ಗುಲ್ಬರ್ಗಾ

ಎಸ್ಸೆಸ್ಸೆಲ್ಸಿ: 19 ಶಾಲೆಗೆ ಶೇ.100

Published On :

ಯಾದಗಿರಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಶೇ.78.49ರಷ್ಟಾಗಿದ್ದು, 19 ಪ್ರೌಢಶಾಲೆಗಳಲ್ಲಿ ನೂರಕ್ಕೆ ನೂರು ಫಲಿತಾಂಶ ಬಂದಿದೆ. ಯಾವುದೇ ಶಾಲೆಯಲ್ಲಿ ಶೂನ್ಯ ಫಲಿತಾಂಶ ಬಾರದಿರುವುದು ಸಮಾಧಾನಕರ ಸಂಗತಿಯಾಗಿದೆ.
  ಪರೀಕ್ಷೆಗೆ ಕುಳಿತಿದ್ದ 9,728 ವಿದ್ಯಾರ್ಥಿಗಳ ಪೈಕಿ 7,634 ವಿದ್ಯಾರ್ಥಿಗಳು ಉತ್ತರ  ,  ರಾಗಿದ್ದಾರೆ. ಶಹಾಪುರ ತಾಲೂಕು ಶೇ.85.37, ಯಾದಗಿರಿಯಲ್ಲಿ ಶೇ. 77.13 ಹಾಗೂ ಸುರಪುರ ತಾಲೂಕಿನಲ್ಲಿ ಶೇ. 82.76ರಷ್ಟು ಫಲಿತಾಂಶ ಬಂದಿದೆ. 10 ಖಾಸಗಿ ಹಾಗೂ 9 ಸರ್ಕಾರಿ ಹೈಸ್ಕೂಲ್ ಸೇರಿದಂತೆ ಒಟ್ಟು 19 ಶಾಲೆಗಳಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿ ನೂರಕ್ಕೆ ನೂರು ಫಲಿತಾಂಶ ಬಂದಿದೆ. ಯಾದಗಿರಿಯಲ್ಲಿ 3, ಶಹಾಪುರದಲ್ಲಿ 7 ಹಾಗೂ ಸುರಪುರದ 9 ಶಾಲೆಗಳು ಶೇ.ನೂರು ಫಲಿತಾಂಶ ದಾಖಲಿಸಿವೆ.
  ಶಹಾಪುರದ ಚರಬಸವೇಶ್ವರ ಹೈಸ್ಕೂಲ್‌ನ ಕನ್ನಡ ಮಾಧ್ಯಮದ ವಿದ್ಯಾರ್ಥಿ ಚಂದ್ರಕಾಂತ ಮಿಣಜಗಿ 604 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಸುರಪುರದ ರಂಗಪೇಟೆ ಸರ್ಕಾರಿ ಪಪೂ ಕಾಲೇಜಿನ ಐಶ್ವರ್ಯ ತೋಟದ 593 ಅಂಕ ಪಡೆದು ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದ್ದಾಳೆ. ಆಂಗ್ಲ ಮಾಧ್ಯಮದಲ್ಲಿ ಶಹಾಪುರದ ಬೋರುಕಾ ಹೈಸ್ಕೂಲ್‌ನ ಕಾರ್ತಿಕ ಕುಲಕರ  ,  ಿ 593 ಅಂಕ ಹಾಗೂ ಯಾದಗಿರಿಯ ಮಹಾತ್ಮಾಗಾಂಧಿ ಹೈಸ್ಕೂಲ್‌ನ ಆಶ್ರಿತ ಬುರ್ಜಿ 584 ಅಂಕ ಪಡೆದು ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿದ್ದಾರೆ.
ಸಮಾಧಾನಕರ ಫಲಿತಾಂಶ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಪಾಲಕರಿಗೆ ಸಮಾಧಾನ ತಂದಿದೆ. ಕಲೆದ ಸಲ ಶೇ.69ರಷ್ಟು ಫಲಿತಾಂಶ ಬಂದು 31ನೇ ಸ್ಥಾನದಲ್ಲಿತ್ತು. ಈ ಬಾರಿ ಜಿಲ್ಲೆ 28ನೇ ಸ್ಥಾನಕ್ಕೇರಿದೆ. ಫಲಿತಾಂಶ ತೃಪ್ತಿ ತಂದಿದ್ದು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಫಲಿತಾಂಶ ಇನ್ನಷ್ಟು ಸುಧಾರಣೆಗೆ ಹೇಗೆ ತಯಾರಿ ನಡೆಸಬೇಕು ಎನ್ನುವುದು ಗೊತ್ತಾದಂತಾಗಿದೆ ಎಂದು ಡಿಡಿಪಿಐ ರಾಮಾಂಜನೇಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 ಕನಿಷ್ಠ ಶೇ.80 ಫಲಿತಾಂಶ ನಿರೀಕ್ಷಿಸಲಾಗಿತ್ತು. ಆದರೆ ಬಾಹ್ಯ ಅಭ್ಯರ್ಥಿಗಳಿಂದ ಜಿಲ್ಲೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಬಾಹ್ಯವಾಗಿ ಪರೀಕ್ಷೆ ಬರೆದ 401 ಅಭ್ಯರ್ಥಿಗಳಲ್ಲಿ ಕೇವಲ 19 ಜನರು ಪಾಸಾಗಿದ್ದಾರೆ. ಇದು ಶೇ. 4.77 ಆಗುತ್ತದೆ. ಇದು ಜಿಲ್ಲೆಯ ಒಟ್ಟಾರೆ ಫಲಿತಾಂಶಕ್ಕೇ ಸೇರುತ್ತದೆ. ಆದ್ದರಿಂದ 28ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ. ಆದರೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಆರಂಭದಿಂದಲೇ ಚಟುವಟಿಕೆ ಹಮ್ಮಿಕೊಂಡು ಇನ್ನಷ್ಟು ಸುಧಾರಣೆಗೆ ಶ್ರಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.