ಗುಲ್ಬರ್ಗಾ

ಚಿಂಚನಸೂರ್ಗೆ ತವರಲ್ಲಿ ಸನ್ಮಾನ

Published On :

ಗುರುಮಠಕಲ್: ಗುರುಮಠಕಲ್ ಮತಕ್ಷೇತ್ರದಿಂದ ಎರಡನೇ ಬಾರಿ ಗೆಲವು ಸಾಧಿಸುವುದರ ಮೂಲಕವಾಗಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಜವಳಿ, ಬಂದರು, ಒಳನಾಡು ಜಳಸಾರಿಗೆ ಸಚಿವರಾದ ನಂತರ ಪ್ರಥಮ ಬಾರಿಗೆ ಗುರುಮಠಕಲ್ ಮತಕ್ಷೇತ್ರಕ್ಕೆ ಆಗಮಿಸಿದಂತಹ ಸಚಿವ ಬಾಬೂರಾವ ಚಿಂಚನಸೂರ ಅವರಿಗೆ ಗುರುಮಠಕಲ್ ಕಾಂಗ್ರೆಸ್ ಕಮಿಟಿಯ ವತಿಯಿಂದ ಅದ್ಧೂರಿಯಾಗಿ ಸನ್ಮಾನಿಸಲಾಯಿತು.
ಗುರುಮಠಕಲ್ ಪಟ್ಟಣಕ್ಕೆ ಆಗಮಿಸಿದಂತಹ ಸಚಿವರನ್ನು ತೆರೆದ ವಾಹನದಲ್ಲಿ ವಿಶೇಷ ತಹಸೀಲ್ದಾರ್ ಕಾರ್ಯಲಯದ ಮೂಲಕವಾಗಿ ಗಾಂಧಿ ಮೈದಾನದವರೆಗೆ ಮೆರವಣಿಗೆ ಮೂಲಕ ಸ್ವಾಗತಿಸಿಕೊಂಡು ನಂತರ ಏರ್ಪಡಿಸಿದ ಅಭಿನಂದನ ಸಭೆಯಲ್ಲಿ ಬಾಬೂರಾವ ಅವರನ್ನು ಸನ್ಮಾನಿಸಿ ಸತ್ಕರಿಸಲಾಯಿತು.
ಸತ್ಕಾರ ಸ್ವೀಕರಿಸಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಅವರು ಗುರುಮಠಕಲ್ ಮತಕ್ಷೇತ್ರವು ಕಾಂಗ್ರೆಸ್ ಪಕ್ಷದ ಭದ್ರ ಬೂನಾದಿಯಿದಂತೆ ಇಲ್ಲಿನ ಜನತೆ ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ದಕ್ಕೆಯಾಗದಂತೆ ನೊಡಿಕೊಳ್ಳಲಾಗುವುದು ಎಂದ ಅವರು ಕಳೆದ 35 ವರ್ಷಗಳ ಕಾಲ ಕೇಂದ್ರ ಕಾರ್ಮಿಕ ಸಚಿವರಾದ ಮಲ್ಲಿಕಾರ್ಜುನ ಖರ್ಗೆಯವರನ್ನು, ಅವರ ನಂತರದಲ್ಲಿ ನಾನನ್ನು ಕೂಡ ಆರ್ಶಿದಿಸಿದ್ದಿಸಿರಿ ನಿಮ್ಮೆಲ್ಲರ ಆರ್ಶಿವಾದದದ ಫಲವಾಗಿ ನಾನು ರಾಜ್ಯದ ಸಚಿವನಾಗಿದೆ. ನೀವು ನನ್ನ ಮೇಲೆ ಇಟ್ಟ ಭರವಸೆಗೆ ಧಕ್ಕೆಯಾಗದಂತೆ ನೊಡಿಕೊಳ್ಳುತ್ತೇನೆ ಎಂದರು.
 ಜಿಪಂ ಉಪಧ್ಯಕ್ಷ ಶ್ರೇಣಿಕ ಕುಮಾರ ದೋಖಾ, ಜಿಪಂ ಸದಸ್ಯರಾದ ಭೀಮರಾಯ ಕಂದಕೂರ, ಚನ್ನಬಸಮ್ಮ, ಜಿಲ್ಲಾ ಕಾಂಗ್ರೆಸನ ಚಿದನಾಂದಪ್ಪ, ಭೀಮರಡ್ಡಿ ಶೆಟ್ಟಳ್ಳಿ, ಬ್ಲಾಕ್ ಅಧ್ಯಕ್ಷರಾದ ಮಹಿಪಾಲ ರಡ್ಡಿ ಹತ್ತಿಕುಣಿ, ವಿಶ್ವನಾಥ ನಿಲಹಳ್ಳಿ, ತಾಪಂ ಅಧ್ಯಕ್ಷರಾದ ಶ್ರೀಲಕ್ಷ್ಮೀ, ಸಾವಿತ್ರಮ್ಮ, ಪ್ರಕಾಶ ರಡ್ಡಿ, ದೇವಿಂದ್ರಪ್ಪ ಗುತ್ತೇದಾರ ಕೊಟಗೇರಾ, ಮಾರುತಿ ದುಪ್ಪಳ್ಳಿ, ಎಪಿಎಂಸಿ ಸದಸ್ಯರಾದ ವೆಂಕಟರಾಮುಲು ಗೌಡ ಪುಟಪಾಕ, ರಘುನಾಥ ರಡ್ಡಿ ನಜಾರಪುರ, ರವೀಂದ್ರ ರಡ್ಡಿ, ಬಸವರಾಜಪ್ಪ ಬಾಗ್ಲಿ, ಹಣಮಂತಪ್ಪ ಬಳಿಚಕ್ರ, ಶರಣಪ್ಪ ಮೋಟ್ನಳ್ಳಿ, ಮಾಜಿ ಜಿಪಂ ಸದಸ್ಯ ಕೃಷ್ಣಾ ಚಪೆಟ್ಲಾ, ಸಾಯಿಬಣ್ಣ ಬೋರಬಾಂಡ, ಅನ್ನಪೂರ್ಣ ವೀರಪ್ಪ ಪ್ಯಾಟಿ, ವಿಜಯ ಲಕ್ಷ್ಮೀ ಕೊಟಕೊಂಡಿ, ಬಾಲಪ್ಪ ನಿರೇಟಿ, ಆಕ್ತಾರ, ಚಾಂದ ಪಾಷ, ಶರಣಯ್ಯ ಕಲಾಲ್, ಅಣ್ಣರಾವ ಮುತ್ತಟಿ, ಪ್ರಕಾಶ ನಿರೇಟಿ, ಲಿಂಗಪ್ಪ, ದೇವಿಂದ್ರಪ್ಪ ಗುತ್ತೇದಾರ ರಾಚನಳ್ಳಿ, ನಾರಾಯಣ ಚಂಡರಕಿ, ಆರ್.ಬಸವರಾಜ ದಳಪತಿ, ಶ್ಯಾಮಪ್ಪ ಚಂಡರಕಿ, ನರಸಿಂಹುಲು ನಿರೇಟಿ ಸೇರಿದಂತೆ ಪಕ್ಷದ ಪ್ರಮುಖರು ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.