ಗುಲ್ಬರ್ಗಾ

ನೇಕಾರ ಸಮುದಾಯಕ್ಕೆ 13 ಲಕ್ಷ ಅನುದಾನ

Published On :

ಕನ್ನಡಪ್ರಭ ವಾರ್ತೆ ,  ಗುಲ್ಬರ್ಗ ,  ಮೇ 25
ನಿರ್ಲಕ್ಷ್ಯಕೊಳಪಟ್ಟ ನೇಕಾರ ಸಮುದಾಯಕ್ಕೆ ವಿವಿಧ ಮೂಲಗಳಿಂದ ಒಟ್ಟು ರು. 13 ಲಕ್ಷ ಅನುದಾನ ಒದಗಿಸುವುದಾಗಿ ಕೇಂದ್ರದ ಉದ್ಯೋಗ ಮತ್ತು ಕಾರ್ಮಿಕ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡಿದರು.
ನಗರದ ಜಾಫರಾಬಾದ್ ವರ್ತುಲ ರಸ್ತೆಯ ದೇವರ ದಾಸಿಮಯ್ಯ ನಗರದಲ್ಲಿ ಜಿಲ್ಲಾ ದೇವಾಂಗ ಹಟಗಾರ ಸಮಾಜದಿಂದ ಏರ್ಪಡಿಸಲಾಗಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತ್ಯುತ್ಸವ ಮತ್ತು ವಧು-ವರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭರವಸೆ: ಸಂಸದರ ಅನುದಾನದಿಂದ ಐದು ಲಕ್ಷ ರು., ಸ್ಥಳೀಯ ಶಾಸಕರ ನಿಧಿಯಿಂದ ರು. 5 ಲಕ್ಷ ಮತ್ತು ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಕನಿಷ್ಟ ರು. ಮೂರು ಲಕ್ಷ ಸೇರಿದಂತೆ ಒಟ್ಟು ರು. 13 ಲಕ್ಷ ಅನುದಾನವನ್ನು ನೇಕಾರ ಸಮಾಜ ಅಭಿವೃದ್ಧಿಗಾಗಿ ನೀಡುವುದಾಗಿ ಅವರು ಭರವಸೆ ನೀಡಿದರು.
ಗುಳೇದಗುಡ್ಡ ಜಗದ್ಗುರು ಗುರುಸಿದ್ದೇಶ್ವರ ಬ್ರಹನ್ಮಠದ ಜಗದ್ಗುರು ಬಸವರಾಜ ಪಟ್ಟದಾರ್ಯ ಸ್ವಾಮಿ, ಅಕ್ಕಲಕೋಟ ಚಿಕ್ಕರೇವಣಸಿದ್ಧ ಶಿವಶರಣ ಸ್ವಾಮೀಜಿ, ಮೈಂದರ್ಗಿಯ ರೇವಣಸಿದ್ಧ ಶಿವಶರಣ ಪಟ್ಟದೇವರು, ಸಿದ್ಧಾರೂಢ ಆಶ್ರಮದ ಶಿವಲಿಂಗಾನಂದ ವಿರಕ್ತಮಠ, ಆಳಂದ ಶರಣಮಠದ ಸದಾನಂದ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್, ಸೈಯದ್ ಸಜ್ಜಾದ್ ಅಲಿ ಇನಾಮದಾರ, ಅಲಿಮೊದ್ದಿನ್ ಪಟೇಲ್, ಚಂದ್ರಕಾಂತ ಮಾಡಗೆ, ಡಾ.ಘಂಟೆಪ್ಪ ಭುರಳೆ, ಧೂಳಪ್ಪ ಸುಂಠನೂರೆ, ಗುರುನಾಥ ಸನ್ಮುಖೆ, ಸೂರ್ಯಕಾಂತ ತಟ್ಟೆ, ರಾಮಣ್ಣ ಕಣ್ಣಿ,  ಗುರುಸಂಗಪ್ಪಗೌಡ ಪಾಟೀಲ್, ರಮೇಶ ಮಾಳಾ, ಮಲ್ಲಿಕಾರ್ಜುನ ಮಡ್ಡೆ, ಸಿದ್ಧಾರೂಢ ಬಿಜ್ಜರಗಿ ಉಪಸ್ಥಿತರಿದ್ದರು.
ವಧು-ವರರ ಪರಿಚಯ: ಜಿಲ್ಲಾ ದೇವಾಂಗ ಹಟಗಾರ ಸಮಾಜ ಅಧ್ಯಕ್ಷ ಚಂದ್ರಶೇಖರ ಸುಲ್ತಾನಪುರ ಸ್ವಾಗತಿಸಿದರು. ಕಾರ್ಯದರ್ಶಿ ರುದ್ರಪ್ಪ ಗಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣ ಧುತ್ತರಗಿ ನಿರೂಪಿಸಿದರು. ನಂತರ ನಡೆದ ಸಮಾವೇಶದಲ್ಲಿ 66 ವಧು-ವರರು ಪರಿಚಯಿಸಿಕೊಂಡರು.
ಪ್ರತಿಭಾ ಪುರಸ್ಕಾರ: ವನಜಾಕ್ಷಿ ಕಲಗುಂಡಿ ನೇತೃತ್ವದಲ್ಲಿ ನಡೆದ ಪ್ರತಿಭಾ ಪುರಸ್ಕಾರದಲ್ಲಿ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ನೇಕಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಾದ ಅವಿನಾಶ ಈರಣ್ಣ ನಾಗೂರೆ, ಶ್ರೀಶೈಲ್ ಸಿದ್ದಪ್ಪ ತಪಲೆ, ರೇವಣಸಿದ್ಧ ಶಿವಶರಣಪ್ಪ ಮನಗುಂಡೆ ಹಾಗೂ ಪಿಯುಸಿಯಲ್ಲಿ ಅಂಜಲಿ ರಾಜಶೇಖರ ಭಾವಿ, ಅಂಬರೀಶ ಬಸವರಾಜ ಬೇಲಿ, ಅಜಯಕುಮಾರ ಈರಣ್ಣ ನಾಗೂರೆ ಅವರನ್ನು ಪುರಸ್ಕರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.