ಗುಲ್ಬರ್ಗಾ

ಹೂ ತರುವೆ ಹೊರತು, ಹುಲ್ಲು ತರಲಾರೆ...

Published On :

ಕನ್ನಡಪ್ರಭ ವಾರ್ತೆ  ಸುರಪುರ  ಮೇ 16
ನ್ಯಾಯಾಧೀಶೆ ಹುದ್ದೆಗೆ ಪ್ರಥಮ ಸೇವಾವಕಾಶ ಒದಿಗಿಸಿದ ಸುರಪುರ ನ್ಯಾಯಾಲಯ ನನಗೆ ತವರು ಮನೆ ಇದ್ದಂತೆ. ಇಲ್ಲಿಯ ಹಿರಿಯ ವಕೀಲರ ವಾದವಿವಾದದಿಂದ ಸಾಕಷ್ಟು ಜ್ಞಾನ ಪಡೆದುಕೊಂಡಿದ್ದೇನೆ. ನನ್ನ ಪ್ರಥಮ ಸೇವಾವಧಿಯ ಯಶಸ್ವಿಗೆ ಸಹಕಾರ ನೀಡಿ ತವರಿನಂತಿರುವ ಇಲ್ಲಿನ ವಕೀಲರ ಸಂಘಕ್ಕೆ ಹೂ ತರುವೆ, ಹೊರತು ಹುಲ್ಲು ತರಲಾರೆ ಎಂದು ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಉಂಡಿ ಅಭಿಪ್ರಾಯಪಟ್ಟರು.
  ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯದಿಂದ ಮಂಗಳೂರಿಗೆ ಸಿವಿಲ್ ನ್ಯಾಯಾಧೀಶೆಯಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಇಲ್ಲಿಯ ವಕೀಲರ ಸಂಘ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನ್ಯಾಯದಾನ: ಓದು ಮತ್ತು ಹುದ್ದೆಯ ಹಿಂದೆ ನನ್ನ ತಂದೆ ತಾಯಿ ಶ್ರಮವಿದೆ. ಹುದ್ದೆಯಲ್ಲಿ ಕಾನೂನು ಪಾಲನೆಯ ಶ್ರದ್ಧೆ, ಎದೆಗಾರಿಕೆ ಹಾಗೂ ದಿಟ್ಟತನದ ತ್ವರಿತ ನ್ಯಾಯದಾನಕ್ಕೆ ಇಲ್ಲಿನ ವಕೀಲರ ಸಂಘದ ಸಹಕಾರವೇ ಮುಖ್ಯ ಕಾರಣವಾಗಿದೆ. ಇದು ಮರೆಯಲಾಗದ ಅವಿನಾಭಾವ ಸಂಬಂಧ ಎಂದು ಸ್ಮರಿಸಿದರು.
  ರಾಜ್ಯದಲ್ಲೇ ಮಾದರಿ ನ್ಯಾಯಾಲಯ ಹಾಗೂ ಜಿಲ್ಲೆಯಲ್ಲೆ ಮಾದರಿ ಕಾನೂನು ಸೇವಾ ಪ್ರಾಧಿಕಾರ ಎಂದು ಹೈಕೋರ್ಟಿನಿಂದ ಪ್ರಶಂಸೆ ಪಡೆಯಲು ಇಲ್ಲಿಯ ವಕೀಲರ ತ್ಯಾಗ ಮತ್ತು ಔದಾರ್ಯ ರಾಜ್ಯದಲ್ಲೇ ಮಾದರಿಯಾಗಿದೆ. ಇದನ್ನು ಮರೆಯಲು ಸಾಧ್ಯವಿಲ್ಲ ಎಂದು ಗುಣಗಾನ ಮಾಡಿದರು.
  ಸರ್ಕಾರಿ ಸೇವೆಯಲ್ಲಿ ವರ್ಗಾವಣೆ, ನಿವೃತ್ತಿ ಸಾಮಾನ್ಯ. ಇದರಿಂದ ಬೇಜಾರಿಲ್ಲ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ವ್ಯಾಜ್ಯರಹಿತ ಸಮಾಜ ನಿರ್ಮಾಣ ಮಾಡಬೇಕು ಎಂಬುದೇ ನನ್ನ ಗುರಿಯಾಗಿದೆ ಎಂದರು.
ಪಕ್ಷಪಾತವಿಲ್ಲ: ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಜಿ.ಎಸ್. ದೇಶಪಾಂಡೆ ಮಾತನಾಡಿ, ಭ್ರಷ್ಟಾಚಾರ ಮತ್ತು ಕಲುಷಿತ ವಾತಾವರಣದಿಂದ ನಂಬಿಕೆ, ಸತ್ಯ ಮರೆಯಾಗುತ್ತಿವೆ. ಆದರೆ ನ್ಯಾಯಾಲಗಳ ಮೇಲೆ ಜನ ಹೆಚ್ಚಿನ ವಿಶ್ವಾಸ, ನಂಬಿಕೆ ಇಟ್ಟಿದ್ದಾರೆ.
  ಹೀಗಾಗಿ ಇದನ್ನು ಉಳಿಸಿಕೊಂಡು ಹೋಗುವುದು ವಕೀಲರ ಮತ್ತು ನ್ಯಾಯಾಧೀಶರ ಕರ್ತವ್ಯವಾಗಿದೆ ಎಂದರು. ನ್ಯಾಯಾಧೀಶರ ಹುದ್ದೆ ಕ್ಲಿಷ್ಟಕರವಾದದ್ದು. ಇದನ್ನು ಜವಾಬ್ದಾರಿಯಿತವಾಗಿ ನಿರ್ವಹಿಸಬೇಕು. ಸ್ವಜನ ಪಕ್ಷಪಾತ ಮಾಡದೇ ಕಕ್ಷಿದಾರರ ಹಿತಾಸಕ್ತಿ ಗಮನದಲಿಟ್ಟುಕೊಂಡು ಕಾನೂನು ಪಾಲನೆ ತ್ವರಿತ ನ್ಯಾಯದಾನದ ಮೂಲಕ ಸತ್ಯ ಎತ್ತಿಹಿಡಿಬೇಕು. ಇದರಿಂದ ನಿಮ್ಮ ಘನತೆ ಇನ್ನಷ್ಟು ಹೆಚ್ಚಳವಾಗುತ್ತದೆ ಎಂದು ಸಲಹೆ ನೀಡಿದರು.
ಶ್ಲಾಘನೀಯ: ವಕೀಲರ ಸಂಘದ ಅಧ್ಯಕ್ಷ ವಿ.ಸಿ. ಪಾಟೀಲ ಮಾತನಾಡಿ, ಕಾನೂನು ಪ್ರಾಧಿಕಾರದ ಮೂಲಕ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸುವ ಮೂಲಕ ಹೊಸ ಅಧ್ಯಾಯವನ್ನೇ ಉಂಡಿಯವರು ಬರೆದಿದ್ದಾರೆ. ಒಬ್ಬ ಮಹಿಳಾ ನ್ಯಾಯಾಧೇಶೆಯಾಗಿ ದಿಟ್ಟತನದಿಂದ ತ್ವರಿತ ನ್ಯಾಯಾದಾನ ಮಾಡಿ ರಾಜ್ಯದಲ್ಲೇ ಅತ್ಯುತ್ತಮ ನ್ಯಾಯಾಲಯ ಎಂಬ ಕೀರ್ತಿ ತಂದುಕೊಟ್ಟಿರುವ ಉಂಡಿಯರ ಕಾರ್ಯ ಶ್ಲಾಘನೀಯ. ಇವರು ಉತ್ಕೃಷ್ಟ ಸೇವೆ ಸಲ್ಲಿಸಲಿ, ದೇವರು ಉತ್ತಮ ಆರೋಗ್ಯ ನೀಡಲಿ. ನಮ್ಮ ವಕೀಲರಿಂದ ತಪ್ಪಾಗಿದ್ದಲ್ಲಿ ಕ್ಷಮಿಸಬೇಕು ಎಂದು ಮನವಿ ಮಾಡಿದರು.
ವಕೀಲರಾದ ಬಸಲಿಂಗಪ್ಪ ಪಾಟೀಲ, ನಿಂಗಣ್ಣ ಚಿಂಚೋಡಿ, ಅರವಿಂದ ಕುಮಾರ, ದೇವಿಂದ್ರಪ್ಪ ಬೇವಿನಕಟ್ಟಿ, ಉಸ್ತಾದ ಫಿರಾಸತ್ ಹುಸೇನ್ ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಮೊಹ್ಮದ ಹುಸೇನ ಸ್ವಾಗತಿಸಿದರು. ಜಿ.ಆರ್, ಬನ್ನಾಳೆ ನಿರೂಪಿಸಿದರು. ಸಂಗಣ್ಣ ಬಾಕ್ಲಿ ವಂದಿಸಿದರು. ಜಿ.ಎಸ್. ಪಾಟೀಲ, ಕನಕರಡ್ಡಿ, ಜಿ. ತಮ್ಮಣ್ಣ, ಉದಯಸಿಂಗ್, ರಮಾನಂದ ಕವಲಿ. ವ್ಯಾಸರಾಜ ಸರಾಫ್, ಅಪ್ಪಾಸಾಹೇಬ ಪಾಟೀಲ, ಪ್ರಭು ಪಾಟೀಲ, ಬಸವರಾಜ ಅನ್ಸೂರ, ಬಸವರಾಜ ಕಿಲ್ಲೇದಾರ, ನಂದನಗೌಡ ಪಾಟೀಲ, ವಿ.ಎಸ್. ಬೈಚಬಾಳ, ಶಿವಾನಂದ ಅವಂಟಿ. ಮಂಜುನಾಥ ಹುದ್ದಾರ, ಆದಪ್ಪ ಹೂಸ್ಮನಿ, ಸಂಗಣ್ಣ ಗುಳಗಿ, ಸುರೇಂದ್ರ ದೊಡಮನಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.