ಯುವಕರನ್ನೇ ಚುನಾಯಿಸಿ: ಕರ್ನಾಟಕ ಯುವಜನ ಒಕ್ಕೂಟ ಕರೆ
ಕ.ಪ್ರ. ವಾರ್ತೆ, ಗುಲ್ಬರ್ಗ, ಮೇ 1
ಕರ್ನಾಟಕ ಯುವಜನ ಒಕ್ಕೂಟದ ಮಾಸಿಕ ಸಭೆಯಲ್ಲಿ ಪ್ರಸ್ತುತ ರಾಜಕೀಯದ ಸ್ಥಿತಿ ಅವಲೋಕಿಸಲು ರಾಜ್ಯ ಸಂಚಾಲಕ ವಿನೋದಕುಮಾರ ಜನವೇರಿ ಪ್ರಸ್ತಾವನೆ ಮಂಡಿಸಿದ್ದಾರೆ.
ಅದನ್ನು ಕುಲಂಕುಷವಾಗಿ ಎಲ್ಲ ಪದಾಧಿಕಾರಿಗಳು ತಮ್ಮ ವಿಚಾರಗಳನ್ನು ಪ್ರಸ್ತಾಪಿಸಲು ಕೋರಿದರು. ಕೊನೆಯಲ್ಲಿ ರಾಜ್ಯದ ಹಿತಕ್ಕಾಗಿ ಒಂದು ಸರ್ವಸಮ್ಮತ ನಿರ್ಣಯವನ್ನು ಸಂಘಟನೆಯು ಠರಾವು ಪಾಸು ಮಾಡುವ ಮುಖಾಂತರ ಕೈಗೊಳ್ಳಲಾಯಿತು.
ಸಂಘಟನೆಯು ಪಕ್ಷಾತೀತವಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆ ಯಶಸ್ವಿಗೊಳಿಸಲು ಯುವಕರನ್ನೇ ಆರಿಸಿ ತರವಂತೆ ಕಳೆದ ಭಾನುವಾರ ಆಜಾದ್ ಚೌಕ ಬಡಾವಣೆಯ ಸಂಘಟನೆಯ ಕಾರ್ಯಾಲಯದಲ್ಲಿ ಚುನಾವಣಾ ಪೂರ್ವ ವಿಶೇಷ ಸಭೆಯಲ್ಲಿ ಸರ್ವ ಸಮ್ಮತವಾಗಿ ನಿರ್ಣಯಿಸಿತು.
ಮೊದಲಿಗೆ ಸಂಘಟನೆಯ ಅಧ್ಯಕ್ಷರಾದ ಅನಂತಗುಡಿ ಪ್ರಾಸ್ತಾವಿಕ ಮಾತನಾಡಿ, ಸೂಕ್ತ ನಿರ್ಣಯ ತೆಗೆದುಕೊಂಡಲ್ಲಿ ನಮ್ಮ ಭವಿಷ್ಯ ಉಜ್ವಲವಾಗಲು ನಾವು- ನೀವುಗಳೆಲ್ಲರೂ ಕಾರಣೀಕರ್ತರಾಗಬೇಕಾಗಿದೆ ಎಂದು ತಿಳಿಸಿದರು.
ಸಂಘಟನೆಯ ಕಾರ್ಯಧ್ಯಕ್ಷರಾದ ಭೀಮರಾವ ಜೀರಗಿ ತಮ್ಮ ವಿಚಾರಗಳನ್ನು ಸಭೆಯಲ್ಲಿ ಮಂಡಿಸುತ್ತ ಸದ್ಯದ ಸ್ಥಳೀಯ ರಾಜಕೀಯ ಅಸ್ಥಿರತೆ ಬಗ್ಗೆ ತಿಳಿಹೇಳಿದರು. ಯಾವುದೇ ರಾಜಕೀಯ ಪಕ್ಷಗಳಲ್ಲಿ ತತ್ವ ಸಿದ್ಧಾಂತಗಳನ್ನು ಮೂಲೆಗುಂಪು ಮಾಡಿವೆ. ಅದನ್ನು ಕೂಡ ಯುವಕರೆಲ್ಲರೂ ಅವಲೋಕಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಕೋರಿದರು.
ಶ್ರೀಕಾಂತ ಪಾಟೀಲ್ ಮಾತನಾಡಿ, ಪ್ರಸ್ತುತ ರಾಜಕೀಯದಲ್ಲಿ ಪ್ರಮುಖ ಪಕ್ಷಗಳು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮತದಾರರ ಮನೆ ಬಾಗಿಲಿಗೆ ಅಲೆಯುವುದನ್ನು ತಾವೆಲ್ಲರೂ ಗಮನಿಸಿದ್ದೀರಿ. ಆದರೆ ಈ ಪ್ರದೇಶದ ಯುವಕರ ಅಭಿವೃದ್ಧಿಗೆ ಯಾವುದೇ ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಸೂಕ್ತ ಸ್ಥಾನಮಾನ ನೀಡುವಂತಹ ಲಕ್ಷಣ ಕಂಡುಬಂದಿಲ್ಲ. ಅದಕ್ಕೆ ಯುವಕರೆಲ್ಲರು ಒಂದಾಗಿ ಪಕ್ಷಾತೀತವಾಗಿ ಕಣದಲ್ಲಿರುವ ಎಲ್ಲ ಯುವಕರಿಗೆ ಆದ್ಯತೆ ಮೇರೆಗೆ ಚುನಾಯಿಸಲು ನಾನು ತಮ್ಮಲ್ಲಿ ಕೋರುತ್ತೇನೆಂದರು.
ಜಗನ್ನಾಥ ಮಂಠಾಳೆ ಮಾತನಾಡಿ, ಪ್ರಸ್ತುತ ರಾಜಕೀಯ ಕಲುಷಿತಗೊಂಡಿದ್ದು, ಹಿರಿಯರನ್ನು ಅಲಕ್ಷಿಸುವ ಹಾಗಿಲ್ಲ, ಅವರ ನೈಜ ರಾಜಕೀಯ ನಿಲವು ಮನಗೊಂಡು ತಮ್ಮ ಮತದಾನವನ್ನು ಮಾಡಿ ಎಂದು ತಿಳಿಸಿದರು.
ಸಂಘಟನೆಯ ರಾಜ್ಯ ಸಂಚಾಲಕ ನ್ಯಾಯವಾದಿ ವಿನೋದಕುಮಾರ ಜನವೇರಿ ಸಭೆಯನ್ನುದ್ದೇಶಿ ಮಾತನಾಡಿ, ಪ್ರಸ್ತುತ ರಾಜಕೀಯ ಮನ್ವಂತರದಲ್ಲಿ ನಮ್ಮ ಸಂಘಟನೆಯ ಧ್ಯೇಯದಂತೆ ಯುವಕರಿಗೆ ಮಾತ್ರ ಪ್ರೋತ್ಸಾಹಿಸಿ ಆರಿಸಿತರುವಂತೆ ಕರೆ ನೀಡಿದರು.
ಈ ಮಹತ್ವದ ಸಭೆಯಲ್ಲಿ ಸಂಘನೆಯ ಎಲ್ಲ ಪದಾಧಿಕಾರಿಗಳು ಭಾಗವಹಿಸಿರುವುದು ವಿಶೇಷವಾಗಿತ್ತು. ಉಪಾಧ್ಯಕ್ಷರುಗಳಾದ ಮಹಾಂತೇಶ್ವರ ಸಂಗೋಳಿ, ನಾಗಣ್ಣ ಶೀಲವಂತ, ಖಜಾಂಚಿ ಈರಣ್ಣಾ ರಾಂಪುರೆ, ನಾಗರಾಜ ರೋಜಾ, ಸದಸ್ಯರಾದ ಅನಂತ ಜೋಷಿ, ಮಹೆಬೂಬಸಾಬ್ ಶೇಖ್, ರಾಜಣ್ಣಾ ನಿಂಗಾರೆಡ್ಡಿ, ಸಾಗರ ಹಿರೇಮಠ, ನಿಲೇಶ ವರ್ಮ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

