ಯೋಜನೆಗಳ ಜಾರಿಗೆ ಎಲ್ಲರೂ ಪ್ರಯತ್ನಿಸಿ ಕ್ರಮ ಕೈಗೊಳ್ಳಿ: ಸಿಇಒ ಪಲ್ಲವಿ ಅಕುರಾತಿ
ಚಿತ್ತಾಪುರ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ತಾಲೂಕಿನ ಗ್ರಾಮ ಮತ್ತು ತಾಂಡಾಗಳ ಮಾಹಿತಿ ನೀಡಬೇಕು. ಒಂದು ವೇಳೆ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಅಧಿಕಾರಿಗಳೆ ಹೊಣೆಗಾರನ್ನಾಗಿ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಎಚ್ಚರಿಸಿದರು.
ಅವರು ಮಂಗಳವಾರ ತಾಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ತಾಲೂಕಿನ 35 ಗ್ರಾಪಂಯಲ್ಲಿ ಯೋಜನೆಗಳು ಅನುಷ್ಠಾನಗೊಂಡಿದ್ದರೂ, ಗಣಕಯಂತ್ರದಲ್ಲಿ ದಾಖಲೆ ಮಾಡದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತದೆ. ದಾಖಲಿಸಲು ಹಿಂದೇಟು ಹಾಕಿದರೆ ಪಿಡಿಒಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ತಾಕೀತು: ತಾಲೂಕಿನಲ್ಲಿ ವಸತಿ ಯೋಜನೆಗಳಲ್ಲಿ 4932 ಮನೆಗಳ ಪೈಕಿ ಕೇವಲ 1789 ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಕೆಲಸ ತ್ವರಿತ ಗತಿಯಲ್ಲಿ ಆಗುತ್ತಿಲ್ಲ. ಇದರಿಂದ ಯೋಜನೆಗಳು ಫಲಾನುಭವಿಗಳು ಪಡೆಯಲು ವಿಳಂಬವಾಗುತ್ತಿದೆ. ಎಲ್ಲ ಯೋಜನೆಗಳು ಜೂನ್ 15ರೊಳಗಾಗಿ ಪೂರ್ಣಗೊಳಿಸಲು ತಾಕೀತು ಮಾಡಿದರು.
ದಾಖಲೆ ಇರಲಿ: ಜಿಪಂ ಮುಖ್ಯ ಲೆಕ್ಕಾಧಿಕಾರಿ ಎನ್.ಎ. ಪಟವೇಗಾರ್ ಮಾತನಾಡಿ, ಕಚೇರಿಯಲ್ಲಿ ಇಡಬೇಕಾದ ನಗದು ಪುಸ್ತಕ, ಹಣ ಸಂದಾಯಿಸಿದ ರಜಿಸ್ಟರ್, ಸಕಾಲ, ವಿಷಯ ನಿರ್ವಾಹಕ ರಜಿಸ್ಟರ್ ಸೇರಿದಂತೆ 18 ದಾಖಲೆ ರಜಿಸ್ಟರ್ಗಳನ್ನು ನಿರ್ವಹಣೆ ಮಾಡಬೇಕು. ಇದರಿಂದ ಸಂಪೂರ್ಣ ಮಾಹಿತಿಗಳು ಸರಿಯಾದ ಸಮಯದಲ್ಲಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಜಿಪಂ ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ ಮಾತನಾಡಿ, ಗ್ರಾಪಂ ಕಾರ್ಯದರ್ಶಿಗಳು ಹಾಗೂ ಪಿಡಿಒಗಳು ಎಲ್ಲ ಕ್ರಿಯಾ ಯೋಜನೆ ಗ್ರಾಮ ಸಭೆಯಲ್ಲಿಯೇ ಕಾಮಗಾರಿ ಅಂತಿಮಗೊಳಿಸಬೇಕು. ಎಂದರು. ತಾಲೂಕು ಅದಿಕಾರಿಗಳಾದ ಇಓ ಸುರೇಶ ಬಿರಾದಾರ, ಲೆಕ್ಕಾಧಿಕಾರಿ ಲಕ್ಮಣ ಶೃಂಗೇರಿ, ಎಇಇ, ತಾಲೂಕು ಅಧಿಕಾರಿಗಳು, ಗ್ರಾಪಂ ಪಿಡಿಒಗಳು, ಕಾರ್ಯದರ್ಶಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

