ಗುಲ್ಬರ್ಗಾ

ವೇದೇಶ ತೀರ್ಥರ ಆರಾಧನಾ ಮಹೋತ್ಸವ

Published On :

ಅಫಜಲ್ಪುರ: ತಾಲೂಕಿನ ಶ್ರೀ ಕ್ಷೇತ್ರ ಮಣ್ಣೂರದಲ್ಲಿ ಉತ್ತರಾದಿ ಮಠಾಧೀಶರಾದ 1008 ವೇದೇಶತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ ಮೂರು ದಿನ ವಿಜೃಂಭಣೆಯಿಂದ ಜರುಗಿತು.
ಪ್ರತಿದಿನ ಬೆಳಗ್ಗೆ 5ಕ್ಕೆ ಸುಪ್ರಭಾತ, 6 ಗಂಟೆಗೆ ವೇದೇಶತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಚ್ಚಾಸ್ತ್ರಾನುವಾದ ಪರೀಕ್ಷೆ, 11 ಗಂಟೆಗೆ ಅಷ್ಟೋತ್ತರ ಪಂಚಾಮೃತ ಹಸ್ತೋದಕ, ಸಂಜೆ 4 ಗಂಟೆಗೆ ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ಅನುವಾದ ಪಂಡಿತರಿಂದ ಉಪನ್ಯಾಸ, ಕಾರ್ತಿಕ ಮಾಸದ ನಿಮಿತ್ತವಾಗಿ ದೀಪೋತ್ಸವ ಜರುಗಿತು.
ಮದ್ಯಾರಾಧನೆಯಂದು ಲಕ್ಷಪುಷ್ಪಾರ್ಚನೆ, ಗುರುಗಳಿಗೆ 108 ಲೀಟರ್ ಕ್ಷಿರಾಭಿಷೇಕ, 12 ಗಂಟೆಗೆ ರಥೋತ್ಸವ, ಬಾಗಲಕೋಟದ ಚೇತನಾ ಭಜನಾ ಮಂಡಳಿಯವರಿಂದ ಹಾಗೂ ವೇದೇಶತೀರ್ಥ ಭಜನಾ ಮಂಡಳಿಯವರರಿಂದ ಭಜನೆ, ಕೋಲಾಟ ಹಾಗೂ ವಿದ್ಯಾರ್ಥಿಗಳಿಂದ ರೂಪಕ, ಸಂಜೆ 7 ಗಂಟೆಗೆ ಪಂಡಿತ-ಮದ್ವಾಚಾರ್ಯ ಮೊಕಾಶಿ, ಪಂ. ರಾಮಾಚಾರ್ಯ ಅವಧಾನಿ ಪಂ. ಅನಂತಾಚಾರ್ಯ ಅಕಮಂಚಿ, ವರದರಾಜಾಚಾರ್ಯ ಆದ್ಯ ಅವರಿಂದ ಉಪನ್ಯಾಸ ನಡೆಯಿತು.
ರಾತ್ರಿ 8 ಗಂಟೆಗೆ ಭಾಗಲಕೋಟದ ಅನಂತ ಕುಲಕರ್ಣಿ ಅವರಿಂದ ಧಾಸವಾಣಿ ಕಾರ್ಯಕ್ರಮ ಜರಗಿತು. ಉತ್ತಾರಾಧನೆಯಂದು 11 ಗಂಟೆಗೆ ಗಜ ಮಹನೋತ್ಸವ, ಸಂಜೆ 6ಕ್ಕೆ ಪಲ್ಲಕ್ಕಿ  ಉತ್ಸವ, ಭಜನೆ ಮಹಾಮಂಗಳಾರತಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.