಯ್ಯ, ಕರಣಮ್ಮ ಮಲ್ಲಿಕಾರ್ಜುನ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ತಾಲೂಕು ಅಧ್ಯಕ್ಷ ನೀಲಯ್ಯ ಸ್ವಾಮಿ, ವಾಡಿ ಅಧ್ಯಕ್ಷ ತಿಪ್ಪಯ್ಯಸ್ವಾಮಿ, ಶಂಕ್ರಯ್ಯ ಸ್ವಾಮಿ, ಮಲ್ಲಯ್ಯ ಸ್ವಾಮಿ, ಸಿದ್ದಯ್ಯ ಸ್ವಾಮಿ ಶಾಸ್ತ್ರಿ, ಅಮರಯ್ಯ ಸ್ವಾಮಿ, ನೂರಂದಯ್ಯ ಸ್ವಾಮಿ ಮಠಪತಿ ಸೇರಿದಂತೆ ಜಂಗಮ ಸಮಾಜದ ಗಣ್ಯರು ಪಾಲ್ಗೊಂಡಿದ್ದರು.
25 ಸಹಕಾರ ಸಂಘಗಳು ರದ್ದು
ಗುಲ್ಬರ್ಗ: ಗುಲ್ಬರ್ಗದ 25 ಸಹಕಾರ ಸಂಘಗಳನ್ನು, ಅಧಿನಿಯಮ 1959ರ ಕಲಂ 72ರಡಿ ರದ್ದುಗೊಳಿಸಬೇಕಾಗಿದೆ. ಈ ಪ್ರಯುಕ್ತ ಏನಾದರೂ ಆಕ್ಷೇಪಣೆ ಇದ್ದರೆ ಸಂಬಂಧಿಸಿದ ಸಂಘದ ಸದಸ್ಯರು ಲಿಖಿತವಾಗಿ ಗುಲ್ಬರ್ಗದ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಗೆ ಸಲ್ಲಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.