ಗುಲ್ಬರ್ಗಾ

ಸಂಗೀತ ಮನಸ್ಸಿಗೆ ಮುದ ನೀಡುವ ದಿವ್ಯೌಷಧ: ವೆಂಕಟೇಶ ಆಲಕೋಡ

Published On :

ಕೆಂಭಾವಿ: ಸಂಗೀತ ಎಂಬುದು ಮನಸ್ಸಿಗೆ ಮುದ ನೀಡುವ, ಮಾನಸಿಕ ತುಮುಲತೆಗಳನ್ನು ಹೋಗಲಾಡಿಸುವ ದಿವ್ಯ ಔಷಧವಾಗಿದೆ. ಸಂಗೀತವನ್ನು ಕೇಳುಗರ ಮನಮುಟ್ಟುವಂತೆ ಸುಶ್ರಾವ್ಯವಾಗಿ, ಸಾಹಿತ್ಯ ಲೋಪವಾಗದೆ ಹಾಡುವುದು ಪ್ರತಿಯೊಬ್ಬ ಸಂಗೀತಗಾರನ ಕರ್ತವ್ಯವಾಗಿದೆ ಎಂದು ಖ್ಯಾತ ಹಿಂದುಸ್ತಾನಿ ಸಂಗೀತ ಕಲಾವಿದ ಬೆಂಗಳೂರಿನ ವೆಂಕಟೇಶ ಆಲಕೋಡ ಅಭಿಪ್ರಾಯಪಟ್ಟರು. ಪಟ್ಟಣದ ಉತ್ತರಾದಿ ಮಠದಲ್ಲಿ ಶನಿವಾರ ಜಯಸತ್ಯಪ್ರಮೋದ ಸೇವಾ ಸಂಘದ ವತಿಯಿಂದ ಏರ್ಪಡಿಸಿದ್ದ ದಾಸ ವೈಭವ ಕಾರ್ಯಕ್ರಮದಲ್ಲಿ ತಮ್ಮ ಸಂಗೀತವನ್ನು ಪ್ರಸ್ತುತಪಡಿಸುವ ಮೊದಲು ಅವರು ಮಾತನಾಡಿದರು.
ಸಂಗೀತ ವಿದ್ಯೆಗೆ ಜಾತಿ ಭೇದವಿಲ್ಲ. ಆದರೆ ನಿಷ್ಠೆ ಎಂಬ ಮಂತ್ರದಿಂದ ಅದನ್ನು ಸಾಧಿಸಿಕೊಂಡಾಗ ಮಾತ್ರ ಸಂಗೀತ ಶಾರದೆ ಒಲಿಯಲು ಸಾಧ್ಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತಾವು ಕಲಿತ ಗದುಗಿನ ಸಂಗೀತ ಸಾಮ್ರಾಟ ಪುಟ್ಟರಾಜ ಗವಾಯಿಗಳ ಸ್ಮರಣೆ ಮಾಡಿ ಕಾರ್ಯಕ್ರಮ ನಡೆಸಿಕೊಟ್ಟರು. ಬಸವರಾಜ ಬಂಟನೂರ ಹಾರ್ಮೋನಿಯಂ ಸಾಥ್, ಯಮುನೇಶ ಯಾಳಗಿ ತಬಲಾ ಸಾಥ್ ನೀಡಿದರು. ನಂತರ ಜಯಸತ್ಯಪ್ರಮೋದ ಸೇವಾ ಸಂಘದ ಅಧ್ಯಕ್ಷ ಸುರೇಂದ್ರರಾವ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.