ಆಳಂದದಲ್ಲೂ ನೌಕರರ ಪ್ರತಿಭಟನೆ
ಆಳಂದ: ವಜಾಗೊಳಿಸಿದ ಬಿಸಿಯೂಟ ಅಡುಗೆಯವರಿಗೆ ತಕ್ಷಣವೇ ನೇಮಕ, ಸಾದಿಲ್ವಾರು ಹಣ ಬಿಡುಗಡೆ ಎಂಬಿತ್ಯಾದಿ ಬೇಡಿಕೆ ಈಡೇರಿಸುವಂತೆ ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತೆಯರು ತಾಪಂ ಕಚೇರಿಯ ಮುಂದೆ ಪ್ರತಿಭಟನೆ ಕೈಗೊಂಡು ಆಗ್ರಹಿಸಿದರು.
ಸಂಘದ ಅಧ್ಯಕ್ಷೆ ರೇಖಾ ಸುತಾರ ನೇತೃತ್ವದಲ್ಲಿ ಪಾಲ್ಗೊಂಡ ಮಹಿಳಾ ನೌಕರರ ತಮ್ಮ ಒಟ್ಟು 16 ಬೇಡಿಕೆಗಳನ್ನು ಈಡೇರಿಸುವಂತೆ ತಾಪಂ ಇಒ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಿಲ್ಲಿಸಿದ ಸಾದಿಲ್ವಾರು ಹಣ ಮತ್ತು ಸಂಬಾವನೆ ಕೊಡಬೇಕು. ಗ್ಯಾಸ್ ಆಹಾರಧಾನ್ಯ, ಪ್ರತಿ ತಿಂಗಳ ಸಮಯಕ್ಕೆ ಒದಗಿಸಬೇಕು. ಎಲ್ಲ ಶಾಲೆಗಳಿಗೆ ಅಡುಗೆ ಪಾತ್ರೆ ವ್ಯವಸ್ಥೆ, ಕ್ಲಸ್ಟರ್ಮಟ್ಟದ ಸಭೆಯನ್ನು ಕರೆಯಬೇಕು ಎಂದು ಆಗ್ರಹಿಸಿದರು. 11 ವರ್ಷ ಕೆಲಸ ಮಾಡಿದವರಿಗೆ ಸೇವೆಯಿಂದ ತೆಗೆದು ಹಾಕುವುದು ನಿಲ್ಲಿಸಬೇಕು. ಅಗತ್ಯ ಸೇವಾ ಸೌಲಭ್ಯಗಳನ್ನು ಮತ್ತು ಪ್ರತಿ ತಿಂಗಳ ಮೊದಲು ವಾರದಲ್ಲಿ ವೇತನ ನೀಡಬೇಕು ಎಂದು ಅಧ್ಯಕ್ಷೆ ರೇಖಾ ಸುತ್ತಾರ ಆಗ್ರಹಿಸಿದರು.
ಕಾರ್ಯದರ್ಶಿ ರೇಖಾ ರಂಗನ್, ಸುನಿತಾ ಬಬಲೇಶ್ವರ, ಬೌರಮ್ಮ ಬಟ್ಟರಗಾ, ಗೌರಾಬಾಯಿ ಚಲಗೇರಾ, ವಿಜಾಬಾಯಿ ತಡಕಲ್, ಚಂದ್ರಕಲಾ ಜಿರೋಳಿ, ಶಿವಮ್ಮ ಕುಂಬಾರ, ಕಸ್ತೂರಬಾಯಿ ಕರಹರಿ, ಗೌರಾಬಾಯಿ ಚಲಗೇರಾ, ಮುಖಂಡ ಅಶೋಕ ಎಂ. ಚಟ್ಟಿ, ರಾಜಕುಮಾರ್ ಶಿವಮೂರ್ತಿ ಖಜೂರಿ, ರಾಮಮೂರ್ತಿ ಗಾಯಕವಾಡ ತಡೋಳಾ ಮತ್ತು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಪುಷ್ಪಾವತಿ ಚಟ್ಟಿ ಸೇರಿದಂತೆ ಅನೇಕ ಮಹಿಳಾ ನೌಕರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

