ಸರಗಳ್ಳನಿಂದ ಮಂಗಳಸೂತ್ರ ದರೋಡೆ
ಗುಲ್ಬರ್ಗ: ಮಹಿಳೆಯ ಕೊರಳಿನಲ್ಲಿದ್ದ 1, 20 ಲಕ್ಷ ಮೌಲ್ಯದ 40 ಗ್ರಾಂ ಬಂಗಾರದ ಮಂಗಳಸೂತ್ರವನ್ನು ಸರಗಳ್ಳೊನೊಬ್ಬ ಕಿತ್ತುಕೊಂಡು ಪರಾರಿಯಾದ ಘಟನೆ ಮಂಗಳವಾರ ನಡೆದಿದೆ.
ಖೂಬಾ ಪ್ಲಾಟ್‌ನ ಎಂ. ಮಮತಾ ಮಕಮ್ ಅವರು ಬಸಮ್ಮ ಕುಂಬಾರ ಅವರೊಂದಿಗೆ ತಮ್ಮ ಮನೆಯಿಂದ ಮಗಳ ಶಾಲೆಗೆ ಫೀಸ್ ಕಟ್ಟಲು ಎನ್.ವಿ. ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗ ನವಣಿ ಆಸ್ಪತ್ರೆ ಬಳಿ 20 ರಿಂದ 25 ವರ್ಷ ವಯಸ್ಸಿನ ಬಿಳಿ ಮತ್ತು ಹಸಿರು ಬಣ್ಣದ ಚೌಕಡಿ ಆಫ್ ಶರ್ಟ್ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ ಸರಗಳ್ಳನು ಮಮತಾಳ ಕೊರಳಿಗೆ ಕೈ ಹಾಕಿ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ಪಾದಚಾರಿ ಗಾಯ
ಗುಲ್ಬರ್ಗ: ನಗರದ ಆಳಂದ ಚೆಕ್ ಪೋಸ್ಟ್ ಹತ್ತಿರ ದ್ವಿಚಕ್ರ ವಾಹನಮೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಗುಲ್ಬರ್ಗ ತಾಲೂಕಿನ ಹಾಗರಗುಂಡಗಿ ಗ್ರಾಮದ ಅರುಣಕುಮಾರ ತಂದೆ ನಾಗೇಂದ್ರ ಕೂಡಿಕರ್ ಎಂಬಾತ ಗಾಯಗೊಂಡಿದ್ದಾನೆ. ಅರುಣಕುಮಾರ ಮತ್ತು ಆತನ ಚಿಕ್ಕಪ್ಪನ ಮಗನಾದ ಅನೀಲಕುಮಾರ ಇಬ್ಬರು ಮದ್ಯಾಹ್ನ ಆಳಂದ ರಸ್ತೆಗೆ ಇರುವ ಖಾದ್ರಿ ಚೌಕ್ ಹತ್ತಿರ ಹೋಗುತ್ತಿದ್ದಾಗ ದ್ವಿಚಕ್ರ ಸವಾರ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಅರುಣಕುಮಾರ ತೀವ್ರ ಗಾಯಗೊಂಡಿದ್ದಾನೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟವೇರಾ ಜೀಪ್ ಡಿಕ್ಕಿ: ವ್ಯಕ್ತಿ ಗಾಯ
ಗುಲ್ಬರ್ಗ: ಟವೇರಾ ಜೀಪೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಗಾಯಗೊಂಡ ಘಟನೆ ನಗರದ ಮದಿನಾ ಕಾಲೋನಿ ಹತ್ತಿರ ನಡೆದಿದೆ.
ಮಹಿಬೂಬ್ ನಗರದ ನಿವಾಸಿ ಜಿಶಾನ ತಂದೆ ಗೌಸ್ ಪಟೇಲ್ ಎಂಬಾತ ಗಾಯಗೊಂಡಿದ್ದಾನೆ. ಜಿಶಾನ ಮತ್ತು ಆತನ ತಾಯಿ ಮಮತಾಜ ಬೇಗಂ ಇಬ್ಬರು ಮದಿನಾ ಕಾಲೋನಿ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ವಟೇರಾ ಜೀಪೊಂದು ಯಾದುಲ್ಲಾ ಕಾಲೋನಿ ಕಡೆಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಜಿಶಾನ ಗಾಯಗೊಂಡಿದ್ದಾನೆ.
ಜೀಪ್ ಚಾಲಕ ಜೀಪ್ ಸಮೇತ ಪರಾರಿಯಾಗಿದ್ದಾನೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

