ಗುಲ್ಬರ್ಗಾ

ಮೋಟ್ ಬ್ಯಾಂಕ್ಗಾಗಿ ಕಾಂಗ್ರೆಸ್ಸಿಂದ ಮುಸ್ಲಿಮರ ಓಲೈಕೆ: ಕೆಜೆಪಿ

Published On :

ಶಹಾಪುರ: ಕೇವಲ ವೋಟ್ ಬ್ಯಾಂಕ್ ರಾಜಕಾರಣವನ್ನೇ  ಬಂಡವಾಳವಾಗಿಟ್ಟುಕೊಂಡ ಕಾಂಗ್ರೆಸ್ ಆಡಳಿತದ ಸರ್ಕಾರ ಅಲ್ಪಸಂಖ್ಯಾತರಿಗಾಗಿ ಶಾದಿಭಾಗ್ಯ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಇದು ಇತರ ಎಲ್ಲಾ ವರ್ಗದ ಜನಸಮುದಾಯವನ್ನು ಕೆರಳಿಸಿದೆ ಎಂದು ಕೆಜೆಪಿ ತಾಲೂಕಾಧ್ಯಕ್ಷ ಭೀಮಯ್ಯಗೌಡ ಕಟ್ಟಿಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
  ಈ ಕುರಿತು ಶಾದಿಭಾಗ್ಯ ವಿರೋಧಿಸಿ ಕೆಜೆಪಿ ಪ್ರಮುಖರೊಂದಿಗೆ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು, ಯೋಜನೆಗಳಲ್ಲಿ ತಾರತಮ್ಯ ಬೇಡ. ಎಲ್ಲ ಬಡವರಿಗೂ ಅನ್ವಯವಾಗುವಂತೆ ಇರಲಿ ಎಂದು ರಾಜ್ಯಧ್ಯಕ್ಷ ಯಡಿಯೂರಪ್ಪ ನಡೆಸಿದ ಧರಣಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಸರ್ಕಾರದ ಏಕಪಕ್ಷೀಯ ನಿರ್ಣಯ ಖಂಡನೀಯ ಎಂದರು.
  ಪ್ರಮುಖರಾದ ಅಮಾತೆಪ್ಪ ಕಂದಕೂರ, ಡಾ. ಮಲ್ಲನಗೌಡ ಉಕ್ಕಿನಾಳ, ಮಲ್ಲಣ್ಣಮಡ್ಡಿ, ಸಾಹೇಬಗೌಡ ಬಿಳವಾರ, ವಿಶ್ವನಾಥರಡ್ಡಿ, ಮಾನಯ್ಯ ಹಾದಿಮನಿ, ಸಂತೋಷ ಗುತ್ತೇದಾರ, ವಸಂತಸುರಪುರ, ಬಸವರಾಜ ಆನೇಗುಂದಿ, ಶೇಖಲಾಡ್ಲೆ, ಗುರುಮದ್ದಿನ್, ಶಾಂತಪ್ಪ ಕಟ್ಟಿಮನಿ, ಶೀಲಪ್ಪ ಚಿಂಚೋಳಿ, ದೇವಿಂದ್ರ ತೋಟಿಗೇರ, ಚಂದ್ರಶೇಖರ,  ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.