ಕೆವಿಜಿ ಬ್ಯಾಂಕ್ 13,015 ಕೋಟಿ ವಹಿವಾಟು
ಕ.ಪ್ರ. ವಾರ್ತೆ , ಧಾರವಾಡ , ಮೇ 11
ಬ್ಯಾಂಕಿಂಗ್ ರಂಗದ ತುರುಸಿನ ಸ್ಪರ್ಧೆಯ ಮಧ್ಯೆಯೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪ್ರಸ್ತುತ 13,015 ಕೋಟಿ ವಹಿವಾಟು ದಾಟಿದ್ದು, 194.58 ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಸಿ. ಸಾಂಬಶಿವರೆಡ್ಡಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಪ್ರಗತಿ ಕುರಿತು ವಿವರ ನೀಡಿದ ಅವರು, ನಿವ್ವಳ ಲಾಭ ಗಳಿಕೆಯಲ್ಲಿ ಶೇ.52.45 ಪ್ರಗತಿ ಕಂಡಿದ್ದು, ಬ್ಯಾಂಕ್ನ ಒಟ್ಟಾರೆ ಪ್ರಗತಿಯು ಸಮಗ್ರ ಬ್ಯಾಂಕಿಂಗ್ ಉದ್ಯಮದ ಉತ್ತಮ ಪ್ರಗತಿಯಲ್ಲಿ ಒಂದಾಗಿದೆ. ಈ ಮೂಲಕ ಬ್ಯಾಂಕ್ನ ನಿವ್ವಳ ಸಂಪತ್ತು 839 ಕೋಟಿಯಿಂದ 1033 ಕೋಟಿಗೆ ವೃದ್ಧಿಸಿದೆ ಎಂದರು.
ಒಂಭತ್ತು ಜಿಲ್ಲೆಗಳಲ್ಲಿ 524 ಶಾಖೆ ಹೊಂದಿರುವ ಬ್ಯಾಂಕ್ 2012-13ನೇ ಸಾಲಿನಲ್ಲಿ 3321.90 ಕೋಟಿ ಸಾಲ ವಿತರಿಸಿದೆ. ಸಾಲ ಹಾಗೂ ಮುಂಗಡಗಳ ವಿಭಾಗದಲ್ಲಿ ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ.24.46ರಷ್ಟು ವೃದ್ಧಿಯಾಗಿದೆ. ಆದ್ಯತಾ ರಂಗಕ್ಕೆ ಹೆಚ್ಚಿನ ಮಾನ್ಯತೆ ನೀಡಿದ್ದು, 2569 ಕೋಟಿ ಸಾಲ ವಿತರಿಸಿದೆ. ಒಟ್ಟು ಸಾಲದಲ್ಲಿ ಆದ್ಯತಾ ಪಾಲು ಶೇ.84ರಷ್ಟಿದೆ. ಕಳೆದ ವರ್ಷ ಬ್ಯಾಂಕ್ 1,748 ಕೋಟಿ ಕೃಷಿ ಸಂಬಂಧಿಸಿದ ಸಾಲವನ್ನಾಗಿ ವಿತರಿಸಿದ್ದು, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 1,64,977 ರೈತರಿಗೆ 1541 ಕೋಟಿ ಸಾಲ ವಿತರಿಸಿದೆ. ಶೈಕ್ಷಣಿಕ ಹಾಗೂ ಗೃಹಸಾಲ ವಿಭಾಗದಲ್ಲಿ ಕ್ರಮವಾಗಿ ಶೇ.52 ಹಾಗೂ ಶೇ.84ರಷ್ಟು ಪ್ರಗತಿ ಸಾಧಿಸಿದೆ. ಇನ್ನು ಆಭರಣ ಸಾಲ ವಿಭಾಗದಲ್ಲಿ ಬ್ಯಾಂಕ್ ಶೇ.101ರಷ್ಟು ಪ್ರಗತಿ ಸಾಧಿಸಿದೆ ಎಂದರು.
ವಿತ್ತೀಯ ಸೇರ್ಪಡೆಯಡಿ ಒಂದು ಸಾವಿರ ಹಾಗೂ ಅಧಿಕ ಜನಸಂಖ್ಯೆ ಹೊಂದಿರುವ ಸ್ಥಳಗಳಲ್ಲಿ ಹೊಸದಾಗಿ ಆರು ವಿತ್ತೀಯ ಸೇರ್ಪಡೆ ಶಾಖೆ ಹಾಗೂ 50 ಅತಿ ಕಿರುಶಾಖೆಗಳನ್ನು ತೆರೆಯುವ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಗೆ ಅನುವು ಮಾಡಿಕೊಡಲಾಗಿದೆ. ಜನಸಾಮಾನ್ಯರಿಗೆ ಬ್ಯಾಂಕಿಂಗ್ ಅರಿವೂ ಮೂಡಿಸಲಾಗಿದೆ. 5,152 ಸ್ವ ಸಹಾಯ ಗುಂಪುಗಳ ಸಾಲ ಜೋಡಣಾ ವ್ಯಾಪ್ತಿಗೆ ತಂದು 102 ಕೋಟಿ ಸಾಲ ವಿತರಿಸಲಾಗಿದೆ. 2012ರ ಜೂನ್ 25ರಂದು ಏಕಕಾಲಕ್ಕೆ ಒಂದು ಸಾವಿರ ಗ್ರಾಮ ಸಭೆ ಹಮ್ಮಿಕೊಂಡು ಗ್ರಾಮೀಣ ಬ್ಯಾಂಕಿಂಗ್ ಅಗತ್ಯತೆಗಳಿಗೆ ಕೆವಿಜಿ ಬ್ಯಾಂಕು ಸ್ಪಂದಿಸಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

