ಗುಲ್ಬರ್ಗಾ

ಐಪಿಎಲ್: ಪ್ರತಿಭಟನೆ

Published On :

ಗುಲ್ಬರ್ಗ/ಶಹಾಬಾದ್: ಐಪಿಎಲ್ ಕ್ರಿಕೆಟ್‌ನಲ್ಲಿ ನಡೆದ ಭಾರಿ ಅವ್ಯಹಾರ ಖಂಡಿಸಿ ಶನಿವಾರ ಶಹಾಬಾದ ನಗರದ ನೆಹರು ವೃತ್ತದಲ್ಲಿ ಎಐಡಿವೈಒ ಹಾಗೂ ಎಐಡಿಎಸ್‌ಒ ಸಂಯುಕ್ತ ಆಶ್ರಯದಲ್ಲಿ ಪ್ರತಿಭಟನೆ ನಡೆಸಿ, ಐಪಿಎಲ್ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಐಡಿವೈಒ ಅಧ್ಯಕ್ಷ ನಿಂಗಣ್ಣ ಜಂಬಗಿ, ಐಪಿಎಲ್ ಅವ್ಯವಹಾರದಿಂದ ಕ್ರಿಕೆಟ್ ಆಟದಲ್ಲಿ ಕ್ರೀಡಾ ಮನೋಭಾವನೆ ನಾಶವಾಗಿದ್ದು, ದೇಶ ದೇಶಗಳ ನಡುವೆ ಬಾಂಧವ್ಯ ವೃದ್ಧಿಯಾಗಲು ವಿನಿಯೋಗವಾಗಬೇಕಾದ ಕ್ರೀಡೆ ಇಂದು ಮದ್ಯದ ದೊರೆಗಳ, ಜೂಜುಕೋರರ, ಉದ್ಯಮಪತಿಗಳ, ದೇಶ ದ್ರೋಹಿಗಳಿಗೆ ಲಾಭ ತಂದುಕೊಡುವ ದಂಧೆಯಾಗಿ ಮಾರ್ಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಸಿಸಿಐ ಶ್ರೀರಕ್ಷೆ: ಬಿಸಿಸಿಐ ತನ್ನ ಕಪ್ಪು ಹಸ್ತದಿಂದ ಐಪಿಎಲ್‌ಗೆ ಶ್ರೀರಕ್ಷೆ ನೀಡುತ್ತಿದ್ದು, ಆರಂಭದಿಂದಲೇ ಕ್ರೀಡಾಪಟುಗಳನ್ನು ಹರಾಜು ಹಾಕುವ, ಕೊಂಡುಕೊಳ್ಳುವ, ಮಾರಾಟ ಮಾಡುವ ಅನಿಷ್ಟ ಪದ್ಧತಿಗೆ ಕೈ ಹಾಕಿದೆ ಎಂದರು. ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಕ್ಷೆ ನೀಡಬೇಕು. ಲಾಭಕೋರರ ಕಪಿಮುಷ್ಟಿಯಿಂದ ಕ್ರೀಡೆಯನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಸಿದ್ದು ಚೌಧರಿ, ಎಐಡಿಎಸ್‌ಒ ಸ್ಥಳೀಯ ಅಧ್ಯಕ್ಷ ಎಸ್.ವೀರೇಶ ಮಾತನಾಡಿದರು. ಸಂಘಟನೆ ಉಪಾಧ್ಯಕ್ಷ ನೀಲಕಂಠ ಹುಲಿ, ಗಂಡಮ್ಮ ಮಡಿವಾಳ, ಅಂಬಿಕಾ ಎಸ್.ಎಸ್, ರಾಜೇಂದ್ರ, ಶೆಟ್ಟೆಪ್ಪ, ರಾಜು, ಸುರೇಶ, ನಾಗರಾಜ, ಜಯಶ್ರೀ, ಚನ್ನಮ್ಮ, ಸುಭದ್ರಾ, ರೇಶ್ಮಾ ಆರ್.ಐ., ಶ್ರೀಕಾಂತ ಸೇರಿದಂತೆ ಸಂಘಟನೆ ಕಾರ್ಯಕರ್ತರು, ಕ್ರಿಕೆಟ್ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.