ಗುಲ್ಬರ್ಗಾ

ಹೊಟ್ಟೆ-ಬಟ್ಟೆಗಾಗಿ 'ನೇಕಾರ' ಹಾಹಾಕಾರ...

Published On :

ಟಿಎನ್. ಕುಮಾರಸ್ವಾಮಿ ಕಲಾಲ್
ಗುರುಮಠಕಲ್: ಯಾದಗಿರಿ ಜಿಲ್ಲೆಯ ಗುರುಮಠಕಲ ಮತಕ್ಷೇತ್ರವು ಖಾದಿ ಮತ್ತು ಬಟ್ಟೆಗಳನ್ನು ನೀಡಿದಂತಹ ಕ್ಷೇತ್ರವಾಗಿದೆ. ಅದರೆ ಇಂದು ಸರಕಾರದ ನಿರ್ಲಕ್ಷತನದಿಂದ ಎಲ್ಲರಿಗೂ ಬಟ್ಟೆ ನೀಡಿ ಗೌರವ ಕಾಪಾಡುವ ವಸ್ತ್ರದಾತನು ಇಂದು ಬಿಡಿಗಾಸಿಗೂ ಪಾರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕಟ್ಟು ಕಥೆಯಲ್ಲ. ಇಲ್ಲಿನ ನೇಕಾರರ ನೈಜ ಜೀವನದ ವಾಸ್ತವಾಂಶ, ಬಡತನ ದಾರಿದ್ರ್ಯ ಕಷ್ಟ ಕಾರ್ಪಣ್ಯಗಳ ನಡುವೆ ಬದುಕು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಗುರುಮಠಕಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳು ನೇಕಾರಿಕೆಯನ್ನೇನ್ನೆ ನಂಬಿದ ಇಲ್ಲಿನ ಜನತೆ ಇದಿಗಾ ಬಡತನದ ಬೇಗುದಿಗೆ ಸಿಲುಕಿ ಅತ್ತ ಸಾಯಲೂ ಆಗದೆ ಇತ್ತ ಬದುಕು ಸಾಗಿಸಲಾಗದೆ ಹೆಸರಿಗೆ ಮಾತ್ರ ಬದುಕು ಸಾಗಿಸುತ್ತಿದ್ದಾರೆ. ಹಿಂದೆ ಬಟ್ಟೆ ನೇಯ್ಗೆ ಮಾಡಿ ಇಡೀ ಗ್ರಾಮಗಳಿಗೆ ಮಾದರಿಯಾಗಿ ಗ್ರಾಮದ ಜನತೆಯ ಹಸಿವು ನೀಗಿಸಿದಂತಹ ನೇಕಾರರು ಇಂದು ತುತ್ತು ಅನ್ನಕ್ಕಾಗಿ ನಾನಾ ಕಡೆ ಕೂಲಿಯನ್ನು ಅರಸಿ ಪರದಾಡಬೇಕಾದ ಪರಿಸ್ಥಿತಿ ಒದಗಿದೆ.
ಕೂಲಿ ಮಾಡಿದರೆ ಮಾತ್ರ ಒಂದು ದಿನದ ಊಟ ದೊರೆಯುತ್ತದೆ. ಇಲ್ಲವಾದರೆ ಇವರಿಗೆ ಭಿಕ್ಷಾಟನೆಯೇ ದಾರಿ ಎಂಬಂತೆ ಇದೆ. ಹೆಚ್ಚಿನ ನೇಕಾರರನ್ನು ಹೊಂದಿರುವ ಗ್ರಾಮಗಳಾದ ಚಂಡರಕಿ ಮತ್ತು ಗುರುಮಠಕಲ್ ಪಟ್ಟಣದಲ್ಲಿ ಕಳೆದ ಐದು ವರ್ಷಗಳಿಂದ ಸರ್ಕಾರವು ನೇಕಾರಿಕೆಯನ್ನು ಮಾಡಿ ಜೀವನ ಸಾಗಿಸುವವರಿಗೆ ಸರಕಾರದಿಂದ ಸರಿಯಾದ ಸೌಲಭ್ಯಗಳು ದೊರೆತಿಲ್ಲ. ಸರ್ಕಾರ ಇವರನ್ನು ಸಂಪೂರ್ಣವಾಗಿ ಕಡೆಗಾಣಿಸಿದ್ದೇ ಇಲ್ಲಿನವರಿಗೆ ಈ ದುಸ್ಥಿತಿ ಬರಲು ಕಾರಣವಾಗಿದೆ.
ಕೈಚಾಚುವ ಪರಿಸ್ಥಿತಿ: 40 ವರ್ಷಗಳಿಂದ ನೇಕಾರಿಕೆಯಾನ್ನೇ ತಮ್ಮ ವೃತಿ ಜೀವನವನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರ ಬದುಕು ಮೂರು ಕಾಸಿನಂತಾಗಿದೆ. ತಮ್ಮ ಜೀವನವನ್ನು ಸಾಗಿಸಲು ತಮ್ಮ ಮಕ್ಕಳ ಮತ್ತು ದಿನ ನಿತ್ಯದ ಉಪಜೀವನಕ್ಕಾಗಿ ಗೇನು ಬಟ್ಟೆಗಾಗಿ ಬೇರೋಬ್ಬರ ಮನೆಯ ಮುಂದೆ ಕೈ ಚಾಚಿ ನಿಲುವ ಪರಿಸ್ಥಿತಿಗೆ ಇಲ್ಲಿನವರು ಬಂದಿದಾರೆ. ಕೇವಲ ನೇಕಾರಿಕೆಯನ್ನು ಬಿಟ್ಟು ಬೇರೆ ವೃತ್ತಿಯನ್ನು ಆರಿಯದ ಇಲ್ಲಿನವರು ತಮ್ಮ ಉಪಜೀವನಕ್ಕಾಗಿ ಬೀದಿಗೆ ಬಿದ್ದು ಕಷ್ಟಕರವಾದಂತಹ ಜೀವನ ನಾಡೆಸಬೇಕಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ನೇಕಾರಿಕೆಯನ್ನೆ ಮಾಡಿ ಪ್ರತಿ ದಿನ ಸುಮಾರು 100 ರಿಂದ 200 ರೂಪಾಯಿಗಳವರೆಗೆ ಸಂಪಾದನೆ ಮಾಡುತ್ತಿದಂತಹ ಇವರಿಗೆ ಬೆಲೆ ಏರಿಕೆಯ ಪರಿಣಾಮವಾಗಿ ನಿತ್ಯದ ಜೀವನ ಕಷ್ಟಕರವಾಗಿದೆ. ವಯಸ್ಕರು ಕೂಡ ಇಲ್ಲಿ ವೃದ್ಧರಂತೆ ಆಗಿ ಬಿಟ್ಟಿದ್ದಾರೆ.  
ವಲಸೆ: ಇಲ್ಲಿನ ಚಂಡರಕಿ ಗ್ರಾಮದಲ್ಲಿನ ಸುಮಾರು 30ಕ್ಕೂ ಹೆಚ್ಚು ನೇಕಾರ ಮನೆತನಗಳು ಇಂದು ನೇಕಾರಿಕೆಯಿಂದ ಬಂದಿರುವ ಹಣದಿಂದ ಸಂಸಾರ ನಡೆಸಲಾಗದೆ ಇರುವ ಹಿನ್ನಲೆಯಲ್ಲಿ ಗ್ರಾಮವನ್ನು ಬಿಟ್ಟು ಮಹಾರಾಷ್ಟ್ರ, ಆಂಧ್ರ ಪ್ರದೇಶ, ಬೆಂಗಳೂರು, ಗುಜರಾತ್, ಪುಣೆಗಳಂತಹ ಪಟ್ಟಣಗಳಿಗೆ ವಲಸೆ ಹೋಗಿದ್ದಾರೆ. ಇದರಿಂದಗಿ ಸಂಪೂರ್ಣವಾಗಿ ಗ್ರಾಮದಲ್ಲಿನ ನೇಕಾರಿಕೆ ಮನೆಗಗಳು ಖಾಲಿಯಾಗಿವೆ. ಉಳಿದಂತೆ ಮನೆಯವರು ತಮ್ಮ ಮನೆಗಳನ್ನು ಬಿಟ್ಟು ಇರಲು ಆಗದವರು ಅಲ್ಪ ಸ್ವಲ್ಪ ನೇಕಾರಿಕೆಯಿಂದ ಜೀವನ ಸಾಗಿಸುತ್ತಿದ್ದು, ಹೆಣ್ಣು ಮಕ್ಕಳು ಕೂಲಿ ಮಾಡಿಕೊಂಡು ಬಂದ ಹಣದಿಂದ ದುಸ್ತರ ಬದುಕನ್ನು ಸಾಗಿಸುತ್ತಿದ್ದಾರೆ.
ಕೂಲಿಯಲ್ಲಿ ಮಕ್ಕಳು: ಇಲ್ಲಿನ ನೇಕಾರರು ಜೀವನ ನಡೆಸಲು ಆಗದೆ ಇರುವುದರಿಂದ ತಾವು ಬಸ್ ನಿಲ್ದಾಣದಲ್ಲಿ ಕೂಲಿ ಕೆಲಸ ಮತ್ತು ರಸ್ತೆ ಪಕ್ಕದಲ್ಲಿ ಸರಕು ಮಾರಾಟ ಮಾಡುತ್ತಿದ್ದಾರೆ.
ತಮ್ಮ ಅಪ್ರಾಪ್ತ ಮಕ್ಕಳನ್ನು ಹೊಟೇಲ್ ಸೇರಿದಂತೆ ವಿವಿಧ ಖಾಸಗಿ ಅಂಗಡಿಗಳಲ್ಲಿ ದುಡಿಮೆಗೆ ಹಚ್ಚಿದ್ದಾರೆ.  ಶಾಲೆ ಸೇರಿ ಆಟವಾಡುತ್ತ ಕಲಿಯಬೇಕಾಗಿರುವ ಮಕ್ಕಳು ಇಂದು ಒಳ್ಳೆಯ ವಿದ್ಯಾಭ್ಯಾಸವೆಂಬ ವಿಷಯವನ್ನೇ ಮರೆಯುವಂತಾಗಿದೆ. ಕೂಲಿಗಾಗಿ ಇಲ್ಲಿನ 100ಕ್ಕೆ 85 ನೇಕಾರರ ಮಕ್ಕಳು ಗುರುಮಠಕಲನ ಹೋಟೆಲಲ್ಸೇರಿದಂತೆ ವಿವಿದ ಖಾಸಗಿ ಅಂಗಡಿಗಳಲ್ಲಿ ದುಡಿಯುತಲ್ಲಿದಾರೆ.
ಸರಕಾರ ಗಮನ ಹರಿಸಲಿ: ನೇಕಾರಿಕೆಯನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿದ ಜನತೆ ಇಂದು ನೇಕಾರಿಕೆಗೆ ಸರಿಯಾದ ಪ್ರೋತ್ಸಹ ಇಲ್ಲದೆ ಮತ್ತು ಇರುವ ಕಸಬು ನೇಯ್ಗೆಯಿಂದ ಬಂದ ಹಣದಿಂದ ಜೀವನ ಸಾಗಿಸಲು ಆಗದೆ ಇರುವುದರಿಂದ ಸರಕಾರಕ್ಕೆ ಆನೇಕ ಭರಿ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ನಿಡುವ ಬಗ್ಗೆ ಮನವಿ ಮಾಡಿದರು ಇದರ ಕಡೆ ಗಮನ ಹಾರಿಸುವವರೆ ಇಲ್ಲದರಿಂದಾಗಿ ಇಲ್ಲಿನ ಜನತೆ ಗ್ರಾಮಗಳನ್ನು ಬಿಟ್ಟು ಬೇರೆ ರಾಜ್ಯಗಳಿಗೆ ವಲಸೆ ಹೊಗುತ್ತಿದ್ದಾರೆ.
ಅಧಿಕಾರಿಗಳಿಂದ ನೋಟಿಸ್: ನೇಕಾರಿಗೆ ಸರಿಯಾದ ವ್ಯವಸ್ಥೆಗಳಲ್ಲಿದೆ ಇರುವುದರಿಂದ ಇಲ್ಲಿನ  ನೇಕಾರರು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಪಡೆದ ಎಚ್‌ಡಿಎಫ್‌ಸಿ ಯೋಜನೆ ಆಡಿಯಲ್ಲಿ ವಸತಿಗಳಿಗಾಗಿ ಪಡೆದಿರುವ  ಹಣವನ್ನು ಇಂದು ತೀರಿಸಲು ಆಗುತ್ತಿಲ್ಲ. ಹಣವನ್ನು ಹಿಂತಿರುಗಿಸಲು ಅಧಿಕಾರಿಗಳಿಂದ ನೋಟಿಸ್‌ಗಳು ಬರುತಲ್ಲಿವೆ. ಅದರೆ ಕೈಯಲ್ಲಿ ಕೈಮಗ್ಗ ಕೆಲಸವಿಲ್ಲದೆ ಕೆಲಸವನ್ನು ಕಳ್ಳೆದುಕೊಂಡಿರುವ ಇವರು ಹತಾಶಗೊಂಡಿದ್ದಾರೆ.
ಸಚಿವರು ಗಮನ ಹರಿಸಲಿ: ಸಿದ್ದರಾಮಯ್ಯ ಸಂಪುಟದಲ್ಲಿ ಜವಳಿ ಖಾತೆ ಸಚಿವರಾಗಿದ ಬಾಬೂರಾವ್ ಚಿಂಚನಸೂರ ಅವರು ಸಚಿವರಾಗಿ ಅಧಿಕಾರ ಸ್ವೀಕಾರಿಸಿದ ಪ್ರಥಮದಿನವೇ ಗುರುಮಠಕಲ್ ಮತಕ್ಷೇತ್ರದಲ್ಲಿ 1 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜವಳಿ ಪಾರ್ಕ್ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದರು. ಗುರುಮಠಕಲ್ ಕ್ಷೇತ್ರದ 5ಕ್ಕೂ ಹೆಚ್ಚಿನ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಅಧಿಕಾರಿಗಳ ಜೊತೆಯಲ್ಲಿ ಚರ್ಚಿಸಿರುವುದು ಆಶಾದಾಯಕ ಸಂಗತಿಯಾಗಿದೆ.
ಇಲ್ಲಿನ ನೇಕಾರ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಿಕೊಡುವ ಬಗ್ಗೆ ಗಮನ ಹರಿಸಿಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ನೇಕಾರರಿಗೆ ಕಲ್ಪಿಸಿ, ಅವರು ಪಡೆದಿರುವ ಸಾಲವನ್ನು ಮನ್ನಾ ಮಾಡುವ ಬಗ್ಗೆ ಗಮನಹರಿಸಬೇಕಾಗಿದೆ. ತಮ್ಮ ಕಷ್ಟಗಳಿಗೆ ಇಲ್ಲಿನವರೇ ಆದ ಚಿಂಚಸನೂರ್ ಸ್ಪಂದಿಸುವರು ಎನ್ನವುದು ನೇಕಾರರ ಆಶಾ ಕಿರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.