ಗುಲ್ಬರ್ಗಾ

ಕಾಂಗ್ರೆಸ್‌ನಿಂದ ಮಾತ್ರ ಎಲ್ಲರ ಶ್ರೇಯೋಭಿವೃದ್ಧಿ; ದರ್ಶನಾಪುರ

Published On :

ಕೆಂಭಾವಿ: ಹಿಂದುಳಿದವರು, ಅಲ್ಪಸಂಖ್ಯಾತರು, ದೀನ ದಲಿತರುಪ ಸೇರಿದಂತೆ ಎಲ್ಲ ವರ್ಗದ ಜನಾಂಗದ ಶ್ರೇಯೋಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಆದ್ದರಿಂದ ಕಾಂಗ್ರೆಸ್‌ಗೆ ಮತ ಹಾಕಿ, ಅಭಿವೃದ್ಧಿಗೆ ಸಹಕರಿಸಿ ಎಂದು ಶಹಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಬಸಪ್ಪ ದರ್ಶನಾಪುರ ಹೇಳಿದರು.
ಜನಪರ ಕಾರ್ಯ: ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿ ಮಾತನಾಡಿದರು. ನಾನು ಶಾಸಕನಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇನೆ. ಕೆಲವೊಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹಿಂದಿನ ಅವಧಿಯಲ್ಲಿ ಸಾಧ್ಯವಾಗಿಲ್ಲ. ಅದಕ್ಕಾಗಿ ಕ್ಷಮೆ ಕೋರುತ್ತೇನೆ. ಆದರೆ ನಾನು ಮುಂದಿನ ದಿನಗಳಲ್ಲಿ ಎಲ್ಲ ಕೆಲಸಗಳನ್ನು ಮಾಡಿ ತೋರಿಸುತ್ತೇನೆ. ಆದ್ದರಿಂದ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.
ಸಿದ್ದನಗೌಡ ಪೊಲೀಸ ಪಾಟೀಲ, ಲಿಂಗನಗೌಡ ಮಾಲಿಪಾಟೀಲ, ವಾಮನರಾವ ದೇಶಪಾಂಡೆ, ಅಮೀನರಡ್ಡಿ ಯಾಳಗಿ, ಬಸನಗೌಡ ಹೊಸಮನಿ, ಮಲ್ಲಣ್ಣ ಮೇಟಿ, ಗಿರೆಪ್ಪಗೌಡ ಬಾಣತಿಹಾಳ, ಅಮೀನರೆಡ್ಡಿ ಕಿರದಳ್ಳಿ, ಬಸವರಾಜ ವಿಭೂತಿಹಳ್ಳಿ, ಮಲ್ಲಣ್ಣ ಹೆಗ್ಗೇರಿ, ಪಿಡ್ಡಪ್ಪ ಅಣಬಿ, ಯಂಕನಗೌಡ ಪೊಲೀಸ ಪಾಟೀಲ, ಖಾಜಾಪಟೇಲ ಕಾಚೂರ, ಬಂದಗಿಸಾ ಸಾಸನೂರ, ರಫೀಕ ಖಾಜಿ ಇದ್ದರು.
ಕೆಜೆಪಿ ತೊರೆದು ಬಸವರಾಜ ಸೊನ್ನದ, ಬಾಳಪ್ಪ ಚಾನಕೋಟಿ, ಲಿಂಗಣ್ಣ ಇಜೇರಿ, ಶರಣಪ್ಪ ನಗನೂರ, ಹಣಮಂತರಾಯ ನಾಗರಾಳ, ಮಲ್ಲಣ್ಣ ಕದನೆಳ್ಳಿ ಕಾಂಗ್ರೆಸ್ ಸೇರಿದರು.
ಕರಡಕಲ್: ಆಂಕ್ರಪ್ರದೇಶ ಸರ್ಕಾರದ ಮುಖ್ಯ ಸಚೇತಕ ರುದ್ರರಾಜು ಪದ್ಮರಾಜು ಅವರು ಮಂಗಳವಾರ ಕರಡಕಲ್ ಗ್ರಾಮಕ್ಕೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಶರಣಬಸಪ್ಪ ದರ್ಶನಾಪುರ ಪರವಾಗಿ ಮತಯಾಚಿಸಿದರು. ಸೋನಿಯಾಗಾಂಧಿ ಹಾಗೂ ಪ್ರಧಾನಿ ಮನಮೋಹನ ಸಿಂಗ್ ಅವರು ಕೇಂದ್ರದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಎಲ್ಲ ಸಮುದಾಯದ ಜನರಿಗೆ ಉತ್ತಮ ಯೋಜನೆಗಳನ್ನು ಹಮ್ಮಿಕೊಂಡು ಸವಲತ್ತುಗಳನ್ನು ನೀಡಿದ್ದಾರೆ. ಬಡವರು, ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಹೊಂದಿದ್ದರೆ ಎಂದ ಅವರು, ರಾಜ್ಯದಲ್ಲಿ ಬಿಜೆಪಿ ದುರಾಡಳಿತದಿಂದ ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.