ಕನ್ನಡಿಗರೇ ಮಿಸಲಾತಿ ಕೇಳಬೇಕಾಗಿದೆ: ಖಂಡ್ರೆ
ಯಾದಗಿರಿ: ಉದ್ಯೋಗ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿ ಕನ್ನಡಿಗರೇ ಮಿಸಲಾತಿ ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳವಳಕಾರಿ ಸಂಗತಿ ಎಂದು ಜಿಪಂ ವಿರೋಧ ಪಕ್ಷದ ನಾಯಕ ಬಸವರಾಜ ಖಂಡ್ರೆ ಹೇಳಿದರು.
ತಾಲೂಕಿನ ಠಾಣಗುಂದಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದಲ್ಲಿ ಖಾಸಗಿ ಕಂಪನಿಗಳು ನೆಲದ ಋಣ ತೀರಿಸಲು ಸ್ವಯಂ ಹಿತಾಸಕ್ತಿ ತಾಳಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಮುಂದೆ ಬರಬೇಕು. ಇಲ್ಲಿನ ನೆಲ, ಜಲ ರಕ್ಷಣೆಗೆ ಕನ್ನಡಪರ ಸಂಘಟನೆಗಳು ಒಗ್ಗೂಡಿ ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗೆ ಹೋರಾಟ ಮಾಡುವ ಮೂಲಕ ಜನ ಸಾಮಾನ್ಯರ ರಕ್ಷಣೆಗೆ ಮುಂದಾಗಬೇಕು.
ಸ್ವಾವಲಂಬಿ ಜೀವನ ಯುವಕರ ಪ್ರೇರಣೆಯಾಗಬೇಕು. ಇಳಿವಯಸ್ಸಿನಲ್ಲಿಯೂ ಇಂದಿಗೂ ಕೆಲವು ಪಾಲಕರು ತಮ್ಮ ಮಕ್ಕಳನ್ನು ಸಾಕಲು ಪ್ರಯಾಸ ಪಡುತ್ತಿರುವುದನ್ನು ನಾವು ಸಮಾಜದಲ್ಲಿ ಕಾಣುತ್ತೇವೆ. ಅಂತವರಿಗೆ ಮಾನಸಿಕ ಸ್ಥೈರ್ಯ ತುಂಬಿ ಅವರಿಗೆ ನೆರವಾಗುವ ಮೂಲಕ ಕರವೇ ಕಾರ್ಯಕರ್ತರು ಸಮಾಜದ ಅಭಿವೃದ್ಧಿಗೆ ಸ್ಪಂದಿಸಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಕರವೇ ಕಾರ್ಯಕರ್ತರು ಹೋರಾಟಕ್ಕೆ ಇಳಿಯುವ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಗೋವಿಂದಪ್ಪ ಮೂಲಿಮನಿ ಮಾತನಾಡಿ, ಯಾದಗಿರಿ ತಾಲೂಕಿನಲ್ಲಿ ಅರ್ಧಕ್ಕೂ ಹೆಚ್ಚು ಭಾಗ ಆಂಧ್ರದ ಗಡಿಗೆ ಹೊಂದಿಕೊಂಡಿರುವುದರಿಂದ ಗಡಿ ಭಾಗದ ಗ್ರಾಮಗಳಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ಹೋರಾಟ ಹಮ್ಮಿಕೊಳ್ಳುವ ಮೂಲಕ ಆ ಜನರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಹೇಳಿದರು.
ಕಾರ್ಯಕ್ರಮದ ಧ್ವಜಾರೋಹಣವನ್ನು ಕರವೇ ತಾಲುಕಾಧ್ಯಕ್ಷ ವೆಂಕಟೇಶ ಮಿಲ್ಟ್ರಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಚನ್ನಬಸವರಡ್ಡಿ ಪಾಟೀಲ, ಪರ್ವತಪ್ಪ ಸಂಗನಮನಿ, ಸಣ್ಣ ಸಾಬಯ್ಯ, ಗಂಗಪ್ಪ ಸಜ್ಜನ್, ತಿಮ್ಮಣ್ಣ ನಾಯಕ, ಮಹಾವೀರ ಲಿಂಗೇರಿ, ಮಲ್ಲು ವರ್ಕನಳ್ಳಿ, ದಶರಥ ರಾಠೋಡ, ಶಿವು ಪಾಟೀಲ ಕಾನಗಡ್ಡ, ಮಲ್ಲು ರಾಮಸಮುದ್ರ, ಶಾಂತರಾಜ ಹೊಸಮನಿ, ಯೇಸುಮಿತ್ರ ಕ್ಯಾಸಪನಳ್ಳಿ, ಶ್ಯಾಮ ತೆಲಗರ್, ವಿಜಯಕುಮಾರ, ನಿಂಗಲಿಂಗಪ್ಪ, ಯೇಸುರಾಜ, ಸಂಜಯ ಇತರರಿದ್ದರು. ಸಿದ್ದು ಲಿಂಗೇರಿ ನಿರೂಪಿಸಿ, ವಂದಿಸಿದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

