ನಗರದಲ್ಲಿ ಕೆಜೆಪಿ ಬಿರುಸಿನ ಪ್ರಚಾರ
ಯಾದಗಿರಿ: ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಡಾ.ವೀರಬಸವಂತರಡ್ಡಿ ಮುದ್ನಾಳ ತಮ್ಮ ಅಪಾರ ಬೆಂಬಲಿಗರೊಂದಿಗೆ ನಗರದಲ್ಲಿ ಪ್ರಚಾರ ಕೈಗೊಂಡರು.
ನಗರದ ಸ್ಟೇಷನ್ ಏರಿಯಾದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿ ಮಾತನಾಡಿದ ಅವರು, ಬಿಎಸ್ವೈ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ಜನಪ್ರಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಕೆಜೆಪಿಗೆ ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದರು.
ರಾಜ್ಯ ಕಾರ್ಯದರ್ಶಿ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಡಾ.ಶರಣರಡ್ಡಿ ಕೋಡ್ಲಾ, ಜಿಪಂ ಮಾಜಿ ಅಧ್ಯಕ್ಷೆ ಡಾ.ಶೈಲಜಾ, ಸುನಿತಾ ಚವ್ಹಾಣ, ಬಸವಂತರಾಯಗೌಡ, ಭೀಮಣ್ಣಗೌಡ ಕ್ಯಾತನಾಳ, ವಿನೋದ ಜೈನ್ ಇತರರು ಇದ್ದರು.
ಕೆಜೆಪಿಗೆ ಸೇರ್ಪಡೆ: ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಅನಕಸೂಗೂರ ಮತ್ತು ಗುಂಡಳ್ಳಿ ತಾಂಡದ ಅನೇಕ ಕಾರ್ಯಕರ್ತರು ಡಾ.ವೀರಬಸವಂತರಡ್ಡಿ ಮುದ್ನಾಳ ಸಮ್ಮುಖದಲ್ಲಿ ಕೆಜೆಪಿಗೆ ಸೇರ್ಪಡೆಯಾದರು.
ಮಲ್ಲಿಕಾರ್ಜುನಗೌಡ ಅನಕಸೂಗೂರ, ಮಲ್ಲಪ್ಪ ಪೂಜಾರಿ, ಸಿದ್ದಲಿಂಗಪ್ಪಗೌಡ, ಮಲ್ಲಪ್ಪ ಪೂಜಾರಿ, ನಿಂಗಪ್ಪ ಮುರಡಿ, ರಘಿನಾಥರೆಡ್ಡಿ, ನಿಂಗಣ್ಣ ದೊಡ್ಡಮನಿ, ಸಹುಸನಪ್ಪ ಸುರಪುರ, ಮಾನಪ್ಪ ಅಗಸರ, ಮಡಿವಾಳ ಅಗಸರ, ನಿಂಗಪ್ಪ ಮಂಡ್ಲೇರ್, ಶರಣಪ್ಪ ಪೂಜಾರಿ, ಹಣಮಂತ್ರಾಯ ಕುಂಬಾರ, ರಾಜಾ ಕುಂಬಾರ, ವೆಂಕಟೇಶ ಜಾಲಗಾರ, ತುಳಜಪ್ಪ, ಸಂತೋಷ ಚವ್ಹಾಣ, ಅಶೋಕ, ಚನ್ನುರಾಠೋಡ, ಭೀಮುನಾಯಕ ರಾಠೋಡ್, ದೇಶನಾಯ್ಕ ಚವ್ಹಾಣ, ಶಂಕರ ಮಾಳಪ್ಪ ಸೇರ್ಪಡೆಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

