ಯಾರಾಗ್ತಾರೆ ಆಳಂದ ಶಾಸಕ?; ಲೆಕ್ಕಾಚಾರ
ಆಳಂದ: ರಾಜಕೀಯ ಜಿದ್ದಾಜಿದ್ದಿ ನಡುವೆ ತೀವ್ರ ಹಣಾಹಣಿ ಮತ್ತು ಆರೋಪ ಪ್ರತ್ಯಾರೋಪ ಕಂಡಿದ್ದ ಇಲ್ಲಿನ ಚುನಾವಣೆಯಲ್ಲಿ ಯಾರಾಗ್ತಾರೆ ಶಾಸಕರು ಎಂಬ ಲೆಕ್ಕಾಚಾರ ಶುರುವಾಗಿದೆ. ಭಾನುವಾರ ನಡೆದ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಮತದಾರರು ಹಾಗೂ ರಾಜಕೀಯ ಪುಢಾರಿಗಳು ಯಾರು ಗೆಲ್ಲುತ್ತಾರೋ ಇನ್ಯಾರೋ ಸೋಲುತ್ತಾರೆಂದು ಬಿರುಸಿನ ಲೆಕ್ಕಾಚಾರಕ್ಕೆ ತೊಡಗಿದ್ದಾರೆ.
ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರಲ್ಲೂ ಕೆಜೆಪಿ ಅಭ್ಯರ್ಥಿ ಬಿ.ಆರ್.ಪಾಟೀಲ ಅಥವಾ ಜೆಡಿಎಸ್ ಸುಭಾಷ ಗುತ್ತೇದಾರ ಇವರಿಬ್ಬರಲ್ಲಿ ಯಾರು ಗೆಲ್ಲುತ್ತಾರೋ ಎಂಬ ಚರ್ಚೆಗಳಿಗೆ ತೊಡಗಿದ್ದು, ಗಮನಾರ್ಹ ಸಂಗತಿ. ಅನೇಕ ಕಾರ್ಯಕರ್ತರೂ ಸಹ ತಮ್ಮ ನಾಯಕ ಗೆದ್ದರೆ ಹರಕೆ ತೀರಿಸುವ ಬೇಡಿಕೆ ಇಟ್ಟುಕೊಂಡಿದ್ದಾರೆ.
ಮತಕ್ಷೇತ್ರದ ಮಾದನಹಿಪ್ಪರಗಾ, ನಿಂಬರಗಾ, ಆಳಂದ, ಖಜೂರಿ ಹೋಬಳಿಗಳಲ್ಲಿ ಕಳೆದ ಚುನಾವಣೆಗಿಂತ ಈ ಭಾರಿ ಹೆಚ್ಚಿನ ಮತದಾನವಾಗಿದ್ದು, ಕೆಜೆಪಿ ಅಭ್ಯರ್ಥಿ ಬಿ.ಆರ್. ಪಾಟೀಲ ಮತ್ತು ಜೆಡಿಎಸ್ ಅಭ್ಯರ್ಥಿ ಸುಭಾಷ ಗುತ್ತೇದಾರ ಅವರ ನಡುವೆ ಜಿದ್ದಾಜಿದ್ದಿ ಕಂಡುಬಂದಿದೆ. ಇವರಲ್ಲಿ ಗೆಲವಿನ ಮಾಲೆ ಯಾರಕೊರಳಿಗೆ ಬೀಳುತ್ತದೋ ಎಂಬುದೇ ಗುಟ್ಟು, ಮತದಾರ ತನ್ನ ಆಯ್ಕೆ ಅಚ್ಚೊತ್ತಿ ಮತಪೆಟ್ಟಿಗೆಯಲ್ಲಿ ಹಾಕಿದ್ದಾನೆ. ಮೇ 8 ರಂದು ನಿರ್ಧಾರ ಹೊರಬೀಳಲಿದೆ.
ಕಾಂಗ್ರೆಸ್, ಬಿಜೆಪಿ, ಕೆಜೆಪಿ, ಜೆಡಿ(ಎಸ್) ಅಭ್ಯರ್ಥಿಗಳು ಸೇರಿದಂತೆ ಕಣದಲ್ಲಿ 13 ಮಂದಿ ಇದ್ದಾರೆ. ಆಳಂದ ಮತಕ್ಷೇತ್ರದಲ್ಲಿ 113 ಹಳ್ಳಿಗಳು, 229 ಮತಗಟ್ಟೆಗಳಿದ್ದು, ಕ್ಷೇತ್ರದಲ್ಲಿ 1, 93, 146 ಮತದಾರರಲ್ಲಿ ಪುರುಷರ 1, 01, 989 ಪೈಕಿ 70205 ಹಾಗೂ ಮಹಿಳೆಯರ 91157 ಪೈಕಿ 62154 ಮಹಿಳೆಯರು ಸೇರಿ 1, 32359 ಮಂದಿ (ಶೇ. 69) ಮತ ಚಲಾಯಿಸಿದ್ದಾರೆ.
ಪಟ್ಟಣದ ಪ್ರದೇಶದಂತೆ ಗ್ರಾಮೀಣ ಪ್ರದೇಶದ ಅಲ್ಲದೆ, ತಾಂಡಾದ ಮತಗಟ್ಟೆಗಳಲ್ಲೂ ಈ ಬಾರಿ ಮತದಾರರು ಬಹುಹೊತ್ತು ಸರಣಿಯಲ್ಲಿ ನಿಂತು ಮತಚಲಾಯಿಸಿದ್ದಾರೆ. ಇವರ ಆಯ್ಕೆ ಶಾಸಕರು ಯಾರಾಗಬಹುದು ಎಂಬುದೇ ಈಗಿನ ಕುತೂಹಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

