'ನೀನೊಲಿದರೆ...' ಬಸವ ಕಾವ್ಯ ದರ್ಪಣ ಕಾರ್ಯಕ್ರಮದಲ್ಲಿ ಲೇಖಕ ಡಾ. ಅಂಬಲಗೆ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ 16
ವಚನ ಚಳವಳಿಯು ಬರಹಗಾರನ ಸಾಮಾಜಿಕ ಹೊಣೆಗಾರಿಕೆ ಗುರುತಿಸಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಆಗಿರುವ ಹಿರಿಯ ಲೇಖಕ ಡಾ. ಕಾಶಿನಾಥ ಅಂಬಲಗೆ ಅಭಿಪ್ರಾಯಪಟ್ಟರು.
ಅವರು ನಗರದ ಕನ್ನಡ ಭವನದಲ್ಲಿ ಬಸವ ಜಯಂತಿಯ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕವು ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಸಹಕಾರದೊಂದಿಗೆ 'ನೀನೊಲಿದರೆ...' ಬಸವ ಕಾವ್ಯ ದರ್ಪಣ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತತ್ವಾದರ್ಶ: ಬಸವಣ್ಣನ ಅನುಭವ ಮಂಟಪ ಮತ್ತು ವಚನ ಚಳವಳಿ ಹಿನ್ನೆಲೆಯಲ್ಲಿ ಬರಹಗಾರ ಸಾಮಾಜಿಕ ಜವಾಬ್ದಾರಿಯನ್ನು ಹಿಡಿದಿಟ್ಟುಕೊಂಡಿದ್ದಾನೆ. ಬಸವಣ್ಣನ ತತ್ವಾದರ್ಶಗಳು ವಿಶ್ವವಿದ್ಯಾಲಯಗಳಲ್ಲಿ ಮಾದರಿಗಳಾಗಿರುವುದನ್ನು ನೋಡಿ ದ್ದೇವೆ. ವೃತ್ತಿಯಲ್ಲಿ ಕಾಯಕ ಸೇವೆಯನ್ನೇ ಕಂಡವನೆ ಶರಣ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಜೂನ್ 3ನೇ ವಾರದಲ್ಲಿ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಈ ಸಮ್ಮೇಳನ ಒಳಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಾರಥಿ ತ್ರೈಮಾಸಿಕ ಪತ್ರಿಕೆ ಲೋಕಾರ್ಪಣೆಯೂ ಮಾಡಲಾಗುವುದು ಎಂದರು.
ಸಮರ್ಪಣೆ: ಪರಿಷತ್ತಿನ ವೆಬ್‌ಸೈಟ್ ಪೂರ್ಣ ಪ್ರಮಾಣದಲ್ಲಿ ಆಗಿದ್ದು, ಅದು ಸಹ ಕೆಲವೇ ದಿನಗಳಲ್ಲಿ ಹೊರ ಜಗತ್ತಿಗೆ ಸಮರ್ಪಿಸಲಾಗುವುದು. ಚರಿತ್ರಾರ್ಹ ಕಾರ್ಯಕ್ರಮಗಳು, ವಿಷಯಗಳನ್ನು ಹೆಚ್ಚು ಕನ್ನಡಿಕರಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಡಾ. ಎಸ್.ಎಸ್. ಗುಬ್ಬಿ, ಎಸ್.ಪಿ. ಸುಳ್ಳದ್, ಎ.ಕೆ. ರಾಮೇಶ್ವರ, ಶಾಂತರೆಡ್ಡಿ, ಜಂಬನಗೌಡ ಶೀಲವಂತ, ಚೌಡಪ್ಪ ಹುಣಸಿಮಾರೆ, ರಾಜೇಂದ್ರ ಯರನಾಳೆ, ಬಸಣ್ಣ ಸಿಂಗೆ, ಬಸವರಾಜ ಕೊನೇಕ, ಡಾ. ಚಿ.ಸಿ. ಲಿಂಗಣ್ಣ, ಸಿ.ಎಸ್. ಮಾಲಿಪಾಟೀಲ್, ಲಿಂಗರಾಜ ಶಾಸ್ತ್ರಿ ಇತರರು ಪಾಲ್ಗೊಂಡಿದ್ದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಶ್ರೀಶೈಲ್ ಗೂಳಿ ಇದ್ದರು. ಕಸಾಪ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಬಿ.ಎಚ್. ನಿರಗುಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

