ನೇಕಾರರ ಬೇಡಿಕೆಗೆ ಸ್ಪಂದಿಸಲು ತಂಬಕರ್ ಭರವಸೆ
ಕ.ಪ್ರ. ವಾರ್ತೆ, ಆಳಂದ, ಮೇ 24
ಸಂಕಷ್ಟದಲ್ಲಿರುವ ರಾಜ್ಯ ಕೈಮಗ್ಗ ನೇಕಾರರ ಬೇಡಿಕೆ ಸರ್ಕಾರದೊಂದಿಗೆ ಚರ್ಚಿಸಿ ಈಡೇರಿಸಲಾಗುವುದು ಎಂದು ಹುಬ್ಬಳ್ಳಿ ಕೇಂದ್ರ ಕಚೇರಿಯ ಕೈಮಗ್ಗ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ತಂಬಕರ್ ಭರವಸೆ ನೀಡಿದರು.
ಪಟ್ಟಣದ ನೇಕಾರರ ಬಡಾವಣೆಗೆ ಶುಕ್ರವಾರ ಭೇಟಿ ನೀಡಿದ ಬಳಿಕ ನೇಕಾರರ ಬಾಂಧವರೊಂದಿಗೆ ಚರ್ಚಿಸಿ ಮಾತನಾಡಿ, ಕೈಮಗ್ಗ ನಿಗಮದ ತಾಲೂಕು ಹೋಬಳಿ ಮಟ್ಟದ ಕೇಂದ್ರಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಿಂಗಳಿಗೆ ಕನಿಷ್ಠ ನಾಲ್ಕು ಬಾರಿಯಾದರೂ ಭೇಟಿ ನೀಡಿ ನೇಕಾರರ ಕುಂದುಕೊರತೆ ಆಲಿಸಬೇಕು ಎಂದು ತಾಕೀತು ಮಾಡಿದರು.
ಬೇಡಿಕೆಗೆ ಒತ್ತಾಯ: ನೇಕಾರರ ಮನೆಗಳಿಗೆ ಪ್ರತ್ಯೇಕ ಶೌಚಾಲಯ, ಎರಡು ಕಿ.ಮೀ. ಅಂತರದಲ್ಲಿರುವ ನಿಗಮದ ಕಚೇರಿಯನ್ನು ಬಡಾವಣೆಯಲ್ಲೇ ಸ್ಥಳಾಂತರಿಸಬೇಕು. ಮನೆ ಸಾಲ ಮುನ್ನಾ ಮಾಡಿ ಹಕ್ಕುಪತ್ರ ನೀಡಬೇಕು. ಬಾಕಿ 17 ಮಂದಿ ನೇಕಾರರಿಗೆ ನಿವೇಶನ ಒದಗಿಸಿ ಮನೆ ಕಟ್ಟಿಕೊಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ನೇಕಾರ ಮುಖಂಡ ಸಿದ್ಧಾರೂಢ ಚ. ಸನಗುಂದಿ ಅವರು ಈಡೇರಿಸುವಂತೆ ನಿರ್ದೇಶಕರಿಗೆ ಒತ್ತಾಯಿಸಿದರು.
ನೇರವಾಗಿ ಸಂಪರ್ಕಿಸಿ: ಸುದೀರ್ಘವಾಗಿ ಪ್ರತಿಯೊಬ್ಬ ನೇಕಾರರ ಎಲ್ಲ ಬೇಡಿಕೆ ಎದುರಾದ ಸಮಸ್ಯೆ ಆಲಿಸಿದ ನಿರ್ದೇಶಕರು ಅಧಿಕಾರಿಗಳು ಸ್ಪಂದಿಸದೆ ಹೋದಲ್ಲಿ ನೇರವಾಗಿ ತಮಗೆ ಸಂಪರ್ಕಿಸಲು ತಿಳಿಸಿದರು.
ನಿಗಮದ ಗುಲ್ಬರ್ಗ ಉತ್ಪಾದನೆ ವ್ಯವಸ್ಥಾಪಕ ಮಾನವಿ, ಯೋಜನಾ ಆಡಳಿತಾಧಿಕಾರಿ ಸಿ.ಬಿ. ನಿಂಬೆಣಿ, ನಂದರ್ಗಿ ಎಸ್, ನೇಕಾರರ ಕಲ್ಯಾಣಾಧಿಕಾರಿ ಚ. ಬಿರಾದಾರ, ಸ್ಥಳೀಯ ಶಾಖಾಧಿಕಾರಿ ಶ್ರೀನಿವಾಸ ಪ್ರಸಾದ ಹಾಜರಿದ್ದರು.
ನೇಕಾರ ಮುಖಂಡ ಸಿದ್ಧಾರೂಢ ಚ. ಸನಗುಂದಿ, ಕಲ್ಯಾಣಪ್ಪ ದೊಡ್ಮನಿ, ಅಯೂಬ್ ಅಲಿ ಜಮಾದಾರ, ಈರಣ್ಣ ಆರ್. ಜಾಲದೆ, ಅಂಬಲಿ ಕಿಚಡೆ, ಮಹಾನಂದ ದೊಡ್ಮನಿ, ಕಸ್ತುರಬಾಯಿ ಜಾಲದಿ, ಸಿದ್ದಮ್ಮ ಚಂದ್ರಕಾಂತ, ಬಾಬು ಶೇಖ ಕಲ್ಲೂರ ಇತರರು ನಿರ್ದೇಶಕರೊಂದಿಗೆ ನೇರವಾಗಿ ಮಾತನಾಡಿ ಸಮಸ್ಯೆ ತೋಡಿಕೊಂಡರು.
ಬೇಡಿಕೆ ಈಡೇರಿಕೆಗೆ ಭರವಸೆ
ಬೇಡಿಕೆ ಆಲಿಸಿದ ನಿರ್ದೇಶಕ ತಂಬಕರ್ ಅವರು, ನೇಕಾರರ ಬಡಾವಣೆಯಲ್ಲೇ ಜೂನ್ ಒಂದರ ಒಳಗೆ ನಿಗಮದ ಕಚೇರಿ ಸ್ಥಳಾಂತರಿಸಲು ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದ್ದರಲ್ಲದೆ, ತಿಂಗಳಲ್ಲೇ ಶೌಚಾಲಯ ಕಟ್ಟಿಕೊಡಬೇಕು. ಸಮಯಕ್ಕೆ ವೇತನ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನೇಕಾರರು ಪಡೆದ ಸಾಲದ ಮೇಲಿನ ಬಡ್ಡಿ ಕಟ್ಟಬಾರದು, ಈಗಾಗಲೇ ನಿಗಮವೇ ಭರಿಸುತ್ತಿದೆ. ಪ್ರತಿ ತಿಂಗಳ ಕೇಂದ್ರಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ನಿರಂತರವಾಗಿ ಭೇಟಿ ನೀಡಿ ಕುಂದುಕೊರತೆ ಆಲಿಸಿ ಸಮಸ್ಯೆ ನಿವಾರಿಸಬೇಕು. ತಿಂಗಳೊಳಗೆ ಮನೆಗಳ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದಾಗ ಹಾರಿದ್ದ ನೇಕಾರ ಮುಖದಲ್ಲಿ ನೆಗೆಚಿಮ್ಮಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

