ಗುಲ್ಬರ್ಗಾ

ಬದುಕಿಗೆ ಶರಣರ ನಡೆ, ನುಡಿ ದಾರಿ

Published On :

ಗುಲ್ಬರ್ಗ/ಶಹಾಬಾದ್: ಶರಣರು, ಸಂತರು ತಮ್ಮ ಜೀವನವನ್ನು ಸಮಾಜದ ಒಳಿತಿಗಾಗಿ ಮುಡಿಪಾಗಿಟ್ಟರು. ಅವರ ನುಡಿ, ನಡೆ ನಮ್ಮ ಬದುಕಿಗೆ ದಾರಿಯಾಗಿದ್ದು, ಅಂಥ ಶರಣ, ಸಂತರಲ್ಲಿ ಮುಗುಳನಾಗಾವದ ಲಿಂ. ಸಿದ್ದಲಿಂಗ ಶಿವಯೋಗಿಗಳು ಒಬ್ಬರಾಗಿದ್ದರು ಎಂದು ಸಿದ್ದಲಿಂಗ ಶಿವಾಚಾರ್ಯರು ಹೇಳಿದರು.
  ಮುಗುಳನಾಗಾವ ಕಟ್ಟಿಮನಿ ಹಿರೇಮಠದ ಲಿಂ.ಸಿದ್ದಲಿಂಗ ಶಿವಯೋಗಿಗಳ 64ನೇ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತ ಜಗತ್ತಿನ ಚರಾಚರ ವಸ್ತುಗಳು ಭಗವಂತ ಅಣತಿಯಂತೆ ಕಾರ್ಯನಿರ್ವಹಿಸುತ್ತವೆ, ಜಗತ್ತಿನ ಎಲ್ಲವನ್ನು ನಿಯಂತ್ರಿಸುವ ಶಕ್ತಿಯಾಗಿ ಭಗವಂತನಿದ್ದಾನೆ ಎಂದರು.
  ಧರ್ಮಸಭೆಯ ಅಧ್ಯಕ್ಷತೆ ವಹಿಸಿದ್ದ ರಾವೂರನ ಸಿದ್ದಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡುತ್ತ, ಮಾನಸಿಕ ಜಂಜಡಗಳಿಂದ ಬಳಲುತ್ತಿರುವ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರಲ್ಲಿ ಮಾನಸಿಕ ಶಕ್ತಿಯನ್ನು ತುಂಬುವ ಕೆಲಸವನ್ನು ಮುಗುಳನಾಗಾವ ಶ್ರೀಗಳು ಮಾಡುತ್ತಿದ್ದು, ಕೇವಲ ಮಠವನ್ನು ಕಟ್ಟುವ ಕೆಲಸವನ್ನು ಮಾಡದೆ ಶ್ರೀಗಳು ಇಂದು ಭಕ್ತರ ಮನಸ್ಸನ್ನು ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
  ಗುಲ್ಬರ್ಗ ಸುಲಫಲ ಮಠದ ಮಹಾಂತ ಶಿವಾಚಾರ್ಯರು, ಬೆಳಗಾವಿ ನಾಗಭೂಷಣ ಸ್ವಾಮೀಜಿ, ಸೊನ್ನದ ಶಿವಾನಂದ ಸ್ವಾಮೀಜಿ, ಶ್ರೀನಿವಾಸ ಸರಡಗಿಯ ಅಪ್ಪಾರಾವ ದೇವಿಮುತ್ಯಾ, ರಾಜಶೇಖರ ದೇವರು, ಹೊನಗುಂಟಾದ ಸಿದ್ದಲಿಂಗ ದೇವರು, ಶಿರಸ್ಯಾಡ, ಅವರಾದ, ಕಟಣಿ, ಪೇಠಶಿರೂರ, ಬೆನಕನಳ್ಳಿ, ಐನಾಪುರ ಶ್ರೀಗಳು ಪಾಲ್ಗೊಂಡಿದ್ದರು.
  ಸಿದ್ದರಾಮ ಪೊಲೀಸ್ ಪಾಟೀಲ್ ಕುಕನೂರ, ಜ್ಞಾನೇಶಕುಮಾರ ಬೆಳಕೂಟರವರಿಗಂದ ಸಂಗೀತ, ಶಹಾಬಾದ್ ಅಲ್ಸಟಾಮ್ ಕಾಲೋನಿಯ ನಾಟ್ಯನಿಕೇತನ ನೃತ್ಯ ಕೇಂದ್ರದಿಂದ ನೃತ್ಯ ಕಾರ್ಯಕ್ರಮಗಳು ನಡೆದವು. ಅನೀಲಕುಮಾರ ಇಂಗಿನಶೆಟ್ಟಿ, ಮಲ್ಲಿಕಾರ್ಜುನ ರೆಡ್ಡಿ ಇಜೇರಿ, ರೇವಣಸಿದ್ದಪ್ಪ ಮಾಸ್ತರ, ಶರಣಯ್ಯ ಕಲಾಲ್, ರವಿಕುಮಾರ ಅಲ್ಲಮಶೆಟ್ಟಿ, ಶಿವಶರಣಪ್ಪ ಪಾಟೀಲ್ ಬೇಲೂರ, ಮೃತ್ಯುಂಜಯ ಸ್ವಾಮಿ ಹಿರೇಮಠ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.